ಬೆಂಗಳೂರು : ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಮಾಹಿತಿ ಸಲ್ಲಿಸುವ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಮಹತ್ವದ ಮಾಹಿತಿ ನೀಡಿದೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ವಲಯಗಳಲ್ಲಿ ಶಾಲಾ ಶಿಕ್‌ಷಣ ಇಲಾಖೆಯ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ 2023-24 ನೇ ಸಾಲಿನ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಉಲ್ಲೇಖ 03 ರ ಸರ್ಕಾರದ ಆದೇಶದಂತೆ ಉಲ್ಲೇಖ 01 ಮತ್ತು 02 ರ ಪತ್ರದಲ್ಲಿ ಈ ಕೆಳಗೆ ವಿವರಿಸಿದಂತೆ ಕ್ರಮ ಕೈಗೊಂಡು ಮಾಹಿತಿ ಒದಗಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರು ( ಆಡಳಿತ ) ಶಾಲಾ ಶಿಕ್ಷಣ ಇಲಾಖೆ ರವರಿಗೆ ತಿಳಿಸಲಾಗಿತ್ತು. ಆದರೆ ಈ ವರೆವಿಗೂ ಜಿಲ್ಲಾ ಉಪನಿರ್ದೇಶಕರ ಕಛೇರಿಯಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ. ಹಾಗಾಗಿ ಈ ಕೂಡಲೇ ಸದರಿ ಮಾಹಿತಿಯನ್ನು ತಮ್ಮ ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಉಪ ನಿರ್ದೇಶಕ ರಿಂದ ಮಾಹಿತಿಯನ್ನು ಪಡೆದುಕೊಂಡು ಕ್ರೂಡೀಕರಿಸಿ Soft copy ಮತ್ತು PDF Format ನ್ನು caocpibng.budget@gmail.com ที่ ซอค Hard Copy ಕಛೇರಿ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು. ಇಲ್ಲಿಗೆ ಈ ಕೆಳಕಂಡ ಮಾಹಿತಿಯನ್ನು ಕಳುಹಿಸಿಕೊಡಲು ತಿಳಿಸಿದೆ.
2022-23ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಒಟ್ಟಾರೆ ರೂ. 11664.00 ಲಕ್ಷಗಳ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಿ ಬಿಡುಗಡೆ ಮಾಡಲಾಗಿದೆ. ಆದರೆ, 2023-24ನೇ ಸಾಲಿಗೆ ಒಟ್ಟು ರೂ. 65.12 ಕೋಟಿಗಳ ಹೆಚ್ಚುವರಿ ಅನುದಾನವನ್ನು ಒದಗಿಸುವಂತೆ ಕೋರಲಾಗಿದೆ. ಆದ್ದರಿಂದ ವಾಸ್ತವಾಂಶಗಳ ಹಿನ್ನಲೆಯಲ್ಲಿ ಪ್ರಸ್ತಾವನೆಯನ್ನು ಮರು ಪರಿಶೀಲಿಸುವಂತೆ ಕೋರಿದೆ.
ವೈದ್ಯಕೀಯ ವೆಚ್ಚಕ್ಕಾಗಿ ಕೋರಲಾಗಿರುವ ರೂ 65.12 ಕೋಟಿಗಳ ಅನುದಾನ ಕೋರಿಕೆಯ ಜಿಲ್ಲಾ ಮತ್ತು ತಾಲ್ಲೂಕು ವಲಯಗಳ ಬೇಡಿಕೆ ಪ್ರಸ್ತಾವನೆಯ ಮಾಹಿತಿಗಳನ್ನು ಪಡೆದು, 2022-23ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿರುವ ಜಿಲ್ಲಾ ಮತ್ತು ತಾಲ್ಲೂಕು ವಲಯ ಬೇಡಿಕೆಗಳ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಇವರು ದೃಢೀಕರಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸುವುದು.
2022-23ನೇ ಸಾಲಿನಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ಬಿಡುಗಡೆ ಮಾಡಲಾಗಿರುವ ಅನುದಾನ ಮತ್ತು ಈ ಅನುದಾನಕ್ಕೆದುರಾಗಿ ವೆಚ್ಚವಾಗಿರುವ ಮಾಹಿತಿಯನ್ನು ಜಿಲ್ಲಾ/ತಾಲ್ಲೂಕುವಾರು ಮಾಹಿತಿ ಒದಗಿಸುವುದು.
ಮೇಲೆ ವಿವರಿಸಿದಂತೆ ಸರ್ಕಾರದ ಪತ್ರದಲ್ಲಿ ಕೋರಿರುವ ಮಾಹಿತಿಗೆ ಅನುಗುಣವಾಗಿ 2022-23ನೇ ಸಾಲಿನಲ್ಲಿ ಶಾಲಾ ಶಿಕ್ಷಣಕ್ಕೆಂದು ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ವಲಯಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಬಳಕೆ ಮಾಡಿಕೊಂಡ ಅನುದಾನ ಎಷ್ಟು?. 2023-24ನೇ ಸಾಲಿನಲ್ಲಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ (ಪ್ರತಿ ಲಗತ್ತಿಸಿದೆ.) 2023-24ಕ್ಕಿಂತ ಹಿಂದಿನ ವರ್ಷದ ಪ್ರಸ್ತಾವನೆಗಳೇನಾದರೂ ಇದೆಯೇ ಎಂಬ ಬಗ್ಗೆ ಖುದ್ದಾಗಿ ಪರಿಶೀಲಿಸಿ, ಈ ಪತ್ರದೊಂದಿಗೆ ಲಗತ್ತಿಸಲಾದ ನಮೂನೆ-1 ಮತ್ತು 2 ರಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರುಗಳು ಪರಿಶೀಲಿಸಿ ದೃಢೀಕರಿಸಿ ಕ್ರೂಢೀಕೃತ ಮಾಹಿತಿಯನ್ನು ಸಲ್ಲಿಸುವುದು. ನಮೂನೆ-1 ಅನ್ನು ಸಂಬಂಧಿಸಿದ ಜಿಲ್ಲಾ/ತಾಲ್ಲೂಕು ಪಂಚಾಯತ್ ವತಿಯಿಂದ ದೃಢೀಕರಿಸಿಕೊಂಡು ಮರುಟಪಾಲಿನಲ್ಲಿ ಸಲ್ಲಿಸುವುದು.