ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧಿಸಲ್ಪಟ್ಟು ಜೈಲುಪಾಲಾಗಿರುವಂತ ಎ.1 ಆರೋಪಿ ಪವಿತ್ರಾಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ 17 ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ನ್ಯಾಯಾಲಯದ ಮುಂದೆ ನಿರಾಕರಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಎ1 ಆರೋಪಿ ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ಮಾಹಿತಿ ನೀಡಿದ್ದು, ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ದೋಷಾರೋಪ ಮಾಡಿದ್ದರು. ಆದರೇ ಯಾರೊಬ್ಬರೂ ದೋಷಾರೋಪಗಳನ್ನು ಒಪ್ಪಿಕೊಂಡಿಲ್ಲ. ಪೊಲೀಸರು ಗ್ರಂಥಗಳಂತೆ ಚಾರ್ಜ್ ಶೀಟ್ ಹಾಕಿದ್ದಾರೆ. ಹೇಗೆ ಒಪ್ಪಿಕೊಳ್ಳುವುದಕ್ಕೆ ಆಗುತ್ತೆ ಎಂಬುದಾಗಿ ಪ್ರಶ್ನಿಸಿದರು.
ನವೆಂಬರ್.10ರಂದು ಖುದ್ದು ಹಾಜರಾಗುವುದಕ್ಕೆ ಹೇಳ್ತಾರೋ ಅಥವಾ ವೀಡಿಯೋ ಕಾನ್ಫೆರೆನ್ಸ್ ಗೆ ಹೇಳುತ್ತಾರೋ ಕಾದು ನೋಡಬೇಕು ಎಂಬುದಾಗಿ ಕೊಲೆ ಆರೋಪಿ ಪರ ವಕೀಲ ನಾರಾಯಣಸ್ವಾಮಿ ತಿಳಿಸಿದರು.
BREAKING : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೇ ತಯಾರಕ `ಪೆನ್ನ ಓಬಳಯ್ಯ’ ನಿಧನ : ಸಿಎಂ ಸಂತಾಪ








