ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಬಂಧಿಸಲ್ಪಟ್ಟು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ ಅವರು ಜೈಲುಪಾಲಾಗಿದ್ದಾರೆ. ಈ ಪ್ರಕರಣ ಸಂಬಂಧ ರೇಣುಕಾಸ್ವಾಮಿ ಹತ್ಯೆ ನಡೆಸಿದಂತ ಸ್ಥಳದ ಶೆಡ್ ಮಾಲಿಕರು ತೆರಿಗೆ ಪಾವತಿ ಮಾಡದೇ ಇರೋದಾಗಿ ತಿಳಿದು ಬಂದಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಶೆಡ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಶೆಡ್ ಒಂದಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬರಲಾಗಿತ್ತು. ಪಟ್ಟಣಗೆರೆ ಬಳಿಯ ಶೆಡ್ ನಲ್ಲಿ ಚಿತ್ರಹಿಂಸೆ ನೀಡಿ, ಆತನನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಪಟ್ಟಣಗೆರೆ ಶೆಡ್ ಮಾಲೀಕ ಆಸ್ತಿ ತೆರಿಗೆ ಪಾವತಿಸದೇ ಇರುವ ವಿಚಾರ ಬೆಳಕಿಗೆ ಬಂದಿದೆ. 2008ರಿಂದ ಪಟ್ಟಣಗೆರೆಯ ಶೆಡ್ ಮಾಲೀಕ ತೆರಿಗೆಯನ್ನು ಪಾವತಿಸದೇ ವಂಚಿಸಿರೋ ಆರೋಪ ಕೇಳಿಬಂದಿದೆ. ಹೀಗಾಗಿ ಬಿಬಿಎಂಪಿ ಆಡಳಿತಾಧಿಕಾರಿ ಇಷ್ಟು ದಿನ ಹೇಗೆ ತೆರಿಗೆ ಕಟ್ಟಿಸಿಕೊಳ್ಳದೇ ಬಾಕಿ ಬಿಟ್ಟಿದ್ದೀರಿ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಪಟ್ಟಣಗೆರೆ ಶೆಡ್ ಮಾಲೀಕ ಬಿಬಿಎಂಪಿಯ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ, ನೋಟಿಸ್ ನೀಡಿ, ಕಟ್ಟುವಂತೆ ಸೂಚಿಸಲಾಗಿದೆ. ಈ ಮೂಲಕ ನಟ ದರ್ಶನ್ ಗೆ ಸಹಾಯ ಮಾಡಿದಂತ ಪಟ್ಟಣಗೆರೆ ಶೆಡ್ ಮಾಲೀಕನಿಗೂ ಸಂಕಷ್ಟ ಎದುರಾದಂತೆ ಆಗಿದೆ.
BREAKING : ‘ಹಜ್ ಯಾತ್ರೆ’ ವೇಳೆ 68 ಅಲ್ಲ, 98 ಭಾರತೀಯರು ಸಾವು : ವಿದೇಶಾಂಗ ಸಚಿವಾಲಯ ಮಾಹಿತಿ
BREAKING: IAS ಅಧಿಕಾರಿ ರೋಹಿಣಿ ಸಿಂಧೂರಿ, ಪತಿ ವಿರುದ್ಧ ‘ಖ್ಯಾತ ಗಾಯಕ ಲಕ್ಕಿ ಆಲಿ’ ಲೋಕಾಯುಕ್ತಕ್ಕೆ ದೂರು