ಬೆಂಗಳೂರು: ನಾಡೋಜ ಪ್ರಶಸ್ತಿ ಪುರಸ್ಕೃತ ನಿವೃತ್ತ ನ್ಯಾಯಮೂರ್ತಿಯಾಗಿದ್ದಂತ ಎಸ್ ಆರ್ ನಾಯಕ್ ಅವರನ್ನು ವಯೋಸಹಜತೆಯಿಂದ ನಿಧನರಾಗಿದ್ದಾರೆ. ಈ ಮೂಲಕ ನಾಡೋಜ ಪ್ರಶಸ್ತಿ ಪುರಸ್ಕೃತ ನಿವೃತ್ತ ನ್ಯಾಯಮೂರ್ತಿ ಎಸ್.ಆರ್ ನಾಯಕ್ ಇನ್ನಿಲ್ಲವಾಗಿದ್ದಾರೆ.
ಈ ಬಗ್ಗೆ ಅವರ ಪುತ್ರ ಡಾ.ರಾಹುಲ್ ನಾಯಕ್ ಮಾಹಿತಿ ನೀಡಿದ್ದು, ಛತ್ತೀಸ್‌ಗಢದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಆರ್. ನಾಯಕ್ (80) ಇಂದು (ಮೇ 18, 2025) ಮಧ್ಯಾಹ್ನ 2.18 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಾಂತಿಯುತವಾಗಿ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ನಿಧನರಾದಂತ ನಿವೃತ್ತ ನ್ಯಾಯಮೂರ್ತಿ ಎಸ್.ಆರ್ ನಾಯಕ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಾಳೆ 1 ಗಂಟೆಯವರೆಗೆ ಬೆಂಗಳೂರಿನ ಆರ್ ಎಂ ಬಿ 2ನೇ ಹಂತದಲ್ಲಿರುವಂತ ಮನೆಯಲ್ಲಿ ಇರಿಸಲಾಗಿದೆ ಎಂದಿದ್ದಾರೆ.
ನಾಳೆ ಸಂಜೆ 4 ಗಂಟೆಗೆ ಹೆಬ್ಬಾಳದಲ್ಲಿರುವಂತ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಎಸ್ ಆರ್ ನಾಯಕ್ ಅವರ ಪುತ್ರ ಡಾ.ರಾಹುಲ್ ನಾಯಕ್ ಮಾಹಿತಿ ನೀಡಿದ್ದಾರೆ.
ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾದ 112 ಸಿಬ್ಬಂದಿ: ಎಲ್ಲಿ.? ಹೇಗೆ ಅಂತ ಈ ಸುದ್ದಿ ಓದಿ!
ಆಪರೇಷನ್ ಸಿಂಧೂರ್: ಪಾಕ್ ಭಯೋತ್ಪಾದಕ ಲಾಂಚ್ ಪ್ಯಾಡ್ ಮೇಲಿನ ದಾಳಿಯ ವೀಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ