ನವದೆಹಲಿ : ದೇಶಾದ್ಯಂತ ಎಲ್ಲಾ ರೈಲ್ವೆ ಪ್ರದೇಶಗಳಲ್ಲಿ 22,000ಕ್ಕೂ ಹೆಚ್ಚು ಲೆವೆಲ್ 1 (ಗ್ರೂಪ್ ಡಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸುವ ಅಧಿಸೂಚನೆಯನ್ನು ರೈಲ್ವೆ ನೇಮಕಾತಿ ಮಂಡಳಿ (RRB) ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ, ಟ್ರ್ಯಾಕ್ ಮೇಂಟೇನರ್ (ಗ್ರೇಡ್ 4), ಪಾಯಿಂಟ್ಸ್‌ಮನ್, ಬ್ರಿಡ್ಜ್, ಟ್ರ್ಯಾಕ್ ಮೆಷಿನ್, ಲೋಕೋ ಶೆಡ್, ಎಸ್ & ಟಿ ಮತ್ತು ಇತರ ಇಲಾಖೆಗಳಲ್ಲಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 10 ನೇ ತರಗತಿ ಅಥವಾ ಐಟಿಐ ಅರ್ಹತೆ ಹೊಂದಿರುವ ಯಾವುದೇ ಅಭ್ಯರ್ಥಿಯು ಜನವರಿ 21, 2026 ರಿಂದ ಆನ್‌ಲೈನ್’ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ 10ನೇ ತರಗತಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯಸ್ಸಿನ ಮಿತಿ ಜನವರಿ 1, 2026ರಂತೆ 18 ರಿಂದ 33 ವರ್ಷಗಳ ನಡುವೆ ಇರಬೇಕು. ಈ ಅರ್ಹತೆಗಳನ್ನ ಹೊಂದಿರುವವರು ಫೆಬ್ರವರಿ 20 ರಂದು ರಾತ್ರಿ 11.59 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳ ಆಧಾರ್ ಕಾರ್ಡ್ ವಿವರಗಳನ್ನು ಬಳಸಬೇಕು.
ಆಧಾರ್‌ನಲ್ಲಿರುವ ಹೆಸರು, ಜನ್ಮ ದಿನಾಂಕ ಮತ್ತು ಫೋಟೋ 10 ನೇ ತರಗತಿ ಪ್ರಮಾಣಪತ್ರದೊಂದಿಗೆ ಹೊಂದಿಕೆಯಾಗಬೇಕು. ಈ ವರ್ಷದಿಂದ, ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆಗಾಗಿ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ, ಆನ್‌ಲೈನ್ ಅರ್ಜಿಗಳ ಪ್ರಾರಂಭದ ಮೊದಲು ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಪಡೆಯುವಂತೆ ಆರ್‌ಆರ್‌ಬಿ ಸೂಚಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 18,000 ಮೂಲ ವೇತನ ಮತ್ತು ಇತರ ರೈಲ್ವೆ ಭತ್ಯೆಗಳನ್ನು ನೀಡಲಾಗುವುದು. ಸಂಪೂರ್ಣ ಶೈಕ್ಷಣಿಕ ಅರ್ಹತೆಗಳು, ಆಯ್ಕೆ ವಿಧಾನ, ಅರ್ಜಿ ಶುಲ್ಕ ಮತ್ತು ಈ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಿಸಿದ ಇತರ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ವಿವರವಾದ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು. ಇತರ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
BREAKING : ‘ಟಾಟಾ ಸ್ಟೀಲ್, JSW ಸ್ಟೀಲ್ ಮತ್ತು SAIL’ನಿಂದ ಟ್ರಸ್ಟ್ ವಿರೋಧಿ ಕಾನೂನು ಉಲ್ಲಂಘನೆ ; ವರದಿ








