ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದೊಳಗೆ ನವೆಂಬರ್ ತಿಂಗಳಿನಲ್ಲಿ ಕ್ರಾಂತಿಯಾಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಭವಿಷ್ಯವನ್ನು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ನುಡಿದಿದ್ದಾರೆ.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು ಅವರು, ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ಹೀಗಾಗಿ ಕುರ್ಚಿ ಕಾಳಗ ಪ್ರಾರಂಭವಾಗಲಿದೆ. ಕಾದು ನೋಡಿ ಎಂದು ಕುತೂಹಲ ಕೆರಳಿಸಿದರು.
ಒಪ್ಪಂದದ ಪ್ರಕಾರ ನವೆಂಬರ್ ತಿಂಗಳಿಗೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಅಧಿಕಾರ ಬಿಟ್ಟುಕೊಡಬೇಕು. ಅಧಿಕಾರ ಇಲ್ಲದೆ ಸಿಎಂ ಅವರು ಒಂದೇ ಒಂದು ಕ್ಷಣವೂ ಇರಲಾರರು. ಐದು ವರ್ಷ ನಾನೇ ಅಧಿಕಾರದಲ್ಲಿ ಇರುತ್ತೇನೆ ಎಂದು ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎನ್ನುವುದರ ಮರ್ಮವೇನು! ಎಂದು ಪ್ರಶ್ನೆ ಮಾಡಿದರು.
ಡಿಕೆ ಶಿವಕುಮಾರ್ ಚಾಣಾಕ್ಷ ರಾಜಕಾರಣಿ ಅವರಿಗೆ ಎಲ್ಲಿ? ಯಾವಾಗ? ಹೇಗೆ? ಪಾನ್ ಮೂವ್ ಮಾಡಬೇಕೆಂಬುದು ಚೆನ್ನಾಗಿ ಗೊತ್ತಿದೆ ಅವರು ಸೈಲೆಂಟಾಗಿ ಇದ್ದಾರೆ ಎಂದರೆ ಅದರಲ್ಲಿ ಏನು ಇದೆ. ಎಂದರ್ಥ.ಇದರಲ್ಲಿ ಯಾವ ಅನುಮಾನವೂ ಬೇಡ. ಕಾಂಗ್ರೆಸ್ ನಲ್ಲಿ ನಡೆಯುವ ಬೆಳವಣಿಗೆಗಳನ್ನು ನೀವೇ ನೋಡುತ್ತೀರಿ. ಅಲ್ಲಿಯವರೆಗೆ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.
ಒಂದು ಕಡೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರ ಅಂತಿಮ ಎನ್ನುತ್ತಾರೆ. ಮತ್ತೊಂದು ಕಡೆ, ಅವರ ಹಿಂಬಾಲಕರ ಮೂಲಕ ಪೂರ್ಣಾವಧಿಗೆ ನಾನೇ ಮುಂದುವರಿಯುತ್ತೇನೆಂದು ಹೇಳಿಕೆ ಕೊಡಿಸುತ್ತಾರೆ. ಸದ್ಯದ ಮಾಹಿತಿ ಪ್ರಕಾರ ಅವರು ಅಧಿಕಾರ ಬಿಟ್ಟು ಕೊಡುವುದಿಲ್ಲ. ಹಾಗಂತ ಶಿವಕುಮಾರ್ ಸುಮ್ಮನೆ ಕೂರುತ್ತಾರೆಯೇ?ಎಂದು ಪ್ರಶ್ನೆ ಮಾಡಿದರು.
ಡಿಕೆ ಶಿವಕುಮಾರ್ ಎಷ್ಟು ಸೈಲೆಂಟ್ ಕಿಲ್ಲರ್ ಅಂದರೆ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರನ್ನು ಸದ್ದಿಲ್ಲದೆ ತಲೆದಂಡ ಮಾಡಿದರು. ಈ ಮೂಲಕ ವಾಲ್ಮೀಕಿ ಸಮುದಾಯದ ನಾಯಕರನ್ನು ರಾಜಕೀಯವಾಗಿ ಮುಗಿಸಲಾಯಿತು. ದೀಪ ಪ್ರಕಾಶಮಾನವಾಗಿ ಉರಿಯುತ್ತದೆ ಕೊನೆಗೆ ನಂದಿ ಹೋಗುತ್ತದೆ ಎಂದು ಅರ್ಥೈಸಿದರು.
ಯತೀಂದ್ರ ವಿರುದ್ಧ ವಾಗ್ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಅವರು, ಸದಾ ಮಾಧ್ಯಮಗಳಲ್ಲಿ ಪ್ರಚಾರಗಿಟ್ಟಿಸಿಕೊಳ್ಳಬೇಕೆಂದು ಈ ರೀತಿ ಮನಬಂದಂತೆ ಮಾತನಾಡುತ್ತಿದ್ದಾರೆ ಅವರೊಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಕಿಡಿಕಾರಿದರು.
ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರದ ಜ್ಞಾನೇಶ್ ಕುಮಾರ್ ಅವರನ್ನು ಪುಡಾರಿ ಎಂದು ಕರೆದಿರುವುದು ಅವರಿಗೆ ಶೋಭೆ ತರುವುದಿಲ್ಲ. ಒಂದು ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಿಗೆ ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.
ಯತಿಂದ್ರ, ಸಿದ್ದರಾಮಯ್ಯನವರ ಪುತ್ರ ಎಂಬುದು ಬಿಟ್ಟರೆ ಬೇರೆ ಅವರಿಗೆ ಯಾವುದೇ ಅರ್ಹತೆಗಳಿಲ್ಲ. ತಾನು ಮುಖ್ಯಮಂತ್ರಿ ಮಗ ಹಾಗಾಗಿ ಏನೇ ಹೇಳಿದರೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ ಎಂಬ ಕಾರಣಕ್ಕೆ ಮನಬಂದಂತೆ ಮಾತನಾಡುತ್ತಿದ್ದಾರೆ ಕೂಡಲೇ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ವಿವಾದಾತ್ಮಕ ಹೇಳಿಕೆ ನೀಡುವುದು ಕೊನೆಗೆ ನಾನು ಆ ರೀತಿ ಹೇಳಿಯೇ ಇಲ್ಲ ಅನ್ನೋದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ನಮ್ಮ ಹೇಳಿಕೆ ಯಾವಾಗ ತಿರುಗು
ಬಾಣವಾಯಿತಾ ಎರಡು ದಿನದಲ್ಲಿ ಉಲ್ಟಾ ಹೊಡೆದು ನಾನು ಹಾಗೆ ಹೇಳೇ ಇಲ್ಲ ಎಂದು ಮಾಧ್ಯಮಗಳ ಮೇಲೆ ಗೂಬೆಕೂರಿಸುವ ಪ್ರಯತ್ನ ಮಾಡಿದರು ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಶಾಸಕರಾದ ಇಕ್ಬಾಲ್ ಹುಸೇನ್ ಶಿವಗಂಗಾ ಬಸವರಾಜ್ ಅವರುಗಳೇ ಇದ್ದಿದ್ರೆ ಹೇಳಿಕೆಯನ್ನು ಒಪ್ಪಿಲ್ಲ. ಸಿದ್ದರಾಮಯ್ಯನವರ ಮಗ ಎನ್ನುವುದನ್ನು ಬಿಟ್ಟರೆ ಬೇರೆ ಇವರಿಗೆ ಯಾವುದೇ ಅರ್ಹತೆ ಇಲ್ಲ. ಬಿಜೆಪಿ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿ ಆಗಬಹುದೆಂಬ ಬ್ರಮೆಯಿಂದ ಹೊರಬರಬೇಕಿದ್ದು ಎಚ್ಚರಿಸಿದರು.
ಯತೀಂದ್ರ ಸಿದ್ದರಾಮಯ್ಯ ಹಲವಾರು ಬಾರಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದಾರೆ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ ಆಯುಕ್ತರನ್ನು ಪುಡಾರಿಯ ಎಂದು ಕರೆಯುವುದು ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ಗೌರವ ತರುವುದಿಲ್ಲ. ಇನ್ನೂ ಮುಂದಾದರೂ ಇಂತಹ ಬಾಲಿಷ ಹೇಳಿಕೆಗಳನ್ನು ಕೊಟ್ಟು ಕಾಮಿಡಿ ಪೀಸ್ ಆಗುವುದು ಬೇಡ ಎಂದು ವ್ಯಂಗ್ಯವಾಡಿದರು.
ರಾಜಕಾರಣದಲ್ಲಿ ಸಕ್ರಿಯವಾಗಿರಬೇಕೆಂದು ಇಂತಹ ಹೇಳಿಕೆಗಳನ್ನು ಕೊಡುತ್ತಾರೆ. ಮೊನ್ನೆ ಸಿದ್ದರಾಮಯ್ಯ ನಂತರ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಉತ್ತರಾಧಿಕಾರಿ ಎಂದು ಹೇಳಿದರು. ಇದು ಅವರ ವೈಯಕ್ತಿಕ ಹೇಳಿಕೆ ಎಂದು ಕೆಲವರು ಸಮರ್ಥನೆ ಮಾಡಿಕೊಂಡರು. ಇವರು ಅಪ್ರಬುದ್ಧ ರಾಜಕಾರಣಿ ಎಂಬುದನ್ನು ಸಾಬೀತು ಮಾಡುತ್ತಲೇ ಇದ್ದಾರೆ. ಇನ್ನು ಮುಂದಾದರೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳಲಿ ಎಂದು ಸಲಹೆ ಮಾಡಿದರು.
ಚುನಾವಣಾ ಆಯುಕ್ತರ ಕುರಿತು ಮಾಡಿರುವ ಟೀಕೆಗೆ ತಕ್ಷಣವೇ ಬೇಸರತ್ ಕ್ಷಮೆ ಕೇಳಬೇಕು. ಸರ್ಕಾರದ ವೈಪಲ್ಯಗಳನ್ನು ಮುಚ್ಚಿಹಾಕಿ ವಿಷಯಾಂತರ ಮಾಡಲು ಯತಿಂದ್ರ ಇಂತಹ ಬಾಲಿಷ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಬಗ್ಗೆ ಮಾತನಾಡುವ ಮೊದಲು ಕಾಂಗ್ರೆಸ್ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸರಿಪಡಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಓಟ್ ಚೂರಿ ಆರೋಪ ಮಾಡಿದವರೇ ಇವರು. ಒಂದು ವೇಳೆ ಇವರು ಮಾಡಿರುವ ಆರೋಪ ನಿಜವಾದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು? ಎಂಬುದನ್ನು ಜನತೆಯ ಮುಂದೆ ಹೇಳಲಿ. ಅಧಿಕಾರ ದುರ್ಬಳಕೆ ಮಾಡಿಕೊಂಡವರು ಕಾಂಗ್ರೆಸ್ ನವರು. ಈಗ ನಮಗೆ ನೈತಿಕ ಪಾಠ ಹೇಳಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಎಲ್ಲ ರೀತಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ರಾಷ್ಟ್ರಪತಿಗಳು ರಾಜ್ಯಪಾಲರು, ಚುನಾವಣಾ ಆಯೋಗ, ಸಿಬಿಐ,ಇಡಿ ಐಟಿ ಸೇರಿದಂತೆ ಒಂದೇ ಒಂದು ತನಿಕ ಸಂಸ್ಥೆ ಬಿಡದಿರುವವರು ಇಂದು ನಮ್ಮ ಬಗ್ಗೆ ಮಾತನಾಡುವುದು ಹಾಸ್ಯಸ್ಪದ ಎಂದು ಕುಹಕ ವಾಡಿದರು.
ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಗದ್ದುಗೆ ಹೇಳಿರುವ ಪ್ರಧಾನ ನರೇಂದ್ರ ಮೋದಿ ಇವರಂತೆ ಅಧಿಕಾರ ದುರುಪಯೋಗಪಡಿಸಿಕೊಂಡು ಬಂದಿಲ್ಲ ಜನರಲ್ಲಿ ಜಾಗೃತಿ ಮೂಡಿಸಬೇಕು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಪ್ರಿಯ ನಾಯಕರಾಗಿ ಹೊರಹೊಮ್ಮಿ ಅಧಿಕಾರಕ್ಕೆ ಬಂದಿದ್ದಾರೆ ಇದನ್ನು ಸಹಿಸಿಕೊಳ್ಳದವರು ಸಾಂವಿಧಾನಿಕ ಸಂಸ್ಥೆ ಸೇರಿದಂತೆ ಎಲ್ಲರ ಮೇಲು ಸಂಶಯ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ಗೆದ್ದಾಗ ಎಲ್ಲವೂ ಸರಿಯಿರುತ್ತದೆ, ಬಿಜೆಪಿ ಗೆದ್ದರೆ ಯಾವುದು ಸರಿ ಇರುವುದಿಲ್ಲ ಇದು ದ್ವಂದ್ವ ನೀತಿಯಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ದೇಶದ ಜನತೆ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನವನ್ನು ಕೊಟ್ಟಿದೆ ಮೊದಲು ಅದನ್ನು ಸರಿಯಾಗಿ ನಿಭಾಯಿಸಲಿ ಜನ ಆದೇಶವನ್ನು ಒಪ್ಪಿ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಅಧಿಕಾರ ಸಿಗಲಿಲ್ಲ ಎಂದು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಜನ ಕಪಾಳ ಮೋಕ್ಷ ಮಾಡಿದರು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ರೇಣುಕಾಚಾರ್ಯ ಪ್ರಹಾರ ನಡೆಸಿದರು.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿಯಂದು ಹೇಳಿ ಗೊಂದಲ ಸೃಷ್ಟಿಸಿದರು ಆಗ ಡಿಸಿಎಂ ಡಿ ಕೆ ಶಿವಕುಮಾರ್ ಈ ಬಗ್ಗೆ ನಾನು ಎಲ್ಲಿ ಯಾರ ಹತ್ತಿರ ಹೇಳಿಸಬೇಕು ಅಲ್ಲಿಯೇ ತಿಳಿಸುತ್ತೇನೆ. ಎನ್ನುತ್ತಿದ್ದಂತೆ ಉಲ್ಟಾ ಹೊಡೆದರು ಅವರದೇ ಪಕ್ಷದ ಶಾಸಕರು ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆ ಕೊಡುವುದಿಲ್ಲ. ಇನ್ನು ಮುಂದಾದರೂ ಪಾಲಿಷ ಹೇಳಿಕೆ ಕೊಡುವುದನ್ನು ಬಿಟ್ಟು ಪ್ರಭುದ್ಧ ರಾಜಕಾರಣಿಯಂತೆ ನಡೆದುಕೊಳ್ಳಲಿ ಎಂದು ಕಿವಿಮಾತು ಹೇಳಿದರು
ಯತೀಂದ್ರ ವರ್ಗಾವಣೆ ಬಗ್ಗೆಯೇ ಮಾತನಾಡಿ ಜನತೆಯ ಮುಂದೆ ಕಾಮಿಡಿ ಪೀಸ್ ಆಗಿದ್ದಾರೆ. ಅಪ್ಪಯ್ಯ, ಅಪ್ಪಯ್ಯ ನಾನು ಕೊಟ್ಟಿದ್ದು ಐದೇ ಐದು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ಚುನಾವಣೆಯಲ್ಲಿ ತಮ್ಮ ಅಕ್ರಮದ ಬಗ್ಗೆ ತಾವೇ ಬಹಿರಂಗ ಮಾಡಿದ್ದರು. ಮುಂದಿನ ದಿನಗಳಲ್ಲಿ ಇವರು ಮಾಡಿರುವ ಘನಾಂದರಿ ಕೆಲಸಗಳು ಮತ್ತಷ್ಟು ಆಚೆ ಬರಲಿವೆ ಎಂದು ಎಚ್ಚರಿಸಿದರು.
ಇಷ್ಟಾದರೂ ಅವರು ಎಚ್ಚೆತ್ತುಕೊಂಡಿಲ್ಲ. ಇದೇ ರೀತಿ ಮಾತನಾಡಿದರೆ ನಮಗೂ ಅವರದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಕಪಾಳ ಮೋಕ್ಷ
ಆರ್ ಎಸ್ ಎಸ್ ಪತ ಸಂಚಲನವನ್ನು ನಿರ್ಬಂಧಿಸಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕ ಸದಸ್ಯಪೀಠ ತಡೆಯಾಜ್ಞೆ ನೀಡಿರುವುದು ಕಪಾಳ ಮೋಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಎಂಬ ಕಾರಣಕ್ಕಾಗಿ ಸಚಿವ ಸಂಪುಟದಲ್ಲಿ ಒತ್ತಡ ಹಾಕಿಸಿ ನಿಯಮಗಳನ್ನು ರೂಪಿಸಿದರು. ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಸರ್ಕಾರಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರಿಯಾಂಕ ಖರ್ಗೆ ತಾನು ಎಐಸಿಸಿ ಅಧ್ಯಕ್ಷರ ಮಗ ಎಂಬ ಕಾರಣಕ್ಕೆ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಸರಕಾರಿ ಜಾಗದಲ್ಲಿ ಪಥ ಸಂಚಲನ ನಡೆಸಬಾರದೆಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿಸಿದರು. ಇನ್ನು ಮುಂದಾದರು ಸರ್ಕಾರ ಇಂತಹ ದ್ವೇಷದ ರಾಜಕಾರಣ ಬಿಟ್ಟು ಜನಪರವಾದ ಕೆಲಸ ಮಾಡಲಿ ಎಂದು ರೇಣುಕಾಚಾರ್ಯ ಸಲಹೆ ಮಾಡಿದರು.
GOOD NEWS: ಡಿಸೆಂಬರ್ 2025ರಿಂದ ಹುಬ್ಬಳ್ಳಿ-ಬೆಂಗಳೂರು, ಯಶವಂತಪುರ-ವಿಜಯಪುರ ವಿಶೇಷ ರೈಲುಗಳು ನಿಯಮಿತವಾಗಿ ಸಂಚಾರ
ಕಲಘಟಗಿಯಲ್ಲಿನ ಸಚಿವ ಸಂತೋಷ್ ಲಾಡ್ ಜನತಾ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್, 3,000ಕ್ಕೂ ಹೆಚ್ಚು ಅರ್ಜಿ ವಿಲೇವಾರಿ








