ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಇಂತಹ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಗೆ ಎಸ್ ಪಿಪಿ ವಾದಿಸಿ ಎ.13 ಆರೋಪಿ ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರಿಗೆ ಜಾಮೀನು ನೀಡಬಹುದು ಎಂಬುದಾಗಿ ವಾದಿಸಿದರು.
ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟ ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಪೊಲೀಸರ ಪರವಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸುತ್ತಾ, ಎ8 ರವಿಶಂಕರ್ ಜಾಕನಾದರೂ ಅಪಹಣದಲ್ಲಿ ಪಾತ್ರವಿದೆ. ಆತ ಬಟ್ಟೆಯಲ್ಲಿಯೂ ರೇಣುಕ್ಸಾವಮಿ ರಕ್ತದ ಕೆಲೆಗಳು ಪತ್ತೆಯಾಗಿವೆ. ಷಡ್ಯಂತ್ರ ಸಾಭೀತಿಗೆ ಒಂದೇ ಬಾರಿಗೆ ಎಲ್ಲ ಒಪ್ಪಂದವಾಗಬೇಕಿಲ್ಲ. ಎಲ್ಲಾ ಗೌಪ್ಯತೆಗಳೂ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. ಹೀಗಾಗಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು. ಎ12 ಲಕ್ಷ್ಮಣ್ ಗೆ ಜಾಮೀನು ನೀಡಬಾರದು ಎಂದರು.
ಇನ್ನೂ ಎ.13 ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾತ್ರವೇ ಇದೆ. ಹೀಗಾಗಿ ಅವರಿಗೆ ಜಾಮೀನು ನೀಡಬಹುದು ಎಂಬುದಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.
ಉಡುಪಿ:ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ