ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಗೈರಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯ ನಗರದ ಡಾ || ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಮಹೇಶ್ ಜೋಶಿ ಪ್ರತಿಭಟನೆಗೆ ಬೆದರಿ ಗೈರಾದರ ಎಂಬ ಅನುಮಾನ ಮೂಡಿದೆ.
ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮುಗಿದು 8 ತಿಂಗಳಾದರೂ ಮಹೇಶ ಜೋಶಿ ಅವರು ಮಂಡ್ಯಕ್ಕೆ ಒಮ್ಮೆಯೂ ಕಾಲಿಟ್ಟಿಲ್ಲ. ಸಮ್ಮೇಳನಕ್ಕೆ ಬಿಡುಗಡೆಯಾದ 30 ಕೋಟಿ ಅನುದಾನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ 2.50 ಕೋಟಿ ನೀಡಲಾಗಿತ್ತು.
ಇದರ ಖರ್ಚು-ವೆಚ್ಚದ ಲೆಕ್ಕವನ್ನು ಇದುವರೆಗೆ ಜೋಶಿಯವರು ಕೊಟಿಲ್ಲ.
ಇನ್ನು ಏಪ್ರಿಲ್‌ನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚಗಳ ವಿವರ ನೀಡುವ ಸಚಿವರ ಪತ್ರಿಕಾಗೋಷ್ಠಿಗೂ ಅವರು ಬಂದಿರಲಿಲ್ಲ. ಹೀಗಾಗಿ ಸ್ಮರಣ ಸಂಚಿಕೆ ಕಾರ್ಯಕ್ರಮಕ್ಕೆ ಬಂದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಸ್ಮರಣ ಸಂಚಿಕೆ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಪ್ರತಿಭಟನೆಗೆ ಬೆಚ್ಚಿಬಿದ್ದಿದ್ದಾರೆ ಎಂಬ ಅನುಮಾನ ಮೂಡಿದೆ.
ವರದಿ : ಗಿರೀಶ್ ರಾಜ್, ಮಂಡ್ಯ
SHOCKING: ಹೈದರಾಬಾದಿನಲ್ಲಿ ಗರ್ಭಿಣಿ ಪತ್ನಿ ಕೊಂದು, ದೇಹ ತುಂಡು ತುಂಡು ಮಾಡಿ ನದಿಗೆ ಎಸೆದ ರಾಪಿಡೋ ಚಾಲಕ
ರೈತರಿಗೆ ಗುಡ್ ನ್ಯೂಸ್: ಹೈನುಗಾರಿಕೆಗೆ ಅರ್ಜಿ ಆಹ್ವಾನ, ದೊರೆಯಲಿದೆ 1.25 ಲಕ್ಷ ಸಹಾಯಧನ