Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಶ್ವಕಪ್ ಗೆದ್ದ ವನಿತೆಯರಿಂದ ‘ಪ್ರಧಾನಿ ಮೋದಿ’ಗೆ ‘NAMO’ ಜೆರ್ಸಿ ಗಿಫ್ಟ್ ; ವೀಡಿಯೋ, ಫೋಟೋ ವೀಕ್ಷಿಸಿ!

05/11/2025 10:19 PM

BREAKING ; ‘RCB’ ಅಧಿಕೃತವಾಗಿ ಮಾರಾಟಕ್ಕೆ ಸಿದ್ಧ ; ಮಾಲೀಕರಿಂದ ‘2 ಬಿಲಿಯನ್ ಡಾಲರ್’ ನಿರೀಕ್ಷೆ : ವರದಿ

05/11/2025 10:04 PM

Alert : ‘ಗೂಗಲ್ ಕ್ರೋಮ್’ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

05/11/2025 9:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿಸಿಎಂ ಡಿಕೆಶಿ
KARNATAKA

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿಸಿಎಂ ಡಿಕೆಶಿ

By kannadanewsnow0904/04/2025 3:10 PM

ನವದೆಹಲಿ: “ಆಲಮಟ್ಟಿ ಅಣೆಕಟ್ಟು ಎತ್ತರದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನವದೆಹಲಿಯ ಕರ್ನಾಟಕ ಭವನ-1 “ಕಾವೇರಿ”ಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

“ಕೇಂದ್ರ ಜಲಶಕ್ತಿ ಸಚಿವರಾದ ಸಿ‌.ಆರ್.ಪಾಟೀಲ್ ಅವರನ್ನು ರಾಜ್ಯಖಾತೆ ಸಚಿವರಾದ ಸೋಮಣ್ಣ ಅವರ ಜೊತೆ ಭೇಟಿ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ. 524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಕೆಲಸವನ್ನು ಬೇಗ ಮುಗಿಸುವ ಬದ್ಧತೆ ನಮ್ಮ ಸರ್ಕಾರಕ್ಕಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಬಗ್ಗೆಯೂ ಮನವಿ ಮಾಡಿದ್ದೇವೆ” ಎಂದರು.

“ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಸರ್ಕಾರ‌‌ ಕೆಲಸ ಮಾಡುತ್ತಿದೆ. ಕೇಂದ್ರದ ಕ್ಯಾಬಿನೆಟ್ ಮುಂದೆ ಈ ವಿಚಾರ ತೆಗೆದುಕೊಡು ಹೋಗಲಾಗಿದೆ ಎಂದು ಹೇಳಿದ್ದಾರೆ. ಮೇಕೆದಾಟು ವಿಚಾರದಲ್ಲಿ 15 ದಿನಗಳಲ್ಲಿ ಸುಪ್ರೀಂ ‌ಕೋರ್ಟ್ ಕರ್ನಾಟಕದ‌ ವಾದ ಆಲಿಸುವುದಾಗಿ ಹೇಳಿತ್ತು. ಆದರೆ ದಿನಾಂಕ ನಿಗದಿ ಮಾಡಿಲ್ಲ. ತಮಿಳುನಾಡಿನವರು ರಾಜಕೀಯವಾಗಿ ಸಹಕಾರ ನೀಡುವುದಿಲ್ಲ‌‌ ಎನ್ನುವುದು ನಮಗೆ ಅರಿವಿದೆ. ಅವರು ಸಣ್ಣಪುಟ್ಟ ಅಣೆಕಟ್ಟುಗಳನ್ನು ಅವರ ವಲಯದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವು ತೊಂದರೆ ಕೊಡಲು ಹೋಗುವುದಿಲ್ಲ. ಈ ವಿಚಾರವನ್ನೂ ಸಚಿವರ ಗಮನಕ್ಕೆ ತರಲಾಗಿದೆ” ಎಂದರು.

“ಕಳಸಾ ಬಂಡೂರಿ ಕಾಮಗಾರಿಗೆ ಪರಿಸರ ಇಲಾಖೆಯ ಅನುಮತಿ ಸಿಗದಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಹಿಂದೆ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಅರಣ್ಯ ಸಚಿವರನ್ನೂ ಸಹ ಭೇಟಿ ಮಾಡಲಾಗಿತ್ತು. ಎತ್ತಿನಹೊಳೆ ಕಾಮಗಾರಿ ಕುಡಿಯುವ ನೀರಿನ ಯೋಜನೆಯಾದ ಕಾರಣ ಒಂದಷ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜೊತೆಗೆ ಅರಣ್ಯ ಭೂಮಿ ಬಳಕೆ, ಬದಲಿ ಭೂಮಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರ ಡಿಪಿಆರ್ ಅನ್ನು ನೋಡುವುದಾಗಿ ಭರವಸೆ ನೀಡಿದ್ದಾರೆ” ಎಂದರು.

“ಕಾವೇರಿ, ಕೃಷ್ಣಾ,ಗೋದಾವರಿ ನದಿ ಜೋಡಣೆ ಸಂಬಂಧ ನಮ್ಮ ರಾಜ್ಯದ ವಾದವನ್ನು ನಾನು ಹಾಗೂ ಮುಖ್ಯಮಂತ್ರಿಯವರು ಸಲ್ಲಿಸಿದ್ದೇವೆ. ಇದರ ಬಗ್ಗೆ ಧನಾತ್ಮಕವಾಗಿ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಭೇಟಿ ಫಲದಾಯಕವಾಗಿದೆ ಎನ್ನುವುದು ಸಂತಸದ ವಿಚಾರ” ಎಂದರು.

ಕೃಷ್ಣಾ ನ್ಯಾಯಾಧೀಕರಣ ವಿಚಾರ ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಇರುವ ಬಗ್ಗೆ ಕೇಳಿದಾಗ, “ಶೆಡ್ಯೂಲ್ 524ಕ್ಕೆ ಸೇರಿದ ವಿಚಾರವಾದ ಕಾರಣ ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಆಂತರಿಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ” ಎಂದರು.

ಕಾಲುವೆ ನೀರು ಬಿಡುವಂತೆ ಕೋರ್ಟ್ ಆದೇಶದ ಬಗ್ಗೆ ಕೇಳಿದಾಗ, “ಕಾಲುವೆಗಳಿಗೆ ಕೃಷ್ಣ ನದಿ ನೀರನ್ನು ಏಕಾಏಕಿ ಬಿಡಲು ಆಗುವುದಿಲ್ಲ. ಅಲ್ಲದೇ ಈ ವಿಚಾರದಲ್ಲಿ ನ್ಯಾಯಾಲಯ ಕೂಡ ಆದೇಶ ನೀಡಲು ಬರುವುದಿಲ್ಲ. ಏಕ ಸದಸ್ಯ ಪೀಠ ನೀರು ಬಿಡುವಂತೆ ಹೇಳಿತ್ತು. ದ್ವಿ ಸದಸ್ಯ ಪೀಠ ಆದೇಶಕ್ಕೆ ತಡೆ ನೀಡಿದೆ. ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ನಾನೇ ತಾಂತ್ರಿಕ ವರದಿ ತರಿಸಿ ಕೊಳ್ಳುವವನಿದ್ದೆ. ಯಾದಗಿರಿ ಸೇರಿದಂತೆ ಆ ಭಾಗದ ಶಾಸಕರು ರೈತರ ಎರಡನೇ ಬೆಳೆಗೆ ನೀರು ಬಿಡುವಂತೆ ಮನವಿ ಮಾಡಿದ್ದರು. ಈ ಮಧ್ಯೆ ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆ” ಎಂದರು.

“ಕಾಲುವೆಗೆ ನೀರುಬಿಟ್ಟ ಸಮಯದಲ್ಲಿ ಮಧ್ಯದಲ್ಲಿಯೇ ಪಂಪ್ ಗಳನ್ನು ಬಿಟ್ಟು ನೀರು ಎತ್ತಲಾಗುತ್ತದೆ. ಇದಕ್ಕೆಲ್ಲಾ ಅವಕಾಶ ನೀಡಬಾರದು ಎಂದು ಹೇಳಲಾಗಿದೆ. ರೈತರ ಪಾಲಿನ ನೀರು ನಾವು ನೀಡುತ್ತೇವೆ ಆದರೆ ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪಬೇಕಲ್ಲವೇ? ಇದು ಆಗದೇ ಮಧ್ಯದಲ್ಲಿಯೇ ನೀರು ಎಳೆಯಲಾಗುತ್ತಿದೆ” ಎಂದು ಹೇಳಿದರು.

“ಕಾಲುವೆಯಿಂದ ನೀರು ಎತ್ತುವುದನ್ನು ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯುತ್ ಸಂಪರ್ಕಗಳನ್ನು ತಪ್ಪಿಸಿ ಹಗಲು ಹಾಗೂ ರಾತ್ರಿ ವೇಳೆ ನೀರನ್ನು ರಕ್ಷಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ರೈತರು ಎರಡನೇ ಬೆಳೆ ಹಾಕಿಕೊಂಡಿದ್ದಾರೆ. ಆದರೆ ಕುಡಿಯುವ ನೀರು ನಮ್ಮ ಮೊದಲ ಆದ್ಯತೆ” ಎಂದರು.

“ನಿರುದ್ಯೋಗಿಗಳಿಗೆ ಪರಿಷತ್ ಸ್ಥಾನ ಕೊಟ್ಟಂತೆ ಆಗಬಾರದು

ವಿಧಾನಪರಿಷತ್ ನಾಮನಿರ್ದೇಶನದ ಬಗ್ಗೆ ಕೇಳಿದಾಗ, “ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರವಾಗಿ ದನಿ ಎತ್ತುವವರಿಗೆ ನೀಡಬೇಕು ಎಂಬುದು ನನ್ನ ಅಭಿಲಾಷೆ. ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಕೊಟ್ಟಂತೆ ಆಗಬಾರದು. ಉತ್ತಮವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕು ಎಂಬುದು ನನ್ನ ಪ್ರಾಶಸ್ತ್ಯ. ಇದರ ಬಗ್ಗೆ ಮುಖ್ಯಮಂತ್ರಿಗಳು ನಾನು ಹೈಕಮಾಂಡ್ ಬಳಿ ಮಾತನಾಡಿದ್ದೇವೆ‌. ಹೈಕಮಾಂಡ್ ಇಬ್ಬರನ್ನು ಸಂಪರ್ಕಿಸುತ್ತದೆ” ಎಂದರು.

ಮೇಕೆದಾಟು ಹಾಗೂ ಭದ್ರಾ ಮೇಲ್ದಂಡೆ ಬಗ್ಗೆ ಪ್ರತಿ ಬಾರಿ ದೆಹಲಿಗೆ ಬಂದಾಗಲೂ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, “ಇದು ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ‌. ನಿರ್ಮಲಾ ಸೀತಾರಾಮನ್ ಅವರು ಭದ್ರಾ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ನಾವು ಗುತ್ತಿಗೆದಾರರಿಗೆ ಹಣ ನೀಡಬೇಕಿದೆ” ಎಂದರು.

ಮೇಕೆದಾಟು ಬಗ್ಗೆ ಕೆಲಸಗಳೇ ನಡೆಯುತ್ತಿಲ್ಲ ಎಂದು ಕೇಳಿದಾಗ, “ಈಗಾಗಲೇ ರಾಜ್ಯದಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ಸ್ಥಳ ಗುರುತಿಸುವಿಕೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿದೆ. ದೆಹಲಿಯಲ್ಲೂ ಈ ಬಗ್ಗೆ ಕೆಲಸ ಪ್ರಾರಂಭ ಮಾಡಲಾಗುವುದು” ಎಂದರು‌.

ಬೆಲೆಏರಿಕೆ ವಿರುದ್ದ ಬಿಜೆಪಿಯವರಿಂದ ಸಿಎಂ ಮನೆ ಮುತ್ತಿಗೆ ಬಗ್ಗೆ ಕೇಳಿದಾಗ, “ಬಿಜೆಪಿಯವರ ಕಾಲದಲ್ಲಿ ಪೆಟ್ರೊಲ್, ಡೀಸೆಲ್, ಅಡುಗೆ ಎಣ್ಣೆ ಯ ಬೆಲೆ ಏರಿಕೆಯಾದಾಗ ಏಕೆ ಮನೆ ಮುತ್ತಿಗೆ ಮಾಡಿಕೊಳ್ಳಲಿಲ್ಲ? ನಾವು 100 ನಾಟ್ ಔಟ್ ಎನ್ನುವ ಹೋರಾಟ ಮಾಡಿದ್ದೆವು. ಕಬ್ಬಿಣ, ಉಕ್ಕು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಎಲ್ಲವೂ ಹೆಚ್ಚಾಯಿತು. ಕಸದ ಸಂಗ್ರಹ ಶುಲ್ಕಕ್ಕೆ ಆದೇಶ ನೀಡಿದವರೇ ಬಿಜೆಪಿಯವರು. ನಾನು ಅವರು ಮಾಡಿದ ಬೆಲೆಗಿಂತ ಕಡಿಮೆ ಮಾಡಿದ್ದೇನೆ. ದೊಡ್ಡದಾಗಿ ಹಾಕಬೇಕಾಗಿತ್ತು. ಹಳೆಯದನ್ನು ಬಿಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಹಾಗೂ ನೀವು ವರಿಷ್ಠರನ್ನು ಭೇಟಿಯಾಗುತ್ತಾ ಇದ್ದೀರಿ. ಸಚಿವರ ದಂಡು ಸಹ ದೆಹಲಿಯಲ್ಲಿದೆ. ಸರ್ಕಾರದಲ್ಲಿ ಬದಲಾವಣೆಯಾಗಲಿದೆಯೇ ಎಂದು ಕೇಳಿದಾಗ, “ಪಕ್ಷದ ನಾಯಕರನ್ನು ನಾವು ಭೇಟಿಯಾಗುವುದು ಸಾಮಾನ್ಯ. ನಾನು ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕ ಭವನದಲ್ಲಿಯೇ ಭೇಟಿ ಮಾಡಲಾಯಿತು” ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ, “ಪಕ್ಷ ಹೇಗೆ ಹೇಳುತ್ತದೆಯೋ ಆ ರೀತಿ ಮುನ್ನಡೆಯುವುದು. ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ಪಕ್ಷಕ್ಕೆ ಒಳ್ಳೆಯದಾಗುವುದು ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ” ಎಂದು ಮಾರ್ಮಿಕವಾಗಿ ನುಡಿದರು.

ಕಳೆದ ಹಲವಾರು ದಿನಗಳಿಂದ ಸೋನಿಯಾ ಗಾಂಧಿ ಅವರನ್ನು ಶಿವಕುಮಾರ್ ಅವರು ಭೇಟಿಯಾಗಿಲ್ಲ. ಭೇಟಿಯಾದರೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ನಿಶ್ಚಿತ ಎನ್ನುವ ಮಾತುಗಳ ಬಗ್ಗೆ ಕೇಳಿದಾಗ, “ಭೇಟಿಯಾಗಿಲ್ಲ ಎಂದು ಹೇಳಿದವರು ಯಾರು? ಸಾಕ್ಷಿಗೆ ಫೋಟೊಗಳನ್ನು ತೋರಿಸಲೇ” ಎಂದಾಗ ಅಧಿಕೃತವಾಗಿ ಫೋಟೊಗಳು ದೊರೆತಿಲ್ಲ ಎಂದು ಮರುಪ್ರಶ್ನಿಸಿದಾಗ, “ನಿಮಗೆ ಏಕೆ ತೋರಿಸಬೇಕು. ನನಗೆ ಬೇಕಾಗಿದ್ದು ಬಿಡುಗಡೆ ಮಾಡಲಾಗುವುದು, ಬೇಡದ್ದು ಇಲ್ಲ” ಎಂದು ಹೇಳಿದರು.

ಡಿಎಂಕೆ ಜೊತೆ ರಾಜಕೀಯ ಉದ್ದೇಶದ ಮೈತ್ರಿ

ನೀವು ಡಿಎಂಕೆ ಜೊತೆ ಉತ್ತಮ ಸಖ್ಯ ಹೊಂದಿದ್ದೀರಿ ಎನ್ನುವ ಬಗ್ಗೆ ಕೇಳಿದಾಗ, “ಇದು ಕೇವಲ ರಾಜಕೀಯ ಉದ್ದೇಶದ ಮೈತ್ರಿ. ಒಟ್ಟಿಗೆ ಕೆಲಸ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ” ಎಂದರು.

ತಮಿಳುನಾಡಿಗೆ ಶಿವಕುಮಾರ್ ಅವರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆಯೇ ಎನ್ನುವ ಬಿಜೆಪಿಯವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ. ಅವರ ರಕ್ಷಣೆ ಅವರು ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಹಿತವನ್ನು ನಾವು ಮಾಡಿಕೊಳ್ಳುತ್ತೇವೆ” ಎಂದು ತಿಳಿಸಿದರು.

ನಿಯೋಗಕ್ಕೆ ಸಂಸದ ತುಕಾರಾಂ ನೇಮಕ

ಸಂಸತ್ ಕ್ಷೇತ್ರಗಳ ಮರುವಿಂಗಡಣೆ ವಿರುದ್ಧದ ಹೋರಾಟದ ಬೆಳವಣಿಗೆಯ ಬಗ್ಗೆ ಕೇಳಿದಾಗ, “ಕ್ಷೇತ್ರ ಮರುವಿಂಗಡಣೆ ಹೋರಾಟದ ನಿಯೋಗಕ್ಕೆ ಹೈಕಮಾಂಡ್ ಸೂಚನೆಯಂತೆ ನಮ್ಮ ಕರ್ನಾಟಕದಿಂದ ಸಂಸದರಾದ ತುಕಾರಾಂ ಅವರನ್ನು ನೇಮಿಸಲಾಗಿದೆ” ಎಂದರು.

ವಕ್ಫ್ ಬಿಲ್ ಗೆ ಜೆಡಿಎಸ್, ಟಿಡಿಪಿ, ಚಂದ್ರಬಾಬು ನಾಯ್ಡು, ದೇವೇಗೌಡರು ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, “ಎನ್‌ಡಿಎ ಮೈತ್ರಿಯಲ್ಲಿ ಇರುವ ಕಾರಣ ಒಪ್ಪಿಗೆ ನೀಡಿದ್ದಾರೆ” ಎಂದು ಹೇಳಿದರು.

ಸಂಪುಟ ಪುನಾರಚನೆ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಮುಖ್ಯಮಂತ್ರಿಯವರನ್ನು ಕೇಳಬೇಕು” ಎಂದರು.

ಬಿಜೆಪಿ ಕಾರ್ಯಕರ್ತ ಪೊನ್ನಣ್ಣ ಅವರ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಮಾಹಿತಿಯಿಲ್ಲ, ತಿಳಿದುಕೊಂಡು ಹೇಳುತ್ತೇನೆ” ಎಂದರು.

ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಕೇಸ್: ಬಿಜೆಪಿ ನಡೆ ವಿರುದ್ಧ ಶಾಸಕ ಯತ್ನಾಳ್ ಕೆಂಡಾಮಂಡಲ

ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸಾಗರ ಪೇಟೆ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಒಡವೆ ಕದ್ದ ಆರೋಪಿ 24 ಗಂಟೆಯಲ್ಲೇ ಅರೆಸ್ಟ್

05/11/2025 8:44 PM2 Mins Read

BIG NEWS : ಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ : ಮಾಜಿ ಸಂಸದ ಡಿಕೆ ಸುರೇಶ್ 

05/11/2025 4:48 PM1 Min Read

BREAKING : SSLC, ದ್ವಿತೀಯ PUC- 2026ರ ಪರೀಕ್ಷೆ 1, 2ರ ಅಂತಿಮ ವೇಳಾಪಟ್ಟಿ ಪ್ರಕಟ

05/11/2025 4:39 PM1 Min Read
Recent News

ವಿಶ್ವಕಪ್ ಗೆದ್ದ ವನಿತೆಯರಿಂದ ‘ಪ್ರಧಾನಿ ಮೋದಿ’ಗೆ ‘NAMO’ ಜೆರ್ಸಿ ಗಿಫ್ಟ್ ; ವೀಡಿಯೋ, ಫೋಟೋ ವೀಕ್ಷಿಸಿ!

05/11/2025 10:19 PM

BREAKING ; ‘RCB’ ಅಧಿಕೃತವಾಗಿ ಮಾರಾಟಕ್ಕೆ ಸಿದ್ಧ ; ಮಾಲೀಕರಿಂದ ‘2 ಬಿಲಿಯನ್ ಡಾಲರ್’ ನಿರೀಕ್ಷೆ : ವರದಿ

05/11/2025 10:04 PM

Alert : ‘ಗೂಗಲ್ ಕ್ರೋಮ್’ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

05/11/2025 9:57 PM

ಇನ್ಮುಂದೆ ತರಬೇತಿ ಕೇಂದ್ರಗಳ ಶುಲ್ಕದಿಂದ ಚಟುವಟಿಕೆಗಳವರೆಗೆ ಎಲ್ಲವೂ ಮೇಲ್ವಿಚಾರಣೆ ; ‘ಸುಪ್ರೀಂ’ಗೆ ಕೇಂದ್ರದಿಂದ ಅಫಿಡವಿಟ್

05/11/2025 9:24 PM
State News
KARNATAKA

ಶಿವಮೊಗ್ಗ: ಸಾಗರ ಪೇಟೆ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಒಡವೆ ಕದ್ದ ಆರೋಪಿ 24 ಗಂಟೆಯಲ್ಲೇ ಅರೆಸ್ಟ್

By kannadanewsnow0905/11/2025 8:44 PM KARNATAKA 2 Mins Read

ಶಿವಮೊಗ್ಗ: ಸಾಗರ ಪೇಟೆ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 2 ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ 44 ಗ್ರಾಂ…

BIG NEWS : ಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿದೆ : ಮಾಜಿ ಸಂಸದ ಡಿಕೆ ಸುರೇಶ್ 

05/11/2025 4:48 PM

BREAKING : SSLC, ದ್ವಿತೀಯ PUC- 2026ರ ಪರೀಕ್ಷೆ 1, 2ರ ಅಂತಿಮ ವೇಳಾಪಟ್ಟಿ ಪ್ರಕಟ

05/11/2025 4:39 PM

ಕುರುಬ ಸಮಾಜದ ಸಂಪ್ರದಾಯದಂತೆ ಮಾಜಿ ಸಚಿವ ಎಚ್ ವೈ ಮೇಟಿ ಅಂತ್ಯಕ್ರಿಯೆ : ಸಿಎಂ ಸೇರಿ ಹಲವರು ಗಣ್ಯರು ಭಾಗಿ

05/11/2025 4:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.