ಬೆಂಗಳೂರು: ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ 30 ದಿನಗಳಲ್ಲಿ ಹಿಂಪಡೆಯಲಾಗುತ್ತಿದ್ದುದನ್ನು 2 ದಿನಗಳ ಅವಧಿಗೆ ಇಳಿಸಿ ಕ್ರಮ ಕೈಗೊಳ್ಳಲಾಗಿದೆ. NSQ ಬಂದಂತಹ ಪ್ರಕರಣಗಳಲ್ಲಿ ರಾಜ್ಯಾದ್ಯಂತ ಜುಲೈ ತಿಂಗಳಲ್ಲಿ ಸುಮಾರು ರೂ.40,48,436/- ಲಕ್ಷಗಳ ಮೌಲ್ಯದ ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿರುತ್ತದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಔಷಧಿ ನಿಯಂತ್ರಣ ಇಲಾಖೆ
* ಆಯುಷ್ ಇಲಾಖೆಯ ಆಯುರ್ವೇದ, ಸಿದ್ದ ಮತ್ತು ಯುನಾನಿ(ASU) ಔಷಧಗಳ ಅಮಲು ಜಾರಿ ವಿಭಾಗ ಹಾಗೂ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಆಯುಷ್ ಔಷಧಗಳ ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ (FDA) ಇಲಾಖೆಯ ಔಷಧ ನಿಯಂತ್ರಣ ವಿಭಾಗದ ಅಡಿಯಲ್ಲಿ ವಿಲೀನಗೊಳಿಸಿ, 12 2020 2025, 50 2:29.07.20250 ಹೊರಡಿಸಲಾಗಿದೆ. ಇದರಿಂದ ಆರೋಗ್ಯ ಇಲಾಖೆಯಲ್ಲಿನ ಎಲ್ಲಾ ನಿಯಂತ್ರಣ ಕಾರ್ಯಗಳು ಸುಗಮವಾಗಿ ಕಾರ್ಯನಿರ್ವಹಿಸಲು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ರವರ ವ್ಯಾಪ್ತಿಗೆ ತರಲಾಗಿದೆ.
* ಜುಲೈ 2025ರ ಮಾಹೆಯಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯ ಬೆಂಗಳೂರು, ಹುಬ್ಬಳ್ಳಿ ಬಳ್ಳಾರಿಗಳಲ್ಲಿ ಒಟ್ಟು 1,433 ಔಷಧ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಅವುಗಳಲ್ಲಿ 1,366 ಉತ್ತಮ ಗುಣಮಟ್ಟದೆಂದು ಮತ್ತು 59 ಔಷಧ ಮಾದರಿಗಳು ಅನುತ್ತಮ ಗುಣಮಟ್ಟದೆಂದು ಘೋಷಿತವಾಗಿರುತ್ತದೆ.
* ಸಕಾಲದ ಅಡಿ 26 ಔಷಧ ಆಡಳಿತ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಜುಲೈ-2025ರ ಮಾಹೆಯಲ್ಲಿ ಒಟ್ಟು 1686 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 905 ಅರ್ಜಿಗಳು ವಿಲೇವಾರಿಯಾಗಿವೆ.
* ಕಳೆದ ಜೂನ್ ತಿಂಗಳಲ್ಲಿ ದಿನಾಂಕ 24 ಮತ್ತು 25 ರಂದು ಔಷಧ ಆಡಳಿತದ ಅಮಲು ಜಾರಿ ಅಧಿಕಾರಿಗಳು ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟಲು 279 ವಿಶೇಷ ಪರಿವೀಕ್ಷಣೆಯನ್ನು ಕೈಗೊಳ್ಳಲಾಗಿದ್ದು ಉಲ್ಲಂಘನೆ ಕಂಡು ಬಂದ ಪ್ರಕರಣಗಳಲ್ಲಿ ಒಟ್ಟು 231 ಶೋಕಾಸ್ ನೋಟೀಸ್ ನೀಡಲಾಗಿದೆ ಮತ್ತು 15 ಔಷಧ ಮಳಿಗೆಗಳಿಗೆ ಅನುಷ್ಠಾನ ಪತ್ರವನ್ನು ನೀಡಲಾಗಿದೆ.
* ಔಷಧ ಮತ್ತು ಕಾಂತಿವರ್ಧಕ ಅಧಿನಿಮಯ 1940 ಮತ್ತು ಅದರಡಿಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಸಂಸ್ಥೆಗಳ ವಿರುದ್ಧ ಜುಲೈ 2025 ತಿಂಗಳಲ್ಲಿ ಒಟ್ಟು 29 ಮೊಕದ್ದಮೆಗಳನ್ನು ಮಾನ್ಯ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ.
* ಇಲಾಖೆಯಿಂದ ನೀಡುತ್ತಿರುವ ಆನ್ಲೈನ್ ಸೇವೆಯನ್ನು ONDLS Portal ಗೆ Migrate ಆಗಿರುವುದರಿಂದ ರಕ್ತ ನಿಧಿ ಕೇಂದ್ರಗಳಿಗೆ ಆನ್ಲೈನ್ ಮೂಲಕವೇ ಪರವಾನಿಗೆಗಳನ್ನು ನೀಡಲಾಗುತ್ತಿದೆ.
* Recognised Medical Institutions ಗಳಲ್ಲಿ ಅಗತ್ಯ ಮಾದಕ ಔಷಧಗಳನ್ನು ಬಳಸಲು ಇಲಾಖೆಯಿಂದ ನೀಡಲಾಗುವ RMI Certificate ಗಳನ್ನು ಆನ್ ಲೈನ್ ಮೂಲಕವೇ ಒದಗಿಸಲು ಇಲಾಖೆಯ ಆನ್ಲೈನ್ ಸೇಲ್ ವೆಬ್ ಸೈಟ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
* ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ 30 ದಿನಗಳಲ್ಲಿ ಹಿಂಪಡೆಯಲಾಗುತ್ತಿದ್ದುದನ್ನು 2 ದಿನಗಳ ಅವಧಿಗೆ ಇಳಿಸಿ ಕ್ರಮ ಕೈಗೊಳ್ಳಲಾಗಿದೆ. NSQ ಬಂದಂತಹ ಪ್ರಕರಣಗಳಲ್ಲಿ ರಾಜ್ಯಾದ್ಯಂತ ಜುಲೈ ತಿಂಗಳಲ್ಲಿ ಸುಮಾರು ರೂ.40,48,436/- ಲಕ್ಷಗಳ ಮೌಲ್ಯದ ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿರುತ್ತದೆ.
ಆಹಾರ ಸುರಕ್ಷತಾ ವಿಭಾಗ
* ಜುಲೈ ತಿಂಗಳಲ್ಲಿ 3489 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 17 ಮಾದರಿಗಳು ಅಸುರಕ್ಷಿತ ಎಂದು, 18 ಮಾದರಿಗಳು Substandard ಎಂದು ವರದಿಯಾಗಿರುತ್ತವೆ.
* ಆಹಾರದ ಸುರಕ್ಷತೆ, ಗುಣಮಟ್ಟ ,ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 1557 ಬೀದಿ ಬದಿ ವ್ಯಾಪಾರ ಘಟಕಗಳನ್ನು ಪರಿವೀಕ್ಷಿಸಲಾಗಿದ್ದು, ಲೋಪಗಳು ಕಂಡು ಬಂದಿರುವ 406 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿರುತ್ತದೆ. ಅಲ್ಲದೇ ಸ್ಥಳದಲ್ಲೇ ರೂ.44,500/-ಗಳ ದಂಡವನ್ನು ವಿಧಿಸಲಾಗಿರುತ್ತದೆ.
* ರಾಜ್ಯಾದ್ಯಂತ 1240 ಬಿದಿ ಬದಿ ಆಹಾರ ವ್ಯಾಪಾರಿಗಳಿಗೆ ನೈರ್ಮಲ್ಯತೆ ಮತ್ತು ಗುಣಮಟ್ಟ ಕುರಿತ ತರಬೇತಿಯನ್ನು ನೀಡಲಾಗಿದೆ. 866 ಬೀದಿಬದಿಯ ವ್ಯಾಪಾರ ಘಟಕಗಳಿಗೆ ಉಚಿತ ನೋಂದಣಿಯನ್ನು ಕೂಡ ಒದಗಿಸಲಾಗಿದೆ.
* ರಾಜ್ಯಾದ್ಯಂತ 186 ಬಸ್ ನಿಲ್ದಾಣಗಳಲ್ಲಿನ 889 ಆಹಾರ ಮಳಿಗೆಗಳಿಗೆ ಪರಿವೀಕ್ಷಿಸಲಾಗಿದ್ದು, ಲೋಪಗಳು ಕಂಡು ಬಂದಿರುವ 206 ಘಟಕಗಳಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿರುತ್ತದೆ. ಸ್ಥಳದಲ್ಲೇ ರೂ.55,000/-ಗಳ ದಂಡವನ್ನು ವಿಧಿಸಲಾಗಿರುತ್ತದೆ ಹಾಗೂ 99 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
* ಆಹಾರದ ಸುರಕ್ಷತೆ, ಗುಣಮಟ್ಟ, ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 603 ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, 545 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ವಿಶ್ಲೇಷಣಾ ಕಾರ್ಯವು ಪುಗತಿಯಲ್ಲಿರುತ್ತದೆ. ಅಲ್ಲದೆ ಒಟ್ಟು 1263 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೊಂದಣಿ ಒದಗಿಸಲಾಗಿರುತ್ತದೆ.
* ರಾಜ್ಯಾದ್ಯಂತ 736 ಹೋಟೆಲ್/ರೆಸ್ಟೋರೆಂಟ್ ಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, ಲೋಪಗಳು ಕಂಡು ಬಂದಿರುವ 190 ಘಟಕಗಳಿಗೆ ನೋಟಿಸ್ ಗಳನ್ನು ಜಾರಿ ಮಾಡಲಾಗಿರುತ್ತದೆ ಮತ್ತು ಸ್ಥಳದಲ್ಲೇ ರೂ.21,500/-ಗಳ ದಂಡವನ್ನು ವಿಧಿಸಲಾಗಿರುತ್ತದೆ ಹಾಗೂ 291 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.
* High Risk ಆಹಾರ ಉದ್ದಿಮೆಗಳ ವರ್ಗದಡಿ ಬರುವ 1685 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ ಲೋಪ ಕಂಡುಬಂದಿರುವ 465 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ.
* 175 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, 73 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 04 ಮಾದರಿಗಳು Substandard ಎಂದು, 69 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ಮತ್ತು ಇನ್ನೂ ಹೆಚ್ಚಿನ ಹಾಲಿನ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಆಗಸ್ಟ್-2025ರ ಮಾಹೆಯಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
* ಅಡುಗೆ ಎಣ್ಣೆ ತಯಾರಿಕಾ ಘಟಕಗಳ ಮಾಲೀಕರು/ಮುಖ್ಯಸ್ಥರು, ಮುಖ್ಯಸ್ಥರುಗಳು, Oil Federation of Karnataka, ., FSSAI RUCO 2 ದಿನಾಂಕ:30.07.2025ರಂದು ವಿಡಿಯೋ ಸಂವಾದವನ್ನು ಕೈಗೊಂಡು Transfat Level, Labelling Condition, Hygiene Audit ಕುರಿತಂತೆ ಹಾಗೂ FSSAI ನೊಂದಾಯಿತ RUCO ಏಜೆನ್ಸಿಗಳು ಆಹಾರ ಉದ್ದಿಮೆದಾರರಿಂದ UCO ಸಂಗ್ರಹಿಸಿ ಬಯೋಡೀಸೆಲ್ ತಯಾರಿಕಾ ಘಟಕಕ್ಕೆ ನೀಡುವ ಕುರಿತು ಮತ್ತು ಅಡುಗೆ ಎಣ್ಣೆ ತಯಾರಿಕಾ ಘಟಕಗಳು ಕಾಲಕಾಲಕ್ಕೆ ಎಣ್ಣೆಯ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸುವಂತೆ ಸೂಚಿಸಲಾಗಿರುತ್ತದೆ.
* ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು.
* ಬೆಂಗಳೂರು ನಗರ ವ್ಯಾಪ್ತಿಯ Empire ಹೋಟೆಲ್ ಗಳಲ್ಲಿ 06 ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, 06 ಮಾದರಿಗಳೂ ಕೃತಕ ಬಣ್ಣಗಳನ್ನು ಹೊಂದಿದ್ದರಿಂದ ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಸಂಬಂಧಿಸಿದಂತೆ ಮುಂದಿನ ಕಾನೂನಾತ್ಮಕ ಪ್ರಕ್ರಿಯೆ ಜರುಗಿಸಲು/ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸುವ ಕುರಿತಂತೆ ಸದರಿ ಉದ್ದಿಮೆದಾರರಿಗೆ ನೋಟಿಸ್ ಜಾರಿಗೊಳಿಸಲಾಗಿರುತ್ತದೆ.
BREAKING: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು
BREAKING: ತುಮಕೂರು ಬಳಿ 19 ನವಿಲು ಸಾವಿನ ಬಗ್ಗೆ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ