ಬೆಂಗಳೂರು: ಸಚಿವರೆಂದ್ರೆ ಸಾಕು ತಮಗೆ ಕೊಟ್ಟಿರೋ ಸರ್ಕಾರಿ ಸೌಲಭ್ಯ ಬಳಸಿಕೊಳ್ಳೋರೇ ಹೆಚ್ಚು. ಸರ್ಕಾರಿ ಕಾರಿನಲ್ಲೇ ರಾಜ್ಯಾಧ್ಯಂತ ಪ್ರವಾಸ ಮಾಡೋರು, ಮಾಡ್ತಿರೋರು ಇದ್ದಾರೆ. ಆದರೇ ಇದಕ್ಕೆ ಹೊರತು ಎನ್ನುವಂತೆ ಸಾರ್ವಜನಿಕ ಸೇವೆಯನ್ನು ಬಳಸಿಕೊಂಡ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದೇನು ಅಂತ ಮುಂದೆ ಓದಿ.
ಇಂದು ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಹಬ್ಬ ವಿಚಾರ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಬಳಸಿದ್ದು ಸಾರ್ವಜನಿಕ ಸಾರಿಗೆ. ಜನಸಾಮಾನ್ಯರಂತೆಯೇ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ವಿಜಯಪುರಕ್ಕೆ ಪ್ರಯಾಣಿಸಿ ಗಮನ ಸೆಳೆದರು.
ಸರಳತೆಗೆ ಮತ್ತೊಂದು ಹೆಸರೇ ನಮ್ಮ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಂಬುದಾಗಿ ಸಾರ್ವಜನಿಕರು ಅವರ ನಡೆಯನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಬೆಂಗಳೂರಿನಿಂದ ವಿಜಯಪುರಕ್ಕೆ ಸಾರಿಗೆ ಬಸ್ಸಿನಲ್ಲೇ ಬಂದಿಳಿದಂತ ಅವರನ್ನು ಅಷ್ಟೇ ಪ್ರೀತಿಯಿಂದ ಇಲಾಖೆಯ ಅಧಿಕಾರಿಗಳು ಪುಸ್ತಕ ನೀಡಿ ಸ್ವಾಗತಿಸಿದರು. ಆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಸರಳತೆಯ ನಡೆಯ ವೀಡಿಯೋ ಈ ಕೆಳಗಿದೆ ನೋಡಿ..
ಫಲಿತಾಂಶ ಉತ್ತಮಕ್ಕೆ ಇದೆ ಇನ್ನೂ ಎರಡು ಅವಕಾಶ: PUC ಅಂಕ ಕಡಿಮೆ ಬಂತೆಂದು CET ಮಿಸ್ ಮಾಡ್ಕೊಬೇಡಿ
BIG NEWS : ‘ವಕ್ಫ್’ ಬಿಲ್ ವಿರುದ್ಧ ಬೀದಿಗೆ ಇಳಿಯುವಂತೆ ಪ್ರಚೋದನಾಕಾರಿ ಭಾಷಣ : ಇಬ್ಬರು ಅರೆಸ್ಟ್!