ಶಿವಮೊಗ್ಗ: ನಗರದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದಲೇ ಜಿಲ್ಲೆಯಲ್ಲಿ ಮತದಾರರು ಮತವನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ದಾಖಲೆಯ ಶೇ.58.04% ಮತದಾನವಾಗಿದೆ.
ಈ ಬಗ್ಗೆ ಜಿಲ್ಲಾ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಕೆಲವೆಡೆ ಅಷ್ಟೇ ತಾಂತ್ರಿಕ ಸಮಸ್ಯಯಿಂದ ಇವಿಎಂ ಸ್ಥಗಿತಗೊಂಡಿತ್ತು. ಅದನ್ನು ಬದಲಾಯಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದಿದೆ.
ಮಧ್ಯಾಹ್ನ 3:00 ಗಂಟೆ ವರೆಗೆ ಚಲಾವಣೆಯಾದ ಮತದಾನದ ಶೇಕಡವಾರು ವಿವರ
ಶಿವಮೊಗ್ಗ ಲೋಕಸಭಾ ಕ್ಷೇತ್ರ: 58.04%
ಒಟ್ಟು ಮತಗಳು: 1752885
ಚಲಾವಣೆ ಮತಗಳು:1014226
ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್