ನವದೆಹಲಿ: ಖ್ಯಾತ ಗಾಂಧಿವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ ಪಸಲಾ ಕೃಷ್ಣ ಭಾರತಿ ಅವರು ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ದೀನದಲಿತರಲ್ಲಿ, ವಿಶೇಷವಾಗಿ ದಲಿತರಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಪ್ರಯತ್ನಗಳಿಗಾಗಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ನೀಡಿದ ಉದಾರ ಕೊಡುಗೆಗಳಿಗಾಗಿ ಅವರು ಹೆಸರುವಾಸಿಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣ ಭಾರತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಎತ್ತಿಹಿಡಿಯುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವ್ಯಕ್ತಿ ಎಂದು ಸ್ಮರಿಸಿದ್ದಾರೆ.
“ಪಸಲ ಕೃಷ್ಣ ಭಾರತಿ ಅವರ ನಿಧನದಿಂದ ನೋವಾಗಿದೆ. ಅವರು ಗಾಂಧಿವಾದಿ ಮೌಲ್ಯಗಳಿಗೆ ಸಮರ್ಪಿತರಾಗಿದ್ದರು ಮತ್ತು ಬಾಪು ಅವರ ಆದರ್ಶಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ತನ್ನ ಹೆತ್ತವರ ಪರಂಪರೆಯನ್ನು ಅವರು ಅದ್ಭುತವಾಗಿ ಮುಂದುವರಿಸಿದರು” ಎಂದು ಪ್ರಧಾನಿ ಭಾರತಿ ಅವರೊಂದಿಗಿನ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಭಾರತಿ ಅವರ ನಿಧನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ.