ಬೆಂಗಳೂರು: ಚಿತ್ರದುರ್ಗದಿಂದ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾನೆ ಎನ್ನುವಂತ ಒಂದೇ ಒಂದು ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ಡಿ ಬಾಸ್ ಅಂಡ್ ಗ್ಯಾಂಗ್ ಬಂದಿತ್ತು. ಅವರನ್ನು ಶೆಡ್ ಒಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ ಹತ್ಯೆಗೈದಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಸರೆಂಡರ್ ಆದವರಿಗೆ 5 ಲಕ್ಷ ಕೊಡುವುದಾಗಿ ಆಫರ್ ನೀಡಿದ್ರು ಎಂಬುದಾಗಿ ಹೇಳಲಾಗುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರಿಗೆ ಸರೆಂಡರ್ ಆದಂತ ಆರೋಪಿಗಳಿಗೆ ತನ್ನ ಗ್ಯಾಂಗ್ ಟೀಂ ಸದಸ್ಯರ ಮೂಲಕ 5 ಲಕ್ಷ ನೀಡುವ ಆಫರ್ ಕೊಟ್ಟಿದ್ದರು ಎಂಬುದಾಗಿ ಹೇಳಲಾಗುತ್ತಿದೆ.
ದೀಪಕ್ ಮೂಲಕ ಪ್ರದೋಶ್ ಗೆ ನಟ ದರ್ಶನ್ ಗೆ ಹಲ್ಲೆ ಮಾಡಿ, ಪೊಲೀಸರಿಗೆ ಸರೆಂಡರ್ ಆದಂತವರಿಗೆ ಐದು ಲಕ್ಷ ನೀಡುವುದಾಗಿ ಹಣದ ಆಫರ್ ನೀಡಿದ್ದರು ಎನ್ನಲಾಗುತ್ತಿದೆ.
ಈಗಾಗಲೇ ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
KSRTCಯಿಂದ ಸೇವೆಯಲ್ಲಿದ್ದಾಗಲೇ ಮೃತಪಟ್ಟ ನಾಲ್ವರು ಅವಲಂಭಿತರಿಗೆ ತಲಾ 1 ಕೋಟಿ ವಿಮಾ ಪರಿಹಾರ ವಿತರಣೆ
ಜಮ್ಮು-ಕಾಶ್ಮೀರದ ಕಥುವಾದಲ್ಲಿ ‘ಎನ್ಕೌಂಟರ್’ಗೆ ಇಬ್ಬರು ಉಗ್ರರು ಬಲಿ: ಓರ್ವ ಯೋಧ ಹುತಾತ್ಮ