ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಮತ್ತೆ ಇನ್ಸ್‌ ಪೆಕ್ಟರ್‌ ಗಿರೀಶ್‌ ನಾಯ್ಕ್‌ ಸೇರ್ಪಡೆಯಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರರಣ ಸಂಬಂಧ ದರ್ಶನ್‌ ಅವರನ್ನು ಮೈಸೂರಿನಿಂದ ಎಸಿಪಿ ಚಂದನ್‌, ಗಿರೀಶ್‌ ನಾಯ್ಕ್‌ ಕರೆದಕೊಂಡು ಬಂದಿದ್ದರು. ಮೊದಲು ಈ ಪ್ರಕರಣದಲ್ಲಿ ಗಿರೀಶ್‌ ನಾಯ್ಕ್‌ ಅವರು ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಟಾಣೆಗೆ ಗಿರೀಶ್‌ ನಾಯ್ಕ್‌ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ. ಅಚ್ಚುಕಟ್ಟು ಠಾಣೆಗೆ ಗಿರೀಶ್‌ ವರ್ಗಾವಣE ಮಾಡಲಾಗಿತ್ತು. ಬಳಿಕ ಎಸಿಪಿ ಚಂದನ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ದರ್ಶನ್‌ & ಗ್ಯಾಂಗ್‌ ನ ಹೆಚ್ಚಿನ ವಿಚಾರಣೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಗಿರೀಶ್‌ ನಾಯ್ಕ್‌ ಅವರನ್ನು ಮತ್ತೆ ಸಹಾಯಕ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

Share.
Exit mobile version