ಶಿವಮೊಗ್ಗ: ರಾಜ್ಯ ಸರ್ಕಾರವು ಮೀನುಗಾರರರ ಹಿತರಕ್ಷಣೆಗೆ ಬದ್ಧವಾಗಿದೆ. ಅವರಿಗಾಗಿ ಅಗತ್ಯ ಕ್ರಮ ಕೂಡ ಕೈಗೊಂಡಿದೆ. ಮೀನುಗಾರಿಕೆ ಉದ್ಯಮದ ಪುನಶ್ಚೇತನಕ್ಕೂ ಹೊಸ ಹೊಸ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಳೆಬಾಗಿಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಶರಾವತಿ ಹಿನ್ನೀರಿಗೆ ಬಲಿತ ಮೀನುಮರಿಯನ್ನು ಬಿತ್ತನೆ ಮಾಡಿ ಮಾತನಾಡಿದಂತ ಅವರು, ಶರಾವತಿ ಹಿನ್ನೀರು ಪ್ರದೇಶದಲ್ಲಿ ಸುಮಾರು 87 ಲಕ್ಷ ಬಲಿತ ಮೀನಿನ ಮರಿಯನ್ನು ಬಿಡಲಾಗುತ್ತಿದೆ. ಶರಾವತಿ ಹಿನ್ನೀರಿನಲ್ಲಿ 67 ಲಕ್ಷ, ತಲಕಳಲೆ ಡ್ಯಾಂಗೆ 12 ಲಕ್ಷ ಮತ್ತು ಶಿರೂರು ಕೆರೆಗೆ 2 ಲಕ್ಷ ಬಲಿತ ಮರಿಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಮುಂದಿನ ಆರರಿಂದ ಒಂದು ವರ್ಷದಲ್ಲಿ ಮೀನು ದೊಡ್ಡದಾಗುತ್ತದೆ. ಇದರ ಜೊತೆಗೆ ನದಿ ತಟದಲ್ಲಿ ಮೀನುಗಾರರ ಸಂಘದ ಜೊತೆ ಇಲಾಖೆ ವತಿಯಿಂದ ಮೀನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ. ಮೀನುಗಾರರಿಗೆ ಸಾಧನಾ ಸಲಕರಣೆಗಳಾದ ಬೋಟು, ಬಲೆ, ಉಕ್ಕಡ ಇನ್ನಿತರೆ ಕೊಡಲಾಗುತ್ತದೆ ಎಂದರು.
ಮೀನುಗಾರರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ ಚಾಲ್ತಿಯಲ್ಲಿದೆ. ತಾಲ್ಲೂಕಿಗೆ 49 ಮನೆಗಳು ಬಂದಿದೆ. ಆದರೆ ಅರ್ಜಿ ಸಲ್ಲಿಸಿದ ಮೀನುಗಾರರ ಕುಟುಂಬದ ಬಳಿ ಅವರ ಸ್ವಾಧೀನದಲ್ಲಿರುವ ಜಾಗಕ್ಕೆ ಹಕ್ಕುಪತ್ರ ಇಲ್ಲವಾಗಿದೆ. ಹಿಂದೆ 25 ಕುಟುಂಬಗಳಿಗೆ ಮನೆ ನೀಡಿದೆ. ಉಳಿದವರಿಗೆ ಮನೆ ನೀಡಲು ಅಗತ್ಯ ಯೋಜನೆ ರೂಪಿಸಿದೆ. ಮೀನುಗಾರರು ಬದುಕು ಹಸನಾಗಬೇಕು. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅವರದ್ದೆ ಸ್ವಂತ ಸೂರಿನಲ್ಲಿ ಅವರು ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಮೀನುಗಾರರ ಕುಟುಂಬ ಇದೆಯೋ ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎ.ಇಂದೂಧರ ಬೇಸೂರು, ನವೀನ್ ಗೌಡ, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅನಿತಾ ಕುಮಾರಿ, ಹಂಜಾ ಇನ್ನಿತರರು ಹಾಜರಿದ್ದರು.
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?
ಈ ಎರಡು ಎಲೆಗಳು ಮನೆಯಲ್ಲಿದ್ದರೆ ಸಾಕು, ಎಲ್ಲ ದೋಷಗಳು, ದುಷ್ಟಶಕ್ತಿಗಳು ಓಡಿ ಹೋಗುತ್ತವೆ








