ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯವನ್ನು ಕಡೆಗಣಿಸಿದಂತ ಬಿಜೆಪಿ ಪಕ್ಷವನ್ನು ತಿರಸ್ಕರಿಸುವಂತೆ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶಿವು ಯಾದವ್, ಕಾಡುಗೊಲ್ಲ ಜನಾಂಗಕ್ಕೆ ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2014 ರಲ್ಲಿ ಕುಲಶಾಸ್ತ್ರ ಅಧ್ಯಯನ ವರದಿ ಆಧರಿಸಿ . 2014 ರಲ್ಲಿ ಕುಲಶಾಸ್ತ್ರ ಅಧ್ಯಯನ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಕಾಡುಗೊಲ್ಲನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಯಿತು ಎಂದಿದ್ದಾರೆ.
2014 ರಿಂದ 2024 ರ ತನಕ 10ವರ್ಷಗಳ ಕಾಲ ಕೇಂದ್ರದ ಬಿಜೆಪಿ ಸರ್ಕಾರ ಆರ್.ಜಿ.ಐ ಯಲ್ಲಿ ಇರುವ ವರದಿಯನ್ನು ST ಪೈಲ್ ಮುಟ್ಟಲಿಲ್ಲ. ಕಳೆದ ಎರಡು ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಕಾಡುಗೊಲ್ಲರನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಭರವಸೆ ನೀಡಿ ಜನಾಂಗದ ಬಹುತೇಕ ಮತ ಪಡೆದರು ಎಂದು ಕಿಡಿಕಾರಿದರು.
ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಮತ್ತು ವಿವಿದ ಅನೇಕ ಸಂಘಟನೆಗಳು 2014 ರಿಂದ 2024 ರ ವರೆಗೆ ಹತ್ತಾರು ಬಾರಿ ವಿವಿದ ರೀತಿಯ ಹೋರಾಟಗಳನ್ನು ರೂಪಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ಮತ್ತು ಹೋರಾಟಗಳನ್ನು ನಡೆಸಿದರು. ಒಕ್ಕೂರಿಲಿನಿಂದ ಎಸ್ ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯವನ್ನು ಮಾಡಿದರು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಕಾಡುಗೊಲ್ಲರ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ ಎಂದು ಗುಡುಗಿದರು.
ಶಿರಾ ಉಪ ಚುನಾವಣೆಯಲ್ಲಿ ಯಡಿಯೂರಪ್ಪ, ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಈಗಿನ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಸಚಿವ ನಾರಾಯಣಸ್ವಾಮಿ ಅವರು ಪ್ರತಿ ಕಾಡುಗೊಲ್ಲರ ಸಭೆ ಸಮಾರಂಭಗಳಲ್ಲಿ ಕಾಡುಗೊಲ್ಲ ಜನಾಂಗವನ್ನು ಮುಂದಿನ ಚುನಾವಣೆಯೊಳಗಾಗಿ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು ಎಂದು ಹೇಳುತ್ತಾ ಬಂದಿದ್ದರು ಎಂದು ಆರೋಪಿಸಿದರು.
ಇದುವರೆಗೂ ಕೇಂದ್ರ ಸರ್ಕಾರದಲ್ಲಿ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಕಚೇರಿಯಿಂದ ಫೈಲ್ ಒಂದಿಂಚು ಮಾತ್ರ ಕದಲಲಿಲ್ಲ. ಬಿಜೆಪಿ ನಾಯಕರು ನೀಡಿದ ಭರವಸೆಯಂತೆ ಇಂದು ಸೇರಬಹುದು ನಾಳೆ ಸೇರಬಹುದು ಎಂದು ಕಾಡುಗೊಲ್ಲರು ನಿರಂತರವಾಗಿ ಜಾತಕ ಪಕ್ಷಯಂತೆ ಕಾಯುತ್ತಾ ಇದ್ದರು. ಅಮಿತ್ ಶಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನುಮೋದನೆ ನೀಡಿದ್ದಾರೆ. ಅರ್ಜುನ್ ಮುಂಡಾ ಅವರು ಆರ್‌ಜಿಐಗೆ ಸೂಚನೆ ನೀಡಿದ್ದಾರೆ. ರಾಜ್ಯದ ಬಿಜೆಪಿ ಸಂಸದರು ಮೋದಿ, ಅಮಿತ್ ಶಾ, ಅರ್ಜುನ್ ಮುಂಡಾ ಅವರನ್ನು ಒಪ್ಪಿಸಿದ್ದಾರೆ. ಇನ್ನೇನು ಇಂದೋ ನಾಳೆ ಕಾಡುಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರಿಯೇ ಬಿಡುತ್ತಾರೆ ಎಂಬ ವಿಧವಿಧವಾದ ಹಸಿ ಸುಳ್ಳುಗಳನ್ನ ಹರಿಬಿಟ್ಟರು. ಕರ್ನಾಟಕದ ಕಾಡುಗೊಲ್ಲ ಸಮುದಾಯದ ಮೇಲೆ ಮಂಕು ಬೂದಿಯನ್ನು ಎರಚುತ್ತಾ ಬಂದರು ಎಂದು ವಾಗ್ಧಾಳಿ ನಡೆಸಿದರು.
ಸಂಸದರಾದ ಪ್ರಜ್ವಲ್ ರೇವಣ್ಣ ಸಂಸತ್ತಿನಲ್ಲಿ ಕಾಡುಗೊಲ್ಲರಿಗೆ ಎಸ್ ಟಿ ಮೀಸಲಾತಿ ನೀಡುವ ಕಡತ ಯಾವ ಹಂತದಲ್ಲಿದೆ ಎಂದು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಮತ್ತು ಅರ್ಜುನ್ ಮುಂಡಾ ಅವರು ಸಮರ್ಪಕವಾದ ಉತ್ತರ ನೀಡದೆ ಕಾಡುಗೊಲ್ಲ ಸಮೂದಾಯಕ್ಕೆ ವಂಚವೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾಡುಗೊಲ್ಲರನ್ನು ಎಸ್ ಟಿ ಗೆ ಸೇರಿಸುವ ವಿಚಾರದಲ್ಲಿ ಈ ಹಿಂದೆ ಕೋದಂಡರಾಮಯ್ಯ, ಮುದ್ದ ಹನುಮಗೌಡ ಮತ್ತು ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರು ಸಂಸತ್ತಿನಲ್ಲಿ ಕೆಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ . ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಅನೇಕ ಸಚಿವ ಶಾಸಕರು ಕೆಂದ್ರದ ಮೇಲೆ ಕಾಡುಗೊಲ್ಲನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಚರ್ಚಿಸಿ ಒತ್ತಾಯಿಸಿದ್ದಾರೆ.
ಬಿಜೆಪಿ ಮುಖಂಡರು ಕಾಡುಗೊಲ್ಲರಿಗೆ ಸುಳ್ಳು ಭರವಸೆಯನ್ನು ಹೇಳಿ, ಕಳೆದ ಹತ್ತು ವರ್ಷಗಳಿಂದ ಮತ ಪಡೆಯುತ್ತಿದ್ದಾರೆ. ದಲಿತ ಹಿಂದುಳಿದ ಶೋಷಿತ ವರ್ಗದ ಮೀಸಲಾತಿ ವಿರೋಧಿ ಕೇಂದ್ರ ಸರ್ಕಾರವು, ಯಾವುದೇ ಹೋರಾಟ ನಡೆಸದೆ ಇದ್ದರೂ ಯಾರೂ ಕೇಳದೆ ಇದ್ದರೂ ಯಾವುದೇ ಕುಲಶಾಸ್ತ್ರ ಅಧ್ಯಯನ ಇಲ್ಲದೆ ಇದ್ದರೂ ಸಹ ಮತ್ತು ಯಾವುದೇ ಆಯೋಗದ ವರದಿ ಇಲ್ಲದೆ ಇದ್ದರೂ ಸಹ ಮುಂದುವರೆದ ಸಮುದಾಯಗಳಿಗೆ ರಾತ್ರೋರಾತ್ರಿ ಶೇಕಡ 10% ಮೀಸಲಾತಿಯನ್ನು ನೀಡಿ ಆದೇಶ ಹೊರಡಿಸಿದ ಮೋದಿಯವರ ಸರ್ಕಾರ ಕಾಡುಗೊಲ್ಲರ ವಿಚಾರದಲ್ಲಿ ಕಾಡುಗೊಲ್ಲ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಖಂಡನೆಯ ಮತ್ತು ದುರಾದೃಷ್ಟಕರ ಬೆಳವಣಿಗೆ ಕಾಡುಗೊಲ್ಲರನ್ನು ನಂಬಿಸಿ ಕಾಡುಗೊಲ್ಲರ ಮತ ಪಡೆದು ಕಾಡುಗೊಲ್ಲರನ್ನು ಪರಿಶಿಷ್ಟ ಜಾತಿಗೆ ಸೇರಿಸದ ಜೊತೆಗೆ ಮಾತು ತಪ್ಪಿದ ಬಿಜೆಪಿಯನ್ನು ಈ ಸಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶಿವು ಯಾದವ್ ಕರೆ ನೀಡಿದ್ದಾರೆ.
ಬಿಜೆಪಿ ಕಚೇರಿ ಆವರಣದಲ್ಲೇ ಇ.ಡಿ, ಸಿಬಿಐಗಳಿಗೆ ಜಾಗ ನೀಡಿ – ಮಾಜಿ MLC ರಮೇಶ್ ಬಾಬು ವಾಗ್ಧಾಳಿ
BREAKING: ಏ.3ರಂದು ‘ಮಂಡ್ಯ’ದಲ್ಲೇ ಸಭೆ ಮಾಡಿ ‘ನನ್ನ ನಿರ್ಧಾರ’ ಪ್ರಕಟ – ಸುಮಲತಾ ಅಂಬರೀಶ್