ಮುಂಬೈ : ಭಾರತದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಚಾಲನೆಯನ್ನು ನೀಡುವುದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸ್ವಾಮ್ಯದ ಹೊಸ ಘಟಕವಾದ ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಶುಕ್ರವಾರ ಅನಾವರಣಗೊಳಿಸಲಾಗಿದೆ. ಇದು ಟೆಲಿಕಾಂ, ರೀಟೇಲ್ ವ್ಯಾಪಾರ ಮತ್ತು ಇಂಧನ ವ್ಯವಹಾರಗಳ ಜೊತೆಗೆ ಉದ್ಯಮ ಸಮೂಹವನ್ನು “ಡೀಪ್-ಟೆಕ್ ಉದ್ಯಮ” ವನ್ನಾಗಿ ಮಾಡುವ ಮುಕೇಶ್ ಅಂಬಾನಿ ಅವರ ಮಹತ್ವಾಕಾಂಕ್ಷೆಗೆ ಇದು ಪುಷ್ಟಿಯನ್ನು ನೀಡುತ್ತದೆ.
ಕಂಪನಿಯು ತನ್ನ ನಾಲ್ಕು ಧ್ಯೇಯಗಳನ್ನು ಅನುಷ್ಠಾನಕ್ಕೆ ತರಲಿದೆ: ಜಾಮ್‌ನಗರದಲ್ಲಿ ಗಿಗಾವ್ಯಾಟ್-ಪ್ರಮಾಣದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಸಿದ್ಧ ಡೇಟಾ ಕೇಂದ್ರಗಳ ಸ್ಥಾಪನೆ, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಮತ್ತು ಮುಕ್ತ-ಮೂಲ (ಓಪನ್ ಸೋರ್ಸ್) ಸಮುದಾಯಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದು, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಎಐ ಸೇವೆಗಳನ್ನು ತರುವುದು ಮತ್ತು ವಿಶ್ವ ದರ್ಜೆಯ ಎಐ ಪ್ರತಿಭೆಗಳನ್ನು ಭಾರತಕ್ಕೆ ಆಕರ್ಷಿಸುವುದು.
ಇದನ್ನು ಸಾಕಾರ ಮಾಡುವುದಕ್ಕಾಗಿ ರಿಲಯನ್ಸ್ ಸಿಲಿಕಾನ್ ವ್ಯಾಲಿಯತ್ತ ಮುಖ ಮಾಡುತ್ತಿದೆ. ಸುಂದರ್ ಪಿಚೈ ನೇತೃತ್ವದ ಗೂಗಲ್‌ನೊಂದಿಗೆ “ಗಹನವಾದ, ಸಮಗ್ರ ಪಾಲುದಾರಿಕೆ”ಯನ್ನು ಅಂಬಾನಿ ಘೋಷಿಸಿದರು. “ಭಾರತದಲ್ಲಿ ಎಐ ಅವಕಾಶ ಅಗಾಧವಾಗಿದೆ. ಇದು ದೊಡ್ಡ ಉದ್ಯಮಗಳಿಂದ ಹಿಡಿದು ಚಿಕ್ಕ ದಿನಸಿ ಅಂಗಡಿಯವರೆಗೆ ಪ್ರತಿ ಉದ್ಯಮ ಮತ್ತು ಸಂಸ್ಥೆಯನ್ನು ಪರಿವರ್ತಿಸುತ್ತದೆ. ಇಂಧನ ಮತ್ತು ರೀಟೇಲ್ ವ್ಯಾಪಾರದಿಂದ ಟೆಲಿಕಾಂ ಮತ್ತು ಹಣಕಾಸು ಸೇವೆಗಳವರೆಗೆ ಎಐ ಬಳಸಿಕೊಂಡು ರಿಲಯನ್ಸ್‌ನ ಎಲ್ಲ ವ್ಯವಹಾರಗಳು ರೂಪಾಂತರಗೊಳ್ಳಲು ಸಹಾಯ ಮಾಡಲು ಗೂಗಲ್ ಮತ್ತು ರಿಲಯನ್ಸ್ ಪಾಲುದಾರಿಕೆ ಹೊಂದಿವೆ. ಈ ಎಐ ಅಳವಡಿಕೆ ಬೆಂಬಲಿಸಲು, ನಾವು ಒಟ್ಟಾಗಿ ರಿಲಯನ್ಸ್‌ಗಾಗಿ ನಿರ್ಮಿಸಲಾದ ಮತ್ತು ಸಮರ್ಪಿತವಾದ ಜಾಮ್‌ನಗರ ಕ್ಲೌಡ್ ಪ್ರದೇಶವನ್ನು ಸ್ಥಾಪಿಸುತ್ತಿದ್ದೇವೆ,” ಎಂದು ಪಿಚೈ ಹೇಳಿದರು.
ಭಾರತೀಯ ವ್ಯವಹಾರೋದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅನುಗುಣವಾಗಿ ಸವರನ್ (ಸಾರ್ವಭೌಮತೆಯ), ಉದ್ಯಮ-ಸಿದ್ಧ ಎಐ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸಲು ಮೆಟಾ ಜೊತೆ ಸಮರ್ಪಿತ ಜಂಟಿ ಉದ್ಯಮವನ್ನು ರಿಲಯನ್ಸ್ ರೂಪಿಸುತ್ತಿದೆ. ಈ ಪಾಲುದಾರಿಕೆಯು ಮೆಟಾದ ಓಪನ್-ಸೋರ್ಸ್ ಲಾಮಾ ಮಾದರಿಗಳನ್ನು ಇಂಧನ, ಟೆಲಿಕಾಂ, ರೀಟೇಲ್ ವ್ಯಾಪಾರ ಮತ್ತು ಉತ್ಪಾದನೆಯಲ್ಲಿ ರಿಲಯನ್ಸ್‌ನ ವ್ಯಾಪ್ತಿಯೊಂದಿಗೆ ಸಂಯೋಜಿಸುತ್ತದೆ. “ಭಾರತದಲ್ಲಿರುವ ಪ್ರತಿಯೊಬ್ಬರೂ ಎಐಗೆ ಸಂಪರ್ಕವನ್ನು ಹೊಂದಿದ್ದಾರೆ – ಮತ್ತು ಅಂತಿಮವಾಗಿ ಸೂಪರ್ ಇಂಟೆಲಿಜೆನ್ಸ್ ಅನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಬಯಸುತ್ತೇವೆ,” ಎಂದು ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಹೇಳಿದರು. ಒಂದು ದೇಶವಾಗಿ ಓಪನ್-ಸೋರ್ಸ್ ಎಐ ಹೇಗೆ ಸುರಕ್ಷಿತವಾಗಿ ವ್ಯಾಪಕ ಬಳಕೆ ಮಾಡಬಹುದು ಎಂಬುದಕ್ಕೆ ಈ ಉದ್ಯಮವು ಒಂದು ಮಾದರಿ ಎಂದು ಅವರು ಹೇಳಿದರು.
ರಿಲಯನ್ಸ್ ತನ್ನ ಸಾಂಪ್ರದಾಯಿಕ ತೈಲದಿಂದ ರಾಸಾಯನಿಕ ತನಕದ ವ್ಯವಹಾರದ ಬೇರುಗಳನ್ನು ಡಿಜಿಟಲ್ ಸೇವೆಗಳು ಮತ್ತು ಶುದ್ಧ ಇಂಧನದ ಕಡೆಗೆ ತೆಗೆದುಕೊಂಡು ಹೋಗುತ್ತಿರುವುದರಿಂದ ಈ ಅನಾವರಣ ಆಗಿದೆ. ಕಳೆದ ಆರು ವರ್ಷಗಳಲ್ಲಿ ಇದು ಜಿಯೋವನ್ನು ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ರೂಪಿಸಿದೆ, ರಿಲಯನ್ಸ್ ರೀಟೇಲ್ ಅನ್ನು ಮಾರುಕಟ್ಟೆ ಬಂಡವಾಳದ ಮೂಲಕ ಅಗ್ರ ಜಾಗತಿಕ ರೀಟೇಲ್ ವ್ಯಾಪಾರಿಯಾಗಿ ಪರಿವರ್ತಿಸಿದೆ ಮತ್ತು ಹಸಿರು ಇಂಧನ ಗಿಗಾ-ಕಾರ್ಖಾನೆಗಳಿಗೆ ನೂರಾರು ಕೋಟಿ ಹಣವನ್ನು ಮೀಸಲಿಟ್ಟಿದೆ. ರಿಲಯನ್ಸ್ ಇಂಟೆಲಿಜೆನ್ಸ್‌ನೊಂದಿಗೆ ಎಐ ಮುಂದಿನ ಪರಿವರ್ತನಾ ಬೆಳವಣಿಗೆಯ ಎಂಜಿನ್ ಆಗಿರುತ್ತದೆ ಎಂದು ಅಂಬಾನಿ ಹೂಡಿಕೆ ಮಾಡುತ್ತಿದ್ದಾರೆ – ಇದು ರಿಲಯನ್ಸ್‌ನ ವ್ಯವಹಾರಗಳಿಗೆ ಶಕ್ತಿ ತುಂಬುವುದಷ್ಟೇ ಅಲ್ಲದೆ, ಭಾರತದ ಆರ್ಥಿಕ ಪಥವನ್ನು ರೂಪಿಸುತ್ತದೆ.
ಹುಬ್ಬಳ್ಳಿ–ರಕ್ಸೌಲ್, ಹುಬ್ಬಳ್ಳಿ–ಭಗತ್-ಕಿ-ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ
BREAKING: UGCET, NEET 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ- ಕೆಇಎ