ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ ಅಭಿಮಾನ್ ಸ್ಟುಡಿಯೋಗೆ ನೀಡಿರುವ ಅರಣ್ಯ ಪ್ರದೇಶದ ಆದೇಶವನ್ನು ರದ್ದು ಪಡಿಸಿ, ಹಿಂಪಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದೆ. ಅಲ್ಲದೇ ಅಭಿಮಾನ್ ಸ್ಟುಡಿಯೋದ ಅರಣ್ಯ ಭೂಮಿ ಹಿಂಪಡೆಯುತ್ತಿರುವ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದೆ.
ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ ಅವರು ಪತ್ರ ಬರೆದಿದ್ದಾರೆ. ಅದರಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.22 (78-18ಗು), ಸರ್ವ ನಂ.26 (62-20ುದ ಪ್ರದೇಶವನ್ನು ತುರಹಳ್ಳಿ ಕಾಯಿ, ಅರಣ್ಯ ಪ್ರದೇಶವೆಂದು ಉಲ್ಲೇಖ(1)ರ ಪತ್ರದಲ್ಲಿ ಘೋಷಣೆ ಮಾಡಿಲಾಗಿರುತ್ತದೆ ಎಂದಿದ್ದಾರೆ.
CHO AFD-54-FGL-69, Bangalore dated: 09.04.1969 ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20ಎಕರೆ ಪ್ರದೇಶವನ್ನು ಟಿ.ಎನ್.ಬಾಲಕ್ಕ ರವರಿಗೆ ಅಭಿಮಾನ್ ಚಿತ್ರ ಸುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿರುತ್ತದೆ. ಆದಾಗ್ಯೂ ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ 20 ಎಕರೆ ಪ್ರದೇಶವನ್ನು ಅಭಿಮಾನ್ ಚಿತ್ರ ಸ್ಟುಡಿಯೋ ನಿರ್ಮಿಸುವ ಸಲುವಾಗಿ ಕಂದಾಯ ಇಲಾಖೆಗೆ ಒಪ್ಪಿಸುವ ಬಗ್ಗೆ ಆದೇಶಿಸಲಾಗಿರುತ್ತದೆ.
ಸರ್ಕಾರಿ ಆದೇಶ ಸಂಖ್ಯೆ: RD-37-CNA-9, Bangalore, dated: 21.03.1970ರಲ್ಲಿ, ಸರ್ಕಾರಿ ಅದೇಶದಲ್ಲಿ ಅಭಿಮಾನ್ ಚಿತ್ರ ಸ್ಟುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದೇಶಕ್ಕೆ ಬಳಸದಿರಲು ಸರ್ಕಾರದ ಪೂರ್ವಾನುಮತಿ ವಿನ: ಮಾರಾಟ / ಪರಭಾರ ಮಾಡದಿರಲು ಷರತ್ತು ವಿಧಿಸಿ ಅದೇಶ ನೀಡಲಾಗಿರುತ್ತದೆ. ಪರುಗಳ ಉಲ್ಲಂಘನೆ ಆದಲ್ಲಿ ಮಂಜೂರಾತಿಯನ್ನು ರದ್ದುವರಿಸಿ ಭೂಮಿಯನ್ನು ಸರ್ಕಾರಕ್ಕೆ ಹಿಂವಡೆಯಲಾಗುವುದೆಂಬುದಾಗಿ ಅದೇಶದಲ್ಲಿ. ಸ್ವಪ್ನವಾಗಿ ನಮೂದಿಸಲಾಗಿರುತ್ತದೆ.
ಟಿ.ಎನ್.ಬಾಲಕೃಷ್ಣ ರವರು ಪರಿವರ್ತನ ಶುಲ್ಕ ವಿನಾಯಿತಿ (Exemption of Conversion fees) e de OM No.B.DIS.No.LND.SR-1.2279/69-70 dated: 21.09.19700 ಸರ್ಕಾರಿ ಆದೇಶದ ಷರತ್ತಿನನ್ವಯ ವಿನಾಯಿತಿ ನೀಡಿ 5 ವರ್ಷ ಒಳಗೆ ಅಭಿಮಾನ್ ಚಿತ್ರ ಸುಡಿಯೋ ಪೂರ್ಣಗೊಳಿಸುವಂತೆ ಹಾಗೂ ಸದರಿ ಉದೇಶ ಹೊರತಾಗಿ ಯಾವುದೇ ಉದ್ದೇಶಕ್ಕೆ ಬಳಸುವುದು ಷರತ್ತಿನ ಉಲ್ಲಂಘನೆಯಾಗುತ್ತದೆ ಹಾಗೂ ಅಂತಹ ಸಂದರ್ಭದಲ್ಲಿ ಮಂಜೂರಾತಿಯು ರದ್ದಾಗಿ ಸದರಿ ಸ್ಥಳವನ್ನು ಹಿಂಪಡೆದಾಗ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ಆದೇಶಸಲ್ಪಟ್ಟಿರುತ್ತದೆ.
ಮುಂದುವರೆದು, ದಿನಾಂಕ: 21.09.1970ರ ಆದೇಶದಲ್ಲಿ ಯಾವ ಉದ್ದೇಶಕ್ಕಾಗಿ ಸದರಿ ಕಾಯ್ದಿಟ್ಟ ಅರಣ್ಯ ಪ್ರದೇಶವು ಮಂಜೂರಾತಿ ಆಗಿರುತ್ತದೆ, ಅದೇ ಉದ್ದೇಶಕ್ಕಾಗಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸುವುದು ಷರತ್ತಿನ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಸಹ ಉಲ್ಲೇಖ(2)ರ ಪತ್ರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ರವರು ಕೆಲವು ಷರತ್ತುಗಳನ್ವಯ ಟಿ.ಎನ್.ಬಾಲಕೃಷ್ಣ ಇವರ ಮಕ್ಕಳಾದ ಶ್ರೀನಿವಾಸ್ ಹಾಗೂ ಬಿ.ಗಣೇಶ್ ಇವರುಗಳಿಗೆ ಮಂಜೂರಾದ 20 ಎಕರೆ ಪ್ರಕಿ 10 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿಯನ್ನು ನೀಡಿರುತ್ತಾರೆ. ಸದರಿ ಆದೇಶವು ಸರ್ಕಾರಿ ಆದೇಶ ಸಂಖ್ಯೆ: AFD-54-FGL-69, Bangalore dated: 09.04.1969 FC 0: RD-37-GNA-69, Bangalore dated: 21.03.1970 ಮತ್ತು ದಿ: 21.09.1970ರ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ಉಲ್ಲೇಖ(2)ರ ಪತ್ರದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ಟಿ.ಎನ್.ಬಾಲಕೃಷ್ಣ ಇವರ ಮಕ್ಕಳಿಗೆ ಮಂಜೂರಾದ 20 ಎಕರ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಿ ಬಂದ ಹಣದಿಂದ ಸ್ಟುಡಿಯೋವನ್ನು ಅಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ಕೆಲವು ಷರತ್ತುಗೊಳಪಟ್ಟು ಅನುಮತಿಯನ್ನು ನೀಡಿದ್ದರು. ಅದರ ಸದರಿ ರವರು 12 ಎಕರೆ ಪ್ರದೇಶವನ್ನು ಮಾರಾಟ ಮಾಡಿರುತ್ತಾರೆ ಹಾಗೂ ಅಭಿಮಾನ್ ಚಿತ್ರ ಸ್ಟುಡಿಯೋದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಿಲ್ಲ ಹಾಗೂ ಯಥಾಸ್ಕೃತಿಯಲ್ಲಿ ಇರುತ್ತದೆ.
ಮುಂದುವರೆದು, ತಮ್ಮ ಕಛೇರಿ ಪತ್ರ ಸಂಖ್ಯೆ: ಎಲ್.ಎನ್.ಡಿ.(ಎಸ್)ಸಿಆರ್/47/03-04 ದಿನಾಂಕ: 04.04.2015ರಲ್ಲಿ ಬಿ.ಗಣೇಶ್ ಬಿನ್ ಲೇಟ್ ಟಿ.ಎನ್.ಬಾಲಕೃಷ್ಣ ಇವರಿಗೆ ಮಂಜೂರಾದ ಮೈಲಸಂದ ಗ್ರಾಮದ ಸರ್ವೆ ನಂ.26ರಲ್ಲಿ 20ಎಕರೆ ಕಾಯಿಟ್ಟ ಅರಣ್ಯ, ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ, ಕಾರ್ಯಗಳನ್ನು ನಡೆಸದ ದಿನಾಂಕ: 16.07.2003ರ ಅದೇಶದಲ್ಲಿ ವಿಧಿಸಿರುವ ಷರತ್ತುಗಳನ್ನು ಉಲಂಘಿಸಿರುವ ಕಾರಣ ಇವರಿಗೆ ತಮ್ಮ ಕಛೇರಿಯಿಂದ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ಗಣೇಶ್ ಹಾಗು ಅವರ ಸೋದರನ ಮಗನಾದ ಬಿ.ಎಸ್.ಕಾರ್ತಿಕ್ ಬಿನ್ ಲೇಟ್ ಬಿ.ಶ್ರೀನಿವಾಸ್ ರವರು ರಾಘವೇಂದ್ರ ಬಿ.ಕೆ. ರವರೊಂದಿಗೆ ಎಕರೆ ಒಂದಕ್ಕೆ ರೂ.14,37,15,000/- (ಪುತಿ Sq.Ft.ಗೆ ರೂ.3500/- ರಂತೆ ದಿನಾಂಕ: 16.08.2021ರಲ್ಲಿ ಒಂದು ನೊಂದಾಯಿತ ಮಾರಟ ಒಪ್ಪಂದ (Registered Sale Deed) o RRN-1-024-97-2021-22, stored in C.D.No.RRND857 dated: 16.08.2021 ರಂತೆ ಉಳಿದ 10ಎಕರೆ ತುರಹಳ್ಳಿ, ಕಾಯ್ದಿಟ್ಟ ಅರಣ್ಯ ಪುದೇಶವನ್ನು ಅನಧಿಕೃತವಾಗಿ ಮಾರಟ ಮಾಡುತ್ತಿದ್ದು, ಅದರಂತೆ ಮೂರನೇ ವ್ಯಾಕ್ತಿಯ ಮಾಲೀಕತ್ವವನ್ನು ಸೃಷ್ಟಿಸುತ್ತಿರುವುದು ಸ್ಪಷ್ಟವಾಗಿದ್ದು, ಇದು ಈ ಹಿಂದ 1970ರಲ್ಲಿ ದಿ:ಟಿ.ಎನ್.ಬಾಲಕೃಷ್ಣ ರವರಿಗೆ ಸದರಿ ಭೂಮಿಯನ್ನು ಮಂಜೂರು ಮಾಡುವಾಗ ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿದ್ದು, ಈ ಉಲ್ಲಂಘನೆಯಿಂದ ಸದರಿ ಮಂಜೂರಾತಿ ಆದೇಶವನ್ನು ರದ್ದುಗೊಳಿಸಿ, ಸದರಿ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆದು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಾಗಿದೆ.
ಟಿ.ಎನ್.ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಕುರಿತು ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರಲ್ಲಿ ಕೆಲವು ಷರತ್ತುಗೊಳಪಟ್ಟು 20 ಎಕರೆ ಅರಣ್ಯ ಪ್ರದೇಶವು ನೀಡಲಾಗಿರುತ್ತದೆ. ಆದರೆ ಸದರಿ ಷರತ್ತುಗಳನ್ನು ಉಲ್ಲಂಘನೆ ಮಾಡಲಾಗಿರುವುದರಿಂದ ಸದರಿ ಮಂಜೂರಾತಿ ಆದೇಶವನ್ನು ರದ್ದು ಪಡಿಸಬೇಕಾಗಿ ತಮ್ಮಲ್ಲಿ ಪತ್ರಗಳ ಮುಖಾಂತರ ಕೋರಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಸರ್ವೆ ನಂ.26ರ ಪ್ರದೇಶವು ಉಲ್ಲೇಖ(1)ರ ಸರ್ಕಾರಿ ಅದೇಶದಂತೆ ‘ತುರಹಳ್ಳಿ, ರಾಜ್ಯ ಅರಣ್ಯ ಪ್ರದೇಶ ಎಂದು ಘೋಷಣೆಯಾಗಿರುತ್ತದೆ. ಆದರೆ, ಒಂದು ಬಾರಿ ಒಂದು ಪ್ರದೇಶವನ್ನು ಅರಣ್ಯವನ್ನಾಗಿ ಕಾನೂನುಗಳಡಿಯಲ್ಲಿ ಅಧಿಸೂಚನೆ ಹೊರಡಿಸಿದ ನಂತರ ಅದನ್ನು ಅರಣ್ಯ ವಲ್ಲವೆಂದು ಯಾವುದೇ ಸರ್ಕಾರಿ ಅಧಿಸೂಚನೆಯಾಗಲಿ ಹೊರಡಿಸಿರುವುದಿಲ್ಲ, ಪ್ರಸ್ತುತ ಸದರಿ ಪುದೇಶದ Legal Status ಎಂದಿಗೂ ‘ಅರಣ್ಯ’ ವೆಂದೇ ಇರುತ್ತದೆ.
ಮುಂದುವರೆದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು WAIT PETITION (C) NO. 202 OF 1995 T.N. GODAVARMAN THIRUMALPAD VERSUS UNION OF INDIA & ORS. WITH WRIT PETITION (C) NO.301 OF 2008 ರಲ್ಲಿ ದಿನಾಂಕ: 15.05 2025ರಲ್ಲಿ, ಈ ಕೆಳಕಂಡಂತೆ ಆದೇಶಿಸಲಾಗಿರುತ್ತದೆ.
“It would thus be clear that after the 1980 FC Act was brought into effect, no State Government or any other authority, unless there is prior approval by the Central Government, could have directed any Reserved Forest or any portion thereof to cease to be under the status of “reserve” or any forest land or any portion thereof to be used for any non-forest purposes. Nor could it have assigned any forest land or any portion thereof, by way of lease or otherwise to any private person or to any authority, corporation, agency or any other organization.”
“It has been noticed that a vast stretch of the land which is notified as ‘Forest Land’ is still in possession of the Revenue Department. Such a situation creates many complexities as is evident in the present matter. The Revenue Department, despite resistance from the Forest Department, allotted the land to private individuals/institutions for non-forestry purposes. This, in turn, reduced the vital green cover. We, therefore, find that it is necessary that a direction needs to be issued to all the State Government and the Union Territories to hand over the possession of the lands which are recorded as ‘Forest Lond’ and which are in possession of the Revenue Department to the Forest Department.
ಆದುದರಿಂದ ಮೇಲೆ ಪ್ರಸ್ತಾಪಿಸಿರುವ ಕಾರಣಗಳನ್ನಯ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿನ ನಿರ್ದೇಶನಗಳನ್ನಯ ದಿವಂಗತ ಟಿ.ಎನ್.ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಕುರಿತು ಮಂಜೂರಾದ ಆದೇಶವನ್ನು ರದ್ದು ಪಡಿಸಿ ಅರಣ್ಯ ಇಲಾಖೆಯ ಹೆಸರಿಗೆ ಇಂಡೀಕರಣ ಮಾಡಬೇಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಹಾಗೂ ಸದರಿ ಪ್ರದೇಶವನ್ನು, ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್.ಜಿ ಅವರಲ್ಲಿ ಕೋರಲಾಗಿದೆ.









