ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಜಾಮೀನು ಆದೇಶವನ್ನು ಅಕ್ಟೊಬರ್ 14ಕ್ಕೆ ಕಾಯ್ದಿರಿಸಿದ್ದಾರೆ. ಈ ಮೂಲಕ ಇಂದು ನಟ ದರ್ಶನ್ ಗೆ ಜಾಮೀನು ಭಾಗ್ಯ ದೊರೆಯದಂತೆ ಆಗಿದೆ.
ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಲಾಯಿತು. ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕ್ರತ್ಯ ಸಾಬೀತುಪಡಿಸುವಂತಹ ಒಂದು ಅಂಶವೂ ಇಲ್ಲ. ರಿಮ್ಯಾಂಡ್ ಅರ್ಜಿ ಸಲ್ಲಿಸಿದರೆ ಕೋರ್ಟಿಗೆ ಕೇಸ್ ಡೈರಿ ಪ್ರತಿ ನೀಡಬೇಕು. ಕೇಸ್ ಡೈರಿಯಲ್ಲ ಡೈರಿಯ ಪ್ರತಿ ಸಲ್ಲಿಸಬೇಕು. ಏಕೆಂದರೆ ಕೆಸ್ ಡೈರಿ ಕೊಟ್ಟರೆ ಅದನ್ನು ತನಿಖಾಧಿಕಾರಿ ಪಡೆಯುತ್ತಾರೆ. ಹೀಗಾಗಿಯೇ ಕೆಸ್ ಡೈರಿಯ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಬೇಕು.ಇದಕ್ಕೆ ಪ್ರಸನ್ನ ಕುಮಾರ್ ನಾವು ಕೇಸ್ ಡೈರಿ ಪ್ರತಿ ಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ ಹಿರಿಯ ವಕೀಲರು ಆ ಬಗ್ಗೆ ವಾದ ಮಂಡಿಸಬಾರದು ಎಂದರು.
ಈ ವೇಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್, ಪವಿತ್ರ ಗೌಡ ದರ್ಶನ್ ಸಂಬಂಧ ಚೆನ್ನಾಗಿರಲಿಲ್ಲ ಎಂದಿದೆ.ಆರೋಪ ಪಟ್ಟಿಯಲ್ಲಿ ಸಂಬಂಧ ಅಷ್ಟು ಚೆನ್ನಾಗಿರಲಿಲ್ಲ ಅಂತ ಇದೆ.ಪವಿತ್ರ ಗೌಡ ದರ್ಶನ್ ವಿರುದ್ಧ ಅಸಹನೆಯಿಂದ ಇದ್ದರು ಎಂದು ಉಲ್ಲೇಖಿಸಲಾಗಿದೆ. A3ಪವನ್ ಇವರ ನಡುವಿನ ಕೊಂಡಿಯಾಗಿದ್ದ ಎಂಬುದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. A3 ಪವನ್ ಗೆ ರೇಣುಕಾ ಸ್ವಾಮಿ ಬಗ್ಗೆ ತಿಳಿದಿದ್ದೆ ಜೂನ್ 5ರಂದು ಎಂದು ವಾದಿಸಿದರು.
ಆದರೆ ರೇಣುಕಾ ಸ್ವಾಮಿ ಬಗ್ಗೆ ಪವನಿಗೆ ತಿಳಿದಿದ್ದೆ ಜೂನ್ 5 ರಂದು. ದರ್ಶನ್ ಜೊತೆ ಪವಿತ್ರ ಗೌಡ ಮಾತು ನಿಲ್ಲಿಸಿದ್ದರು. ದರ್ಶನ್ ಮೇ 13 ರಿಂದ ಹಾಗೂ ಮೇ 18ರವರೆಗೆ ಕಾಶ್ಮೀರಕ್ಕೆ ತೆರಳಿದ್ದರು. ಈ ನಡುವೆ ಆಗಲು ಪವಿತ್ರಗೌಡರೊಂದಿಗೆ ಕರೆ ಮಾಡಿರಲಿಲ್ಲ. ಪತ್ನಿಯ ಜೊತೆ ವಿದೇಶಕ್ಕೆ ಹೋದ ಬಳಿಕ ದರ್ಶನ್ ಜೊತೆ ಪವಿತ್ರ ಗೌಡ ಮಾತಾಡ್ತಿರಲಿಲ್ಲ ಎಂದು ಪವನ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಹೀಗಿರುವಾಗ ದರ್ಶನ್ ಗೆ ರೇಣುಕಾ ಸ್ವಾಮಿ ಬಗ್ಗೆ ಮೊದಲೇ ತಿಳಿದಿರಲು ಹೇಗೆ ಸಾಧ್ಯ? ಎಂದರು.
ದರ್ಶನ್ ಗೆ ರೇಣುಕಾ ಸ್ವಾಮಿ ಬಗ್ಗೆ ತಿಳಿದಿದ್ದೆ ಜೂನ್ 5ರಂದು. ಪ್ರಾಜಿಕ್ಯೂಷನ್ ಆರೋಪ ಪಟ್ಟಿ ಪ್ರಕಾರವೇ ಇದು ಸ್ಪಷ್ಟವಾಗಿದೆ. ಮೋಹನ್ ರಾಜ್ ಮೇ ನಲ್ಲಿ ಕೊಟ್ಟ 40 ಲಕ್ಷ ಹಣ ಕೊಲೆಗೆ ಇಡೋದಕ್ಕೆ ಹೇಗೆ ಸಾಧ್ಯ? ಪವಿತ್ರ ಗೌಡ ದರ್ಶನ್ ಜೊತೆ ಮಾತು ಬಿಟ್ಟಿರುವಾಗ ರೇಣುಕಾ ಸ್ವಾಮಿಯ ಬಗ್ಗೆ ತಿಳಿದಿರಲು ಸಾಧ್ಯವೇ? ಮೇ ತಿಂಗಳಿನಲ್ಲಿ ಕೊಲೆಗೆಂದು ಹಣ ಸಂಗ್ರಹಡಿಸಿರುವ ಆರೋಪಿಸಲಾಗಿದೆ. ಆದರೆ ದರ್ಶನ್ ಗೆ ರೇಣುಕಾ ಸ್ವಾಮಿ ಬಗ್ಗೆ ತಿಳಿದಿದ್ದೆ ಜೂನ್ 5ರಂದು ಎಂದು ತಿಳಿಸಿದರು.
ನನ್ನ ಪ್ರಕಾರ ಜೂನ್ 9ರಂದೆ ಸ್ಥಳ ಪೊಲೀಸರ ಕಸ್ಟಡಿಯಲ್ಲಿತ್ತು. ಎಸ್ಪಿಪಿ ಜೂನ್ 11ರಂದು ಸ್ಥಳ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಸಾಮಾನ್ಯವಾಗಿ ಆರೋಪಿಗಳಿಗೆ ಸಂಶಯದ ಲಾಭ ಸಿಗಬೇಕು. ಇರಲಿ ಸಂಶಯದ ಲಾಭ ಪ್ರಾಜಿಕ್ಯೂಷನ್ ಗೆ ಕೊಡೋಣ.ಜೂನ್ 11ರಂದು ಪೊಲೀಸರು ಜಾಗದ ಕಸ್ಟಡಿ ಪಡೆದು 12ಕ್ಕೆ ಪ್ರವೇಶ ಮಾಡಿದ್ದಾರೆ. ಒಂದು ದಿನ ತಡವಾಗಿ ಕೃತ್ಯದ ಸ್ಥಳಕ್ಕೆ ಹೋಗಿದ್ದು ಯಾಕೆ? ಎಂದು ವಾದಿಸಿದರು.
ಅಲ್ಲದೆ ಎರಡು ಮರದ ಕೊಂಬೆಗಳಲ್ಲಿ ಇದ್ದ ರಕ್ತದ ಕಲೆ ಮಾಯವಾಗಿದ್ದೇಕೆ ಈ ಬಗ್ಗೆ ಎಫ್ ಎಸ್ ಎಲ್ ವರದಿಯಲ್ಲಿ ಉತ್ತರಗಳಿಲ್ಲ ಪಂಚನಾಮೆ ಸುಳ್ಳಾಗಿದ್ದರೆ ಅದನ್ನು ತಿರಸ್ಕರಿಸಬೇಕು. ದೇಹದ ಪಂಚನಾಮಯಲ್ಲಿ ವೃಷಣದ ಬಳಿ ಗಾಯದ ಬಗ್ಗೆ ಉಲ್ಲೇಖವಿಲ್ಲ. ದೇಹದ ಬೇರೆಬೇರೆ ಗಾಯದ ಬಗ್ಗೆ ಪೋಸ್ಟ್ ಮಾರ್ಟಂ ಮಾಡಿದ ವೈದ್ಯರು ಹೇಳುತ್ತಾರೆ. ಆದರೆ ಬಲತೊಡೆಯ ಕೆಳಭಾಗದಲ್ಲಿ ಹೆಪ್ಪುಗಟ್ಟಿದ ಗಾಯದ ಬಗ್ಗೆನೂ ಹೇಳುತ್ತಾರೆ ಆದರೆ ಬಲತೊಡೆಯ ಕೆಳಭಾಗದಲ್ಲಿ ವೃಷಣವಿರುತ್ತದೆಯಾ? ಎಂದು ಪ್ರಶ್ನಿಸಿದರು.
ಮಣ್ಣು ಮೆತ್ತಿದ ದರ್ಶನ್ ಶೂ ವಶಕ್ಕೆ ಪಡೆಯಲಾಗಿದೆ. ಪಂಚನಾಮದಲ್ಲಿ ಶೂನಲ್ಲಿ ರಕ್ತದ ಕಲೆ ಬಗ್ಗೆ ಉಲ್ಲೇಖಿಸಿಲ್ಲ. ಎಫ್ ಎಸ ಎಲ್ ತಜ್ಞರು ಪಂಚರ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದೆ. ಆಗ ಇಲ್ಲದ ರಕ್ತದ ಕಲೆ ನಂತರ ಹೇಗೆ ಬಂತು? ಶೂನಲ್ಲಿ ಮೆತ್ತಿದ ಮಣ್ಣಿನ ಬಗ್ಗೆಯೂ ಪಂಚನಾಮೆಯಲ್ಲಿ ಚಕಾರವಿಲ್ಲ. ಹೀಗಿರುವಾಗ ಎಫ ಎಸ ಎಲ್ ವರದಿಯ ವೇಳೆ ಮಣ್ಣು ಹೇಗೆ ಬಂತು? ಎಂದು ಸಿವಿ ನಾಗೇಶ್ ಪ್ರಶ್ನಿಸಿದರು.
ಪೋಲೀಸರ ಪರ ಎಸ್.ಪಿ.ಪಿ ಪ್ರಸನ್ನ ಕುಮಾರ ವಾದ ಮಂಡನೆ
ಈ ವೇಳೆ ಪೊಲೀಸರ ಪರ ಪ್ರಸನ್ನಕುಮಾರ್ ವಾದ ಮಂಡಿಸಿ, ಆರೋಪಿ ಸಾಕ್ಷಿಗಳ ಸಿಡಿಆರ್ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ಸುಮಾರು ಹತ್ತು ಸಾವಿರ ಪುಟಗಳ ಸಿಡಿ ಆರ್ ವಿಶ್ಲೇಷಣೆ ಮಾಡಲಾಗಿದೆ ಸಿಡಿಆರ್ ನಲ್ಲಿ ಟವರ್ ನ ಲಾಂಗಿಟ್ಯೂಡ್ ಲ್ಯಾಟಿಟ್ಯೂಡ್ ಸಂಗ್ರಹಿಸಲಾಗಿದೆ.ತಾಂತ್ರಿಕ ಸಾಕ್ಷಿಗಳು ಕೂಡ ತನಿಖೆಯ ಆರೋಪ ಪಟ್ಟೆಯ ಭಾಗವಾಗಿದೆ. ಐ ಪಿ ಅಡ್ರೆಸ್ ಆಧಾರದಲ್ಲಿ ನಾವು ತನಿಖೆ ನಡೆಸಿಲ್ಲ.
A14 ತನ್ನ ಮೊಬೈಲ್ ನಲ್ಲಿ ಸಾಕ್ಷಿ ನಾಶದ ಕುರಿತು ಸರ್ಚ್ ಮಾಡಿದ್ದಾನೆ. ಗೂಗಲ್ ಸರ್ಚ್ ನಲ್ಲಿ ಲೊಕೇಶನ್ ತೆಗೆಯುವುದು ಹೇಗೆ? ಪೊಲೀಸರು ಹೇಗೆ ಲೊಕೇಶನ್ ಪತ್ತೆ ಹಚ್ಚುತ್ತಾರೆ? ಲೊಕೇಶನ್ ಸಿಗದಂತೆ ಮಾಡುವುದು ಹೇಗೆ? ಎಂದು ಸರ್ಚ್ ಮಾಡಿದ್ದಾನೆ. ಕೃತ್ಯದಲ್ಲಿ ಭಾಗಿಯಾಗದೆ ಇದನ್ನೆಲ್ಲ ಸರ್ಚ್ ಮಾಡಲು ಹೇಗೆ ಸಾಧ್ಯ? ತಂತ್ರಜ್ಞಾನ ತುಂಬಾ ಅಭಿವೃದ್ಧಿಯಾಗಿದೆ ನಿಖರತೆ ಇದೆ.
ದರ್ಶನ್ ಬಳಸಿದ ಸಿಮ್ ಹೇಮಂತ್ ಹೆಸರಿನಲ್ಲಿದೆ ಎಂದು ವಾದಿಸಿದ್ದಾರೆ. ಆದರೆ ಪವಿತ್ರ ಗೌಡ ಮಿಸ್ ಯು, ಲವ್ ಯು ಮುದ್ದು ಎಂದೆಲ್ಲ ಹೇಮಂತ್ ಗೆ ಮೆಸೇಜ್ ಮಾಡಿದ್ದಾರೆ ಎಂದು ಹೇಳುತ್ತಿದ್ದೀರಾ? ಯು ಆರ್ ದ ಮೋಸ್ಟ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬ ಐ ವಿಲ್ ಆಲ್ವೇಸ್ ಚೂಸ್ ಯು ಎಂದೆಲ್ಲ ಮೆಸೇಜ್ ಇದೆ. ಮೇ 17ಕ್ಕೆ ಅಡ್ವಾನ್ಸ್ ಹ್ಯಾಪಿ ಅನಿವೆರ್ಸರಿ ಎಂದು ಮೆಸೇಜ್ ಮಾಡಿದ್ದು ಮೇ 18ಕ್ಕೆ ದರ್ಶನ್ ನಂಬರ್ ಬ್ಲಾಕ್ ಮಾಡಿದ್ದಾರೆ.
ಮೂರೇ ದಿನಕ್ಕೆ ಮತ್ತೆ ಚಾಟಿಂಗ್ ಆರಂಭಿಸಿದ್ದಾರೆ. ಹೀಗಾಗಿ ದರ್ಶನ್ ಮತ್ತು ಪವಿತ್ರ ಗೌಡ ಮಾತುಕತೆ ನಡೆಸುತ್ತಿರಲಿಲ್ಲ ಎನ್ನಲಾಗಲ್ಲ.ಬಿಲಿಯನೇರ್ ಬಳಿ ಸಾವಿರಾರು ಉದ್ಯೋಗಿಗಳು ಇದ್ದಾರೆ ಎಂದು ಜಾಮೀನು ನೀಡಲಾಗಲ್ಲ. ಸುಪ್ರೀಂ ಕೋರ್ಟ್ ಉದ್ಯಮಿ ಸುಬ್ರತಾ ರಾಯ್ ಗೆ ಜಾಮೀನು ನೀಡಿರಲಿಲ್ಲ. ಆರ್ಥಿಕ ಅಪರಾಧಕ್ಕೂ ಜಾಮೀನು ಕೊಟ್ಟಿರಲಿಲ್ಲ. ಹೀಗಾಗಿ ದರ್ಶನ್ ಗೆ ಜಾಮೀನು ನೀಡಿದಂತೆ ಪ್ರಸನ್ನ ಕುಮಾರ್ ಮನವಿ ಮಾಡಿದರು.
ದೇವನಹಳ್ಳಿ ಕೆಐಎಡಿಬಿ ಭೂಹಗರಣ ಆರೋಪ: ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ
BIG NEWS: ‘ಕ್ರೈಂ ಗಣೇಶ್’ ಎಂದೇ ಖ್ಯಾತರಾಗಿದ್ದ ‘ಪತ್ರಕರ್ತ ಗಣೇಶ್’ ಇನ್ನಿಲ್ಲ | Crime Ganesh No More
BREAKING: ಕನ್ನಡ ಚಲನಚಿತ್ರ ನಿರ್ಮಾಪಕ, ಉದಯ ಟಿವಿ ಅಧ್ಯಕ್ಷ ಸೆಲ್ವಂ ಇನ್ನಿಲ್ಲ