ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಇದರ ನಡುವೆ ನಟ ದರ್ಶನ್ ಸಹಚರರಿಂದ ಸಾಕ್ಷಿದಾರರಿಗೆ ಬೆದರಿಕೆ ಆರೋಪದಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಈ ಬಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಪೊಲೀಸರು ಮಾಹಿತಿ ಕೂಡ ನೀಡಿದ್ದಾರೆ. ನಟ ದರ್ಶನ್ ಸಹಚರರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋದಾಗಿ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ‘ನಟ ದರ್ಶನ್’ ಜೈಲು ಪಾಲು: ಇದು ಎಷ್ಟನೇ ಬಾರಿ ಗೊತ್ತಾ?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಅವರನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ಆಗಿದೆ. ಹಾಗಾದ್ರೇ ಇದು ಎಷ್ಟನೇ ಬಾರಿ ಅನ್ನೋ ಬ್ಗಗೆ ಮುಂದೆ ಓದಿ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಬಂದು, ಬೆಚ್ಚಿ ಬೀಳಿಸುವ ರೀತಿಯಲ್ಲಿ ಟಾರ್ಚರ್ ಕೊಟ್ಟು ನಟ ದರ್ಶನ್ ಅಂಡ್ ಗ್ಯಾಂಗ್ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ಎ1 ಆರೋಪಿಯಾದಂತ ಪವಿತ್ರಾ ಗೌಡ, ಎ2 ಆರೋಪಿಯಾದ ನಟ ದರ್ಶನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.
ಈಗಾಗಲೇ ಪವಿತ್ರಾ ಗೌಡ ಜೈಲುಪಾಲಾಗಿದ್ದರೇ, ಇಂದು ನಟ ದರ್ಶನ್ ಕೂಡ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಬಳಿಕ, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದೆ. ಜುಲೈ.4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ನಟ ದರ್ಶನ್ ಎಷ್ಟು ಬಾರಿಗೆ ಜೈಲಿಗೆ ಹೋಗಿದ್ದಾರೆ ಗೊತ್ತಾ?
ಇಂದು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರೇ, ಇದಕ್ಕೂ ಮೊದಲು ಪತ್ನಿಯೊಂದಿಗೆ ಜಗಳ ಮಾಡಿಕೊಂಡಾಗಲೂ ಜೈಲು ಪಾಲಾಗಿದ್ದರು. ಈ ಮೊದಲು ಪತ್ನಿ ಜೊತೆಗೆ ಜಗಳದ ಕಾರಣ ಜೈಲುಪಾಲಾಗಿದ್ದಂತ ನಟ ದರ್ಶನ್, ಈಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಮೂಲಕ ಎರಡು ಬಾರಿ ನಟ ದರ್ಶನ್ ಜೈಲು ಪಾಲು ಆದಂತೆ ಆಗಿದೆ.
‘ದ್ವಿತೀಯ PU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಪರೀಕ್ಷೆ-3ಕ್ಕೆ ಉಚಿತವಾಗಿ ‘BMTC’ ಬಸ್’ನಲ್ಲಿ ತೆರಳಲು ಅವಕಾಶ
Kenya Kills Crows : ಭಾರತದಿಂದ ಹೋಗುವ ‘ಕಾಗೆ’ಗಳ ಮಾರಣಹೋಮಕ್ಕೆ ‘ಕೀನ್ಯಾ’ ಸಜ್ಜು ; ಕಾರಣವೇನು ಗೊತ್ತಾ.?