ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಪ್ಲಾಸ್ಟಿಕ್ ಮನುಷ್ಯನ ಆರೋಗ್ಯಕ್ಕೆ ಹಾಗು ಪರಿಸರಕ್ಕೂ ಹಾನಿಯುಂಟ ಮಾಡುತ್ತದೆ ಎಂದು ಪ್ಲಾಸ್ಟಿಕ್‌ನ ಅನೇಕ ಕಡೆ ಬ್ಯಾನ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಪೇಪರ್ ಬಂದಿದೆ. ಅಂದರೆ ಪೇಪರ್ ಕಪ್‌ಗಳು ಬಂದಿವೆ. ಈ ಪೇಪರ್ ಕಪ್‌ನಲ್ಲಿ ಟೀ ಕಾಫಿ ಸೇವನೆ ಎಷ್ಟು ಸೇಫ್? ಎಷ್ಟು ಅಪಾಯ ಅನ್ನೋದನ್ನ ತಿಳಿದುಕೊಳ್ಳೊಣ.
ಹೌದು. ಸಂಶೋಧನೆಯೊಂದರ ಪ್ರಕಾರ ಪೇಪರ್ ಕಪ್‌ಗಳಲ್ಲಿ ಟೀ ಕಾಫಿಯಂತ ಬಿಸಿ ಪಾನೀಯಗಳ ಸೇವನೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಪೇಪರ್ ಕಪ್‌ನಲ್ಲಿ 100ಮಿಲಿ 75,000ದರದಲ್ಲಿ ಬಿಸಿ ಟೀ ಅಥವಾ ಕಾಫಿ ಸೇವಿಸಿದರೆ ಸೂಕ್ಷ್ಮಜೀವಿಯ ಹಾನಿಕಾರಕ ಪ್ಲಾಸ್ಟಿಕ್ ಕೋಶಗಳು ದೇಹಕ್ಕೆ ಪ್ರವೇಶವಾಗುತ್ತವೆ.
100ಮಿಲಿ 80 ರಿಂದ 90 ಡಿಗ್ರಿ ಸೆಂಟಿಗ್ರೇಡ್‌ಗೆ ಬಿಸಿ ಮಾಡಿದರೆ 25,000 ಮೈಕ್ರಾನ್ ಪ್ಲಾಸ್ಟಿಕ್ ಕಣಗಳು ನಮ್ಮ ದೇಹದ ಇಳಗೆ ಹೋಗುತ್ತವೆ. ಅಂದರೆ ಕ್ರೋಮಿಯಂ, ಹಾಗು ಕ್ಯಾಡ್ಮಿಯಂನಂತಹ ಹಾನಿಕಾರಕ ಲೋಹಗಳು ದೇವನ್ನು ಪ್ರವೇಶಿಸುತ್ತವೆ ಎಂದು ಅರ್ಥ.
ಪೇಪರ್ ಕಪ್‌ಗಳನ್ನು ತಯಾರಿಸುವಾಗ ಹಗುರವಾದ ಹಾಗು ಮೃದುವಾದ ಪ್ಲಾಸ್ಟಿಕ್‌ಗಳಲ್ಲಿನ ಸಾಂದ್ರತೆಯ ಪಾಲಿಥಿಲೀನ್ ಬಳಸುತ್ತಾರೆ. ಹಾಗಾಗಿ ಇದನ್ನು ಮರು ಬಳಕೆ ಮಾಡಲಾಗದು. ಒಂದು ವೇಳೆ ಮರು ಬಳಕೆ ಮಾಡಿದರೆ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು
ಬಿಸಿ ಪಾನೀಯಗಳನ್ನು ಸೇವಿಸಲು ಪ್ಲಾಸ್ಟಿಕ್ ಪೇಪರ್ ಕಪ್‌ಗಳ ಬದಲಾಗಿ ಗಾಜಿನ ಅಥವಾ ಪಿಂಗಾಣಿ ಕಪ್‌ಗಳನ್ನು ಬಳಸಿ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.
ಕೆಲ ಅನಿವಾರ್ಯದಂತಹ ಸಂದರ್ಭಗಳನ್ನು ಹೊರತುಪಡಿಸಿ ನಿತ್ಯವೂ ಹೀಗೆ ಪೇಪರ್ ಕಪ್‌ನಲ್ಲಿ ಬಿಸಿ ಪಾನೀಯಗಳನ್ನು ಸೇವಿಸಿದರೆ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗು ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುವ ಸಂಭವ ಕೂಡ ಹೆಚ್ಚಿದೆ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ.