ಮುಂಬೈ : ಭಾರತದ ಮುಂಚೂಣಿ ರೀಟೇಲರ್ ಆದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಹಾಗೂ ಇಸ್ರೇಲ್ ನ ಡೆಲ್ಟಾ ಗಲಿಲ್ ಇಂಡಸ್ಟ್ರೀಸ್ ಸಂಬಂಧಿಸಿದಂತೆ ಮಂಗಳವಾರದಂದು ಪ್ರಮುಖ ಘೋಷಣೆ ಹೊರಬಿದ್ದಿದೆ. ಇದರೊಂದಿಗೆ ಭಾರತದಲ್ಲಿ ಈ ಎರಡೂ ಕಂಪನಿಗಳು ಕಾರ್ಯತಂತ್ರ ಪಾಲುದಾರಿಕೆಯನ್ನು ಪ್ರಕಟಿಸಿವೆ.
ಶೇಕಡಾ 50/50ರ ಜಂಟಿ ಉದ್ಯಮ ಇದಾಗಿದೆ. ಡೆಲ್ಟಾ ಗಲಿಲ್ ಟೆಲ್ ಅವಿವ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿದೆ. ಈ ಸಂಸ್ಥೆಯು ಜಾಗತಿಕ ದಿರಿಸು ಉತ್ಪಾದಕರಾಗಿ ಗುರುತಿಸಿಕೊಂಡಿದ್ದು, ಜತೆಗೆ ಮಾರ್ಕೆಟಿಂಗ್ ಸಹ ಮಾಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳು, ಖಾಸಗಿ ಲೇಬಲ್ ಗಳನ್ನು ಒಳಗೊಂಡ ದಿರಿಸುಗಳನ್ನು ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ತಯಾರಿಸುತ್ತದೆ. ಇದರಲ್ಲಿ ಡೆನಿಮ್ ಬಟ್ಟೆಗಳು ಸೇರಿವೆ. ಇನ್ನು ಈಗ ರಿಲಯನ್ಸ್ ರೀಟೇಲ್ ಹಾಗೂ ಡೆಲ್ಟಾ ಗಲಿಲ್ ಒಟ್ಟಾಗಿ ಭಾರತದ ಬಟ್ಟೆ ಮಾರುಕಟ್ಟೆಯನ್ನು ಪುನರ್ ವ್ಯಾಖ್ಯಾನಿಸುವ ಗುರಿಯನ್ನು ಇರಿಸಿಕೊಂಡಿವೆ.
ಈ ಪಾಲುದಾರಿಕೆ ಉದ್ದೇಶ ಏನೆಂದರೆ, ಭಾರತೀಯ ಗ್ರಾಹಕರ ವಿಶಿಷ್ಟ ಬೇಡಿಕೆಗಳನ್ನು ಪೂರೈಸುವ ದಿರಿಸುಗಳ ನವೀನ ರೀತಿಯ ವೇದಿಕೆಯನ್ನು ಆರಂಭಿಸುವುದಾಗಿದೆ. ಡೆಲ್ಟಾ ಗಲಿಲ್ ತನ್ನ ನವೀನ ಬಗೆಯ ಹಾಗೂ ಉತ್ಪನ್ನಗಳ ಶ್ರೇಷ್ಠತೆಗೆ ದೊಡ್ಡ ಮಟ್ಟದ ಹೆಸರಾಗಿದೆ. ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಹೆಜ್ಜೆಗುರುತನ್ನು ವಿಸ್ತರಿಸುವುದಕ್ಕೆ ಈ ಜಂಟಿ ಉದ್ಯಮ ಸಹಕಾರಿ ಆಗುತ್ತದೆ. ಗಲಿಲ್ ಸಂಸ್ಥೆಯ ಸುಂದರ ಉಡುಪುಗಳ ಪೋರ್ಟ್ ಫೋಲಿಯೋ ವ್ಯಾಪಕವಾಗಿದ್ದು, ಗ್ರಾಹಕರ ಮೆಚ್ಚುಗೆಯನ್ನು ಸಹ ಪಡೆದಿದೆ. ಅವುಗಳನ್ನು ರೀಟೇಲ್, ಹೋಲ್ ಸೇಲ್ ಹಾಗೂ ಡಿಜಿಟಲ್ ಚಾನೆಲ್ ಗಳ ಮೂಲಕವಾಗಿ ಖರೀದಿಸಲು ಈ ಸಹಯೋಗದೊಂದಿಗೆ ಅನುವಾಗುತ್ತದೆ. ಇದೇ ವೇಳೆ ಈಗಾಗಲೇ ಹೆಸರಾಗಿರುವ ರಿಲಯನ್ಸ್ ರೀಟೇಲ್ ನ ಸ್ವಂತ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ವಿನ್ಯಾಸ ಮಾಡುವುದಕ್ಕೆ ಹಾಗೂ ತಯಾರಿಸುವುದಕ್ಕೆ ಡೆಲ್ಟಾ ಗಲಿಲ್ ಬೆಂಬಲ ನೀಡುತ್ತದೆ.
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ವಿ ಸುಬ್ರಮಣ್ಯಂ ಮಾತನಾಡಿ , “ಡೆಲ್ಟಾ ಗಲಿಲ್ನ ಇಂಟಿಮೇಟ್ ಉಡುಪು ಮತ್ತು ಆಕ್ವಿವ್ ಉಡುಪುಗಳಲ್ಲಿ ಜಾಗತಿಕ ಆವಿಷ್ಕಾರಕ ಎಂಬ ಖ್ಯಾತಿಯನ್ನು ಹೊಂದಿದ್ದು, ಅದನ್ನು ರಿಲಯನ್ಸ್ನ ಗುಣಮಟ್ಟ ಮತ್ತು ಬದ್ಧತೆಯ ಸಂಕಲ್ಪದ ಜೊತೆ ತಲುಪಿಸುತ್ತದೆ. ಇದರೊಂದಿಗೆ ಭಾರತೀಯ ಗ್ರಾಹಕರಿಗೆ ನವೀನ ಉತ್ಪನ್ನಗಳು ತಲುಪಿಸುತ್ತೇವೆ. ಒಟ್ಟಾಗಿ, ನಮ್ಮ ರೀಟೇಲ್ ಪ್ಲಾಟ್ಫಾರ್ಮ್ಗಳಾದ್ಯಂತ ಇಂಟಿಮೇಟ್ ಉಡುಪು ಮತ್ತು ಆಕ್ಟಿವ್ ಉಡುಪುಗಳ ವಿಭಾಗಗಳಲ್ಲಿ ಗ್ರಾಹಕರಿಗೆ ದೊರೆಯುವಂಥ ಆಫರ್ ಗಳನ್ನು ಹೆಚ್ಚಿಸಲು ನಾವು ಸಿದ್ಧರಾಗಿದ್ದೇವೆ,” ಎಂದಿದ್ದಾರೆ.
ಡೆಲ್ಟಾ ಗಲಿಲ್ ಸಿಇಒ ಐಸಾಕ್ ದಬಾಹ್ ಮಾತನಾಡಿ , “ರಿಲಯನ್ಸ್ ರೀಟೇಲ್ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ಕಂಪನಿಗಳಲ್ಲಿ ಒಂದಾಗಿದೆ ಮತ್ತು 140 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದ ಗ್ರಾಹಕ ಮಾರುಕಟ್ಟೆಗೆ ನಾವು ಪ್ರವೇಶಿಸಲು ನೋಡುತ್ತಿರುವಾಗ ರಿಲಯನ್ಸ್ ಕಂಪನಿಯೊಂದಿಗೆ ಪಾಲುದಾರರಾಗಲು ತುಂಬಾ ಹೆಮ್ಮೆಪಡುತ್ತೇವೆ,” ಎಂದು ಹೇಳಿದ್ದಾರೆ.
“ಈ ಸಹಯೋಗವು ನಮ್ಮ ಉತ್ಪನ್ನ ವಿನ್ಯಾಸ, ನಾವೀನ್ಯತೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ರಿಲಯನ್ಸ್ ರೀಟೇಲ್ನ ವ್ಯಾಪಕವಾದ ರೀಟೇಲ್ ನೆಟ್ವರ್ಕ್ ಮತ್ತು ವಿತರಣಾ ವ್ಯಾಪ್ತಿಯೊಂದಿಗೆ ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಇದು ದೇಶಾದ್ಯಂತ ಇಂಟಿಮೇಟ್ ಉಡುಪು ಮತ್ತು ಆಕ್ಟಿವ್ ಉಡುಪುಗಳ ವರ್ಗಗಳ ವೇಗವರ್ಧಿತ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಪುರುಷರ ಮತ್ತು ಮಹಿಳೆಯರ ಇಂಟಿಮೇಟ್ ದಿರಿಸುಗಳಿಗೆ ಮುಂದಿನ 18 ತಿಂಗಳಲ್ಲಿ ಡೆಲ್ಟಾ ಫ್ಯಾಮಿಲಿ ಲೈಫ್ಸ್ಟೈಲ್ ಸ್ಟೋರ್ಗಳು ಮತ್ತು ಅಥೇನಾ ಬ್ರ್ಯಾಂಡ್ನೊಂದಿಗೆ ಮುಂದುವರಿಸುವುದಕ್ಕೆ ರಿಲಯನ್ಸ್ನೊಂದಿಗೆ ಈ ಪ್ರಯಾಣ ಪ್ರಾರಂಭಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದಿದ್ದಾರೆ.
ಭಾರತದಲ್ಲಿನ ಅತಿ ದೊಡ್ಡ ರೀಟೇಲ್ ಕಂಪನಿಯಾಗಿ ರಿಲಯನ್ಸ್ ರಿಟೇಲ್ ಬಹಳ ದೊಡ್ಡ ಮಟ್ಟದಲ್ಲಿ ದೇಶೀಯ ಮಾರಾಟ ಮತ್ತು ವಿತರಣಾ ಪರಿಣತಿಯನ್ನು ಹೊಂದಿದೆ. ಈ ಜಂಟಿ ಉದ್ಯಮವು ರಿಲಯನ್ಸ್ ರೀಟೇಲ್ಗೆ ಡೆಲ್ಟಾ ಗಲಿಲ್ನ ಉದ್ಯಮದ ಪರಿಣತಿ ಮತ್ತು ಇಂಟಿಮೇಟ್ ಉಡುಪು ಮತ್ತು ಆಕ್ಟಿವ್ ಉಡುಪುಗಳಲ್ಲಿನ ನಾವೀನ್ಯತೆ ಸಾಮರ್ಥ್ಯಗಳನ್ನು ಇನ್ನೂ ಹೆಚ್ಚು ಅರಿಯಲು ಅನುವು ಮಾಡಿಕೊಡುತ್ತದೆ. ಅಂದ ಹಾಗೆ ಇದು ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹವಾಗಿ ಬೆಳೆಯಲು ಸಿದ್ಧವಾಗಿರುವ ಪ್ರಮುಖ ಉತ್ಪನ್ನ ವಿಭಾಗಗಳಾಗಿವೆ.
IAF ವಿಂಗ್ ಕಮಾಂಡರ್ ವಿರುದ್ಧ ಮಹಿಳಾ ಫ್ಲೈಯಿಂಗ್ ಆಫೀಸರ್ ಅತ್ಯಾಚಾರ ಆರೋಪ: FIR ದಾಖಲು | IAF Wing Commander
ಬೆಂಗಳೂರಲ್ಲಿ ‘ಪೌರ ಕಾರ್ಮಿಕರ ಸೇವೆ ಕಾಯಂ’ ಪ್ರಕ್ರಿಯೆ ಶೀಘ್ರವೇ ಪೂರ್ಣ: BBMP ಮುಖ್ಯ ಆಯುಕ್ತರು
BIG UPDATE : ಯಜಮಾನಿಯರಿಗೆ ಗುಡ್ ನ್ಯೂಸ್ : ಕೊನೆಗೂ 1 ತಿಂಗಳ ‘ಗೃಹಲಕ್ಷ್ಮಿ’ ಹಣ ಖಾತೆಗೆ ಜಮಾ!