ಬೆಂಗಳೂರು: ಕಳೆದ ಸರ್ಕಾರ ತುಂಬಾ ಜನರನ್ನು ಬೇರೆಡೆ ನಿಯೋಜನೆ ಮಾಡಿದ್ದಾರೆ. ನನಗೂ ಕನಿಷ್ಠ 2000 ಉದ್ಯೋಗಿಗಳ ನಿಯೋಜನೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ನಾನು ಈವರೆಗೆ ಒಬ್ಬರನ್ನೂ ನಿಯೋಜನೆ ಮಾಡಿಲ್ಲ. ಯಾರನ್ನೂ ಮೂಲ ಸ್ಥಾನದಿಂದ ನಿಯೋಜನೆಗೊಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.
ತಾಲೂಕುಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಹಂತದ ನೌಕರರನ್ನು ಬೇರೆಡೆ ನಿಯೋಜನೆಗೊಳಿಸಲಾಗುತ್ತಿದೆ. ಉದ್ಯೋಗಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸವಾಗುತ್ತಿಲ್ಲ” ಎಂದು ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೂಡ್ಲಿ ಅವರು ಪ್ರಶ್ನಿಸಿದ್ದರು.
ಈ ಪ್ರಶ್ನೆಗೆ ಉತ್ತರಿಸಿದಂತ ಅವರು, “ನಿಮ್ಮ ಪರ ನಾವಿದ್ದೇವೆ. ಇದರಲ್ಲಿ ಯಾವುದೂ ರಾಜಕೀಯ ಇಲ್ಲ. ಕುಂದಾಪುರ ತಾಲೂಕಿನಲ್ಲಿ ಕಂದಾಯ ಇಲಾಖೆಯ 110 ಹುದ್ದೆಗಳ ಪೈಕಿ 70 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಅಂದರೆ, ಶೇ.65ರಷ್ಟು ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಉಳಿದ ಸ್ಥಾನಗಳನ್ನೂ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈಗಾಗಲೇ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ವಿವೇಚನೆ ಮೇಲೆ ಗರಿಷ್ಠ 5 ಸ್ಥಾನಗಳನ್ನು ಹೊರತುಪಡಿಸಿ ಉಳಿದ ಎಲ್ಲ ನೌಕರರನ್ನೂ ಮೂಲ ಸ್ಥಾನಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಜನರಿಗೆ ಸರಳ ಹಾಗೂ ಶೀಘ್ರ ಸೇವೆ ಒದಗಿಸಲು ಸೂಚಿಸಲಾಗಿದೆ” ಎಂದು ಮಾಹಿತಿ ನೀಡಿದರು.
Job Alert: ‘ಉದ್ಯೋಗಾಕಾಂಕ್ಷಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ‘1000 VA ನೇಮಕಾತಿ’ಗೆ ಅಧಿಸೂಚನೆ
ಟಾಟಾ ಸಮೂಹದ ಮಾರುಕಟ್ಟೆ ಮೌಲ್ಯವು ಈಗ ಪಾಕಿಸ್ತಾನದ ‘ಸಂಪೂರ್ಣ ಆರ್ಥಿಕತೆಗಿಂತ’ ಹೆಚ್ಚು