ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಆರಂಭದಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಬಂಧಿತ ಆರೋಪಿಗಳ ಸಂಖ್ಯೆ ಏರಿಕೆಯಾಗಿದೆ. ಬರೋಬ್ಬರಿ 19 ಆರೋಪಿಗಳನ್ನು ಪೊಲೀಸರು ಎಡೆಮುರಿಕಟ್ಟಿ ಬಂಧಿಸಿದ್ದಾರೆ. ಹಾಗಾದ್ರೇ ಆ ಬಗ್ಗೆ ಮುಂದೆ ಓದಿ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕಿಡ್ನ್ಯಾಪ್ ಮಾಡಿಕೊಂಡು ಬಂದು, ನಟ ದರ್ಶನ್ ಅಂಡ್ ಗ್ಯಾಂಗ್ ತೀವ್ರವಾಗಿ ಹಲ್ಲೆ ನಡೆಸಿ, ಮರ್ಮಾಂಗಕ್ಕೆ ಒದ್ದು ಹತ್ಯೆಗೈದಿತ್ತು. ಆ ಬಳಿಕ ಶವವನ್ನು ಮೋರಿಗೆ ಎಸೆದಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಇಂದು ಚಿತ್ರದುರ್ಗದಲ್ಲಿ ಇಬ್ಬರು, ಬೆಂಗಳೂರಲ್ಲಿ ಮತ್ತಿಬ್ಬರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾದಂತೆ ಆಗಿದೆ.
ಯಾರು ಯಾರು ಆ 19 ಆರೋಪಿಗಳು.?
A1 ಪವಿತ್ರ : ಬಂಧಿತ
A2 ದರ್ಶನ್ : ಬಂಧಿತ
A3 ಪವನ್ : ಬಂಧಿತ
A4 ರಾಘವೇಂದ್ರ : ಬಂಧಿತ
A5 ನಂದೀಶ : ಬಂಧಿತ
A6 ಜಗದೀಶ @ ಜಗ್ಗ : ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿ
A7 ಅನು@ ಅನು ಕುಮಾರ್ : ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿ
A8 ರವಿ : ಬಂಧಿತ
A9. ರಾಜು : ಚಿತ್ರದುರ್ಗ ಪೊಲೀಸರಿಂದ ಹುಡುಕಾಟ
A10 ವಿನಯ: ಬಂಧಿತ
A11 ನಾಗರಾಜು: ಬಂಧಿತ
A12 ಲಕ್ಷ್ಮಣ: ಬಂಧಿತ
A13 ದೀಪಕ್: ಬಂಧಿತ
A14 ಪ್ರದೋಶ್: ಬಂಧಿತ
A15 ಕಾರ್ತಿಕ್: ಬಂಧಿತ
A16 ಕೇಶವಮೂರ್ತಿ : ಬಂಧಿತ
A17 ನಿಖಿಲ್ ನಾಯಕ್: ಬಂಧಿತ
A18 ಪುನೀತ್ : ಬಂಧಿತ
A19 ಹೇಮಂತ್ : ಬಂಧಿತ
ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರನ ವಿರುದ್ಧ ‘420 ಕೇಸ್’ ದಾಖಲು | Union Minister V.Somanna
ರೈತರೇ ನಿಮ್ಮ ಬೆಳೆಗೆ ‘ಸೈನಿಕ ಹುಳು’ ಬಾಧೆಯೇ? ಜಸ್ಟ್ ಈ ನಿಯಂತ್ರಣ ಕ್ರಮವಹಿಸಿ