ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಸ್ಪೋಟಕ ತಿರುವು ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ಇನ್ನೇನು ಕೆಲವೇ ದಿನದಲ್ಲಿ ಪೊಲೀಸರು ಸರಿ ಸುಮಾರು ಸಾವಿರ ಪುಟದ ಚಾರ್ಚ್ ಶೀಟ್ ಸಲ್ಲಿಸುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.
ಇದಲ್ಲದೇ ಈಗಾಗಲೇ ಪ್ರಕರಣ ಸಂಬಂಧ ಬೇಕಾಗಿರುವ ಎಲ್ಲಾ ರೀತಿ ದಾಖಲೆಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದು, ಅವಶ್ಯಕವಾಗಿ ಬೇಕಾಗಿರುವ ಪುರಾವೆಗಳನ್ನು ಎಫ್‌ಎಸ್‌ಎಲ್‌ನಿಂದ ತರಿಸಿಕೊಂಡಿದ್ದು, ಈ ಪೈಕಿ ರೇಣುಕಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸಾವಿಗೆ ಪ್ರಮುಖ ಕಾರಣ ಮೆಗ್ಗಾರ್ ಯಂತ್ರದ ಶಾಕ್‌ನಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.