ಮುಂಬೈ : ರಿಲಯನ್ಸ್ ರೀಟೇಲ್ ನಿಂದ ಶುಕ್ರವಾರ ಘೋಷಣೆ ಮಾಡಿರುವಂತೆ, ಕೆಲ್ವಿನೇಟರ್ ಸ್ವಾಧೀನ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ವಲಯದಲ್ಲಿ ತನ್ನ ನಾಯಕತ್ವ ವ್ಯಾಪಿಸಿಕೊಳ್ಳುವುದಕ್ಕೆ ಸಿದ್ಧವಾಗಿರುವ ರಿಲಯನ್ಸ್ ರೀಟೇಲ್ ಗೆ ಇದು ಕಾರ್ಯತಂತ್ರ ಕ್ರಮವಾಗಿ, ಮಹತ್ವದ ಮೈಲುಗಲ್ಲಾಗಿದೆ. ಈ ಸ್ವಾಧೀನದ ಬೆಳವಣಿಗೆಯು ದೇಶದಾದ್ಯಂತ ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯ ಮತ್ತು ಆಯ್ಕೆಯನ್ನು ದೊರಕಿಸುವ ಮೂಲಕ ಭಾರತದಲ್ಲಿ ಎಫ್ಎಂಸಿಜಿ ವಲಯದ ಭವಿಷ್ಯವನ್ನು ರೂಪಿಸುವಲ್ಲಿ ಕಂಪನಿಯ ಬಲವಾದ ಬದ್ಧತೆಗೆ ಸಾಕ್ಷಿಯಾಗಿದೆ.
ನೂರು ವರ್ಷಕ್ಕೂ ಹೆಚ್ಚು ಸಮಯದಿಂದ ನಂಬಿಕೆ ಮತ್ತು ನಾವೀನ್ಯತೆಗೆ ಸಮಾನಾರ್ಥಕ ಪದವಾದ ಬ್ರ್ಯಾಂಡ್ ಆಗಿರುವ ಕೆಲ್ವಿನೇಟರ್, ಮನೆ ಬಳಕೆಗಾಗಿ ವಿದ್ಯುತ್ ರೆಫ್ರಿಜರೇಟರ್ ಅನ್ನು ತಯಾರಿಸುವುದರಲ್ಲಿ ಜಾಗತಿಕವಾಗಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ, ಇದು 1970 ಮತ್ತು 1980 ರ ದಶಕಗಳಲ್ಲಿ “ದಿ ಕೂಲೆಸ್ಟ್ ಒನ್” ಎಂಬ ತನ್ನ ಮನೆಮಾತಾದ ಟ್ಯಾಗ್‌ಲೈನ್‌ನೊಂದಿಗೆ ಐಕಾನಿಕ್ ಸ್ಥಾನವನ್ನು ಪಡೆಯಿತು ಮತ್ತು ಅದರ ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಕಾರ್ಯಕ್ಷಮತೆ, ಶಾಶ್ವತ ಗುಣಮಟ್ಟ ಮತ್ತು ಅಸಾಧಾರಣ ಮೌಲ್ಯಕ್ಕಾಗಿ ಇಂದಿಗೂ ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಉಳಿದಿದೆ.
ಜೀವನದಲ್ಲಿ ಮಹತ್ವಾಕಾಂಕ್ಷೆ ಇರಿಸಿಕೊಂಡವರಿಗೆ ಅಂದುಕೊಂಡದ್ದು ದಕ್ಕಬೇಕು ಎಂಬ ರಿಲಯನ್ಸ್ ರೀಟೇಲ್ ದೃಷ್ಟಿಕೋನ ಏನಿದೆ, ಅದಕ್ಕೆ ಕಾರ್ಯತಂತ್ರವಾಗಿ ಈ ಸ್ವಾಧೀನವು ಹೊಂದಿಕೆ ಆಗುತ್ತದೆ. ಕೆಲ್ವಿನೇಟರ್‌ನ ಶ್ರೀಮಂತವಾದ ನಾವೀನ್ಯತೆ ಪರಂಪರೆಯನ್ನು ರಿಲಯನ್ಸ್ ರೀಟೇಲ್‌ನ ವಿಸ್ತಾರವಾದ ಮತ್ತು ಪ್ರಬಲವಾದ ಸಾಟಿಯಿಲ್ಲದ ರೀಟೇಲ್ ಜಾಲದೊಂದಿಗೆ ಸಂಯೋಜಿಸುವ ಮೂಲಕ, ಕಂಪನಿಯು ಗಣನೀಯ ಗ್ರಾಹಕ ಮೌಲ್ಯವನ್ನು ದೊರಕುವಂತೆ ಮಾಡಲು ಹಾಗೂ ಭಾರತದಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಪ್ರೀಮಿಯಂ ಗೃಹೋಪಯೋಗಿ ಉಪಕರಣಗಳ ಮಾರುಕಟ್ಟೆಯಲ್ಲಿ ಬೆಳವಣಿಗೆಯನ್ನು ವೇಗಗೊಳಿಸಲು ಸಜ್ಜಾಗಿದೆ. ಈಗ ಕೆಲ್ವಿನೇಟರ್ ಜೊತೆಗೆ ರಿಲಯನ್ಸ್ ರೀಟೇಲ್ ಜೊತೆಯಾಗಿರುವುದರಿಂದ ಉತ್ತಮ ಗುಣಮಟ್ಟದ, ಜಾಗತಿಕವಾಗಿ ಮಾನದಂಡಕ್ಕೆ ಅನುಗುಣವಾಗಿ ಇರುವಂಥ ಉತ್ಪನ್ನಗಳು ಪ್ರತಿ ಭಾರತೀಯ ಮನೆಗೂ ಪ್ರವೇಶಿಸುವಂಥದ್ದನ್ನು ಖಚಿತಪಡಿಸುತ್ತದೆ, ಇದರಿಂದ ದೈನಂದಿನ ಜೀವನ ವಿಸ್ತರಿಸುತ್ತದೆ.
“ತಂತ್ರಜ್ಞಾನವು ದೊರಕುವಂತೆ ಮಾಡುವ ಮೂಲಕ, ಅರ್ಥಪೂರ್ಣವಾಗಿಸಿ ಮತ್ತು ಭವಿಷ್ಯಕ್ಕೆ ಸಿದ್ಧವಾಗುವಂತೆ ಮಾಡುವ ಮೂಲಕ ಪ್ರತಿ ಭಾರತೀಯರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವುದು ನಮ್ಮ ಧ್ಯೇಯವಾಗಿದೆ,” ಎಂದು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಎಂ ಅಂಬಾನಿ ಹೇಳಿದ್ದಾರೆ . “ಕೆಲ್ವಿನೇಟರ್ ಸ್ವಾಧೀನವು ಒಂದು ಪ್ರಮುಖ ಸಮಯವನ್ನು ಗುರುತಿಸುತ್ತದೆ, ಇದು ಭಾರತೀಯ ಗ್ರಾಹಕರಿಗೆ ವಿಶ್ವಾಸಾರ್ಹ ಜಾಗತಿಕ ನಾವೀನ್ಯತೆಗಳ ನಮ್ಮ ಆಫರ್ ಅನ್ನು ಗಮನಾರ್ಹವಾಗಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಸಾಟಿಯಿಲ್ಲದ ಪ್ರಮಾಣ, ಸಮಗ್ರ ಸೇವಾ ಸಾಮರ್ಥ್ಯಗಳು ಹಾಗೂ ಮಾರುಕಟ್ಟೆ-ಪ್ರಮುಖ ವಿತರಣೆ ಜಾಲದಿಂದ ಪ್ರಬಲವಾಗಿ ಬೆಂಬಲ ಪಡೆದಿದೆ,” ಎಂದಿದ್ದಾರೆ.
ಕೆಲ್ವಿನೇಟರ್ ಈಗ ತನ್ನ ಅಸಾಧಾರಣ ಎಕೋ ಸಿಸ್ಟಮ್ ಅಲ್ಲಿ ದೃಢವಾಗಿ ಸಂಯೋಜಿಸಿರುವುದರಿಂದ ರಿಲಯನ್ಸ್ ರೀಟೇಲ್ ಭಾರತದ ಕ್ರಿಯಾತ್ಮಕ ಎಫ್ಎಂಸಿಜಿ ಮಾರುಕಟ್ಟೆಯಲ್ಲಿ ಕೆಟಗರಿ ಬೆಳವಣಿಗೆಯನ್ನು ವೇಗಗೊಳಿಸಲು, ಗ್ರಾಹಕರು ತೊಡಗಿಕೊಳ್ಳುವುದನ್ನು ಗಾಢವಾಗಿಸಲು ಹಾಗೂ ಗಣನೀಯ ದೀರ್ಘಕಾಲೀನ ಅವಕಾಶಗಳನ್ನು ತೆರೆಯಲು ಕಾರ್ಯತಂತ್ರದ ಸ್ಥಾನದಲ್ಲಿದೆ. ಈ ಕ್ರಮವು ಭಾರತೀಯ ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳನ್ನು ನಿರೀಕ್ಷಿಸುವುದಲ್ಲದೆ, ಅವುಗಳನ್ನು ಪೂರೈಸುವ ರಿಲಯನ್ಸ್ ರೀಟೇಲ್‌ನ ಮಹತ್ವಾಕಾಂಕ್ಷೆಯನ್ನು ಬಲಪಡಿಸುತ್ತದೆ. ರೀಟೇಲ್ ವ್ಯಾಪಾರ ಕ್ಷೇತ್ರದಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.
ತಳ್ಳೋಗಾಡಿ ವ್ಯಾಪಾರಿಗಳಿಗೂ ತೆರಿಗೆ ಇಲಾಖೆ ಶಾಕ್: ಹೂವಿನ ವ್ಯಾಪಾರಿಗೆ 52 ಲಕ್ಷ ಕಟ್ಟುವಂತೆ ನೋಟಿಸ್
ಸರ್ಕಾರದ ಈ ಯೋಜನೆಯಡಿ ಸಿಗಲಿದೆ 3 ಲಕ್ಷ ರೂ. ಸಾಲ : ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ