ಬೆಂಗಳೂರು : ಬೆಂಗಳೂರು ನಗರದಲ್ಲಿ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯಲಿರುವ ರಾಜ್ಯ ಮಟ್ಟದ *77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಿಸಲು ಸಾರ್ವಜನಿಕರಿಗೆ E-Pass ವ್ಯವಸ್ಥೆ* ಯನ್ನು ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ ರವರು ತಿಳಿಸಿದ್ದಾರೆ.
ಆಸಕ್ತರು ಸೇವಾ ಸಿಂಧು ವೆಬ್ ಸೈಟ್ www.sevasindhu.karnataka.gov.in ನಲ್ಲಿ ಜನವರಿ 14 2026 ರಿಂದ ಜನವರಿ 24, 2026 ರ ಸಂಜೆ 5.00 ಗಂಟೆಯೊಳಗೆ ಸೇವಾ ಸಿಂಧು ವೆಬ್ ಸೈಟ್ ನಲ್ಲಿ ಅಗತ್ಯವಿರುವ ಎಲ್ಲ ವೈಯಕ್ತಿಕ ವಿವರಗಳನ್ನು ನಮೂದಿಸಿ ಇ-ಪಾಸ್ ಗಳನ್ನು ಪಡೆಯಬಹುದು.
ಇ-ಪಾಸ್ ಗಳನ್ನು ಹೊಂದಿರುವವರು ಪರೇಡ್ ಮೈದಾನದ ಪ್ರವೇಶ ದ್ವಾರ ಸಂಖ್ಯೆ: 05 ರಲ್ಲಿ ಪರಿಶೀಲನೆಗಾಗಿ ಇ-ಪಾಸ್ ನ ಮುದ್ರಿತ ಪ್ರತಿಯನ್ನು ಅಥವಾ ಡಿಜಿಟಲ್ (ಮೊಬೈಲ್ ) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಇ-ಪಾಸ್ ನೋಂದಣಿ ಪ್ರಕ್ರಿಯೆ ಕುರಿತು ಸಹಾಯಕ್ಕಾಗಿ ಸೇವಾ ಸಿಂಧು ವೈಬ್ ಸೈಟ್ ನಲ್ಲಿ ಸಹಾಯ ವಿಭಾಗವನ್ನು ವಿಕ್ಷೀಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIG Alert: ನಿಮಗೂ ಈ ರೀತಿಯಾಗಿ ‘WhatsApp ಮೆಸೇಜ್’ ಬಂದಿದ್ಯಾ? ಕ್ಲಿಕ್ ಮಾಡಿದ್ರೆ ‘ಬ್ಯಾಂಕ್ ಖಾತೆ’ಯೇ ಖಾಲಿ ಎಚ್ಚರ!
BIG NEWS : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಿದ ಸೆನ್ಸಾರ್ ಮಂಡಳಿ








