Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch video: ಕ್ರಿಕೆಟ್ ಇತಿಹಾಸದ ವಿವಾದಾತ್ಮಕ ರನೌಟ್: ಚೆಂಡಿಲ್ಲದ ಕೈಯಿಂದ ಸ್ಟಂಪ್ ಹಾರಿಸಿದರೂ ಔಟ್ ಕೊಟ್ಟಿದ್ದೇಗೆ?

03/02/2026 8:41 AM

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

03/02/2026 8:41 AM

‘ನನ್ನ ಮಗನನ್ನು ‘ಜಿನ್’ಗಳು ಎತ್ತಿಕೊಂಡು ಹೋದವು’: ಪಾಕಿಸ್ತಾನದಲ್ಲಿ ದೆವ್ವಗಳ ವಿರುದ್ಧವೇ FIR ದಾಖಲಿಸಿದ ತಂದೆ!

03/02/2026 8:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಹಾರ ಪೋರ್ಟ್ ಫೋಲಿಯೋಕ್ಕೆ ಸಮಗ್ರ ರೂಪ ನೀಡಲು ಎಸ್ಐಎಲ್ ಬ್ರ್ಯಾಂಡ್ ಮರುಪರಿಚಯಿಸಿದ RCPL
KARNATAKA

ಆಹಾರ ಪೋರ್ಟ್ ಫೋಲಿಯೋಕ್ಕೆ ಸಮಗ್ರ ರೂಪ ನೀಡಲು ಎಸ್ಐಎಲ್ ಬ್ರ್ಯಾಂಡ್ ಮರುಪರಿಚಯಿಸಿದ RCPL

By kannadanewsnow0917/12/2025 9:38 PM

ಬೆಂಗಳೂರು : ಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್ ಸಿಪಿಎಲ್) ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಸೇರಿದ ಎಫ್ ಎಂಸಿಜಿ ಅಂಗವಾಗಿದೆ. ಮಂಗಳವಾರದಂದು ಘೋಷಣೆ ಮಾಡಿರುವ ಪ್ರಕಾರ, 75 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಆಹಾರ ಬ್ರ್ಯಾಂಡ್ ಎಸ್ಐಎಲ್ ಅನ್ನು ಮತ್ತೆ ಪ್ರಾರಂಭ ಮಾಡುವುದರ ಮೂಲಕ ಪ್ಯಾಕೇಜ್ಡ್ ಆಹಾರ ಮಾರುಕಟ್ಟೆಯಲ್ಲಿ ಮಹತ್ತರವಾದ ವಿಸ್ತರಣೆಗೆ ಮುಂದಾಗಿದೆ. ಈ ಸೆಗ್ಮೆಂಟ್ ನಲ್ಲಿ ತನ್ನ ಫ್ಲ್ಯಾಗ್ ಶಿಪ್ ಕೊಡುಗೆಯಾಗಿ ಎಸ್ಐಎಲ್ ಪುನರಾರಂಭ ಮಾಡಿದೆ. ಈ ಮೂಲಕವಾಗಿ ಆರ್ ಸಿಪಿಎಲ್ ಆಹಾರ ವರ್ಗದಲ್ಲಿ ಸಮಗ್ರವಾದ ಉತ್ಪನ್ನಗಳನ್ನು ಒದಗಿಸುವಂತೆ ಆಗಲಿದೆ. ನೂಡಲ್ಸ್, ಜಾಮ್ ಗಳು, ಕೆಚಪ್, ಸಾಸ್ ಗಳು ಸೇರಿದಂತೆ ಇನ್ನೂ ಹಲವು ಎಸ್ಐಎಲ್ ಹೊಸ ಪೋರ್ಟ್ ಫೋಲಿಯೋದ ಜೊತೆಗೆ ಶುರುವಾಗುತ್ತದೆ.

ಇಂದಿನ ದಿನಮಾನಕ್ಕೆ ತಕ್ಕಂತೆ ಹೊಸ, ಸಮಕಾಲೀನ ಹಾಗೂ ಹೊಸ ಚೈತನ್ಯದೊಂದಿಗೆ ತಲೆತಲೆಮಾರುಗಳಿಂದ ಪ್ರೀತಿ ಪಡೆದುಕೊಂಡು ಬಂದ ಬ್ರ್ಯಾಂಡ್ ಜನರೆದುರು ಬರಲಿದೆ. ಆಧುನಿಕ ಭಾರತೀಯ ಕುಟುಂಬಗಳು ನಿರೀಕ್ಷೆ ಮಾಡುವ ರುಚಿ, ಗುಣಮಟ್ಟ ಹಾಗೂ ಮೌಲ್ಯದೊಂದಿಗೆ ಸ್ವಾದವು ಮತ್ತೆ ತರಲಾಗುವುದು. ಆರ್ ಸಿಪಿಎಲ್ ಕಡೆಯಿಂದ ಪ್ರಮುಖ ಆಹಾರ ಬ್ರ್ಯಾಂಡ್ ಆಗಿ, ಎಸ್ಐಎಲ್ ಕಂಪನಿಯ ಮೊದಲ ಪ್ಯಾಕೇಜ್ಡ್ ಆಹಾರ ವಿಭಾಗದಲ್ಲಿ ಮೊದಲ ಉತ್ಪನ್ನವನ್ನು ಜನರೆದುರು ತರುತ್ತಿದೆ. ಇದರೊಂದಿಗೆ ದೃಢವಾದ ಹಾಗೂ ಭವಿಷ್ಯಕ್ಕೆ ಸಿದ್ಧವಾದ ಆಹಾರ ಪೋರ್ಟ್ ಫೋಲಿಯೋಗೆ ಅಡಿಪಾಯ ಹಾಕುತ್ತದೆ.

ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ತಲುಪಿಸಬೇಕು ಎಂಬುದು ಆರ್ ಸಿಪಿಎಲ್ ಭರವಸೆಗೆ ಬದ್ಧವಾಗಿದ್ದು, ಭಾರತೀಯ ಮನೆಗಳಿಗೆ ಆರೋಗ್ಯಕರವಾದ, ಎಲ್ಲರಿಗೂ ತಲುಪುವ ಮತ್ತು ಮೌಲ್ಯದಿಂದ ಮುನ್ನಡೆಯುವಂಥ ಆಹಾರ ಬ್ರ್ಯಾಂಡ್ ಆಗಿ ಎಸ್ಐಎಲ್ ಮರಳುತ್ತದೆ. ಭವಿಷ್ಯದ ಎಫ್ಎಂಸಿಜಿ ವ್ಯವಹಾರವನ್ನು ರೂಪಿಸುವ ಹಾಗೂ ಭಾರತದ ಹೆಸರಾಂತ ಪಾರಂಪರಿಕ ಬ್ರ್ಯಾಂಡ್ ಗಳನ್ನು ಬಲಪಡಿಸುವುದು ಹಾಗೂ ಗತವೈಭವಕ್ಕೆ ಮರಳುವಂತೆ ಮಾಡುವ ಆರ್ ಸಿಪಿಎಲ್ ದೃಷ್ಟಿಕೋನಕ್ಕೆ ಪೂರಕವಾಗಿ ಎಸ್ಐಎಲ್ ಪುನರುಜ್ಜೀವನವು ಮಹತ್ವಪೂರ್ಣ ಹೆಜ್ಜೆಯಾಗಿದೆ.

ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೇತನ್ ಮೋದಿ ಅವರು ಮಾತನಾಡಿ, “ಎಸ್ಐಎಲ್ ಪುನರಾರಂಭವು ಆರ್ ಸಿಪಿಎಲ್ ಬೆಳವಣಿಗೆಯ ಪ್ರಯಾಣದಲ್ಲಿ ಮಹತ್ವದ ಮೈಲುಗಲ್ಲನ್ನು ಪ್ರತಿನಿಧಿಸುತ್ತದೆ, ಏಕೆಂದರೆ ನಾವು ಪ್ಯಾಕೇಜ್ ಮಾಡಿದ ಆಹಾರ ಕ್ಷೇತ್ರಕ್ಕೆ ಮೊದಲ ಸಮಗ್ರ ಪ್ರವೇಶವನ್ನು ಮಾಡುತ್ತಿದ್ದೇವೆ. ಎಸ್ಐಎಲ್ ಅನ್ನು ನಮ್ಮ ಪ್ರಮುಖ ಆಹಾರ ಬ್ರಾಂಡ್ ಆಗಿ ಪರಿಚಯಿಸುವ ಮೂಲಕ ಮತ್ತು ನೂಡಲ್ಸ್, ಜಾಮ್‌ಗಳು, ಕೆಚಪ್‌ಗಳು, ಸಾಸ್‌ಗಳು ಮತ್ತು ಸ್ಪ್ರೆಡ್‌ಗಳಲ್ಲಿ ಅದನ್ನು ವಿಸ್ತರಿಸುವ ಮೂಲಕ ನಾವು ಪ್ರತಿ ಮನೆಗೂ ಬಲವಾದ ಮತ್ತು ಸಂಪರ್ಕ ಸೇತು ಆಗುವ ಆಹಾರ ಪೋರ್ಟ್‌ಫೋಲಿಯೋ ನಿರ್ಮಿಸುವ ಗುರಿ ಹೊಂದಿದ್ದೇವೆ. ಪರಂಪರೆ ಮತ್ತು ನಾವೀನ್ಯತೆಯ ಪರಿಪೂರ್ಣ ಮಿಶ್ರಣವನ್ನು ಎಸ್ಐಎಲ್ ಸಾಕಾರಗೊಳಿಸುತ್ತದೆ. ಇದು ಭಾರತದಿಂದ ಸ್ಫೂರ್ತಿ ಪಡೆದ, ಇಡೀ ಜಗತ್ತಿಗೆ ಮಾಡಲಾದ ಉತ್ತಮ-ಗುಣಮಟ್ಟದ, ಮೌಲ್ಯ-ಚಾಲಿತ ಆಹಾರ ಉತ್ಪನ್ನಗಳನ್ನು ಹೊರತರಲು ನಮಗೆ ಅನುವು ಮಾಡಿಕೊಡುತ್ತದೆ,” ಎಂದರು.

ನವೀಕರಿಸಿದ ಎಸ್ಐಎಲ್ ಶ್ರೇಣಿಯು ತಲೆಮಾರುಗಳು ತಾವು ಬೆಳೆಯುವಾಗ ಕಂಡುಂಡ ರುಚಿಗಳನ್ನು ಮರಳಿ ತರುತ್ತದೆ, ಈಗ ಇವತ್ತಿನ ಗ್ರಾಹಕರಿಗಾಗಿ ರೂಪಿಸಲಾಗಿದೆ. ನೂಡಲ್ಸ್ ಪೋರ್ಟ್‌ಫೋಲಿಯೊ ನಾಲ್ಕು ರೂಪಾಂತರಗಳನ್ನು ಒಳಗೊಂಡಿದೆ – ಮಸಾಲಾ, ತರಕಾರಿಗಳೊಂದಿಗೆ ಅಟ್ಟಾ, ಕೊರಿಯನ್ ಕೆ-ಫೈರ್ ಮತ್ತು ಚೌ-ಚೌ – ಅದರ ಬೆಲೆ 5 ರಿಂದ ಪ್ರಾರಂಭವಾಗುತ್ತಿದೆ. ಕೃತಕ ಪದಾರ್ಥಗಳು ಅಥವಾ ಸಿಂಥೆಟಿಕ್ ಬಣ್ಣಗಳನ್ನು ಬಳಸದೆ ಟೊಮೆಟೊಗಳಿಂದ ತಯಾರಿಸಿದ ಎಸ್ಐಎಲ್ ಕೆಚಪ್ 1 ರೂಪಾಯಿಯಿಂದದ ಪ್ರಾರಂಭವಾಗುತ್ತದೆ. ಈ ಪ್ಯಾಕ್‌ಗಳು ಶುದ್ಧ, ದೈನಂದಿನ ಪರಿಮಳವನ್ನು ನೀಡುತ್ತದೆ. ಎಂಟು ನಿಜವಾದ ಹಣ್ಣುಗಳು ಮತ್ತು ಶೇ 22ರಷ್ಟು ಹೆಚ್ಚಿನ ಹಣ್ಣಿನ ಅಂಶವನ್ನು ಬಳಸಿ ತಯಾರಿಸಿದ ಎಸ್ಐಎಲ್ ಮಿಶ್ರ ಹಣ್ಣಿನ ಜಾಮ್ 100 ಗ್ರಾಂ, 200 ಗ್ರಾಂ ಮತ್ತು 500 ಗ್ರಾಂ ಪ್ಯಾಕ್‌ಗಳಲ್ಲಿ ದೊರೆಯುತ್ತದೆ, ಬೆಲೆ 22ರಿಂದ ಆರಂಭವಾಗುತ್ತದೆ, ಇದು ಶ್ರೀಮಂತ, ಹಣ್ಣಿನ ರುಚಿಯನ್ನು ನೀಡುತ್ತದೆ.

75 ವರ್ಷಗಳಿಗೂ ಹೆಚ್ಚು ಕಾಲದಿಂದ ಎಸ್ಐಎಲ್ ಭಾರತೀಯ ಮನೆಗಳಿಗೆ ಸುವಾಸನೆ ಮತ್ತು ಆನಂದವನ್ನು ತಂದಿದೆ. ರಿಫ್ರೆಶ್ ಮಾಡಿದ ಪೋರ್ಟ್‌ಫೋಲಿಯೊವನ್ನು ಆಳವಾದ ಗ್ರಾಹಕ ಸಂಶೋಧನೆಯಿಂದ ಬೆಂಬಲಿಸಲಾಗುತ್ತದೆ. ಹಳೇ ನೆನಪಿನ ರುಚಿಯೊಂದಿಗೆ ಆಧುನಿಕ ಅನುಕೂಲತೆಯನ್ನು ತರಲು ನೈಸರ್ಗಿಕ, ಗುಣಮಟ್ಟದ ಪದಾರ್ಥಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಸಾಗರದಲ್ಲಿ ‘KFD ಪ್ರಯೋಗಾಲಯ’ ಸ್ಥಾಪಿಸಿ, ಅಗತ್ಯ ಸಿಬ್ಬಂದಿಗಳ ನೇಮಿಸಿ: ಸರ್ಕಾರಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ಪತ್ರ

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’, 10 ನಿಮಿಷದಲ್ಲಿ ‘ಆಂಬ್ಯುಲೆನ್ಸ್’ ಸೇವೆ ; ಕೇಂದ್ರದ ಹೊಸ ಯೋಜನೆ

Share. Facebook Twitter LinkedIn WhatsApp Email

Related Posts

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

03/02/2026 8:41 AM1 Min Read

BREAKING : ರಾಜ್ಯದ ಸರ್ಕಾರಿ ಬಸ್ ಗಳ ಮೇಲೆ ಗುಟ್ಕಾ, ಪಾನ್ ಮಸಾಲ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಆದೇಶ

03/02/2026 8:24 AM1 Min Read

ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಕೇಸ್ : ಪ್ರಮುಖ ಆರೋಪಿ ಕಿಶೋರ ಸಾಳ್ವೆ ‘SIT’ ಕಸ್ಟಡಿ ಅಂತ್ಯ

03/02/2026 7:33 AM1 Min Read
Recent News

Watch video: ಕ್ರಿಕೆಟ್ ಇತಿಹಾಸದ ವಿವಾದಾತ್ಮಕ ರನೌಟ್: ಚೆಂಡಿಲ್ಲದ ಕೈಯಿಂದ ಸ್ಟಂಪ್ ಹಾರಿಸಿದರೂ ಔಟ್ ಕೊಟ್ಟಿದ್ದೇಗೆ?

03/02/2026 8:41 AM

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

03/02/2026 8:41 AM

‘ನನ್ನ ಮಗನನ್ನು ‘ಜಿನ್’ಗಳು ಎತ್ತಿಕೊಂಡು ಹೋದವು’: ಪಾಕಿಸ್ತಾನದಲ್ಲಿ ದೆವ್ವಗಳ ವಿರುದ್ಧವೇ FIR ದಾಖಲಿಸಿದ ತಂದೆ!

03/02/2026 8:26 AM

BREAKING : ರಾಜ್ಯದ ಸರ್ಕಾರಿ ಬಸ್ ಗಳ ಮೇಲೆ ಗುಟ್ಕಾ, ಪಾನ್ ಮಸಾಲ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಆದೇಶ

03/02/2026 8:24 AM
State News
KARNATAKA

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

By kannadanewsnow0503/02/2026 8:41 AM KARNATAKA 1 Min Read

ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು , ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಚಾಲಕ ಸಾವನ್ನಪ್ಪಿರುವ…

BREAKING : ರಾಜ್ಯದ ಸರ್ಕಾರಿ ಬಸ್ ಗಳ ಮೇಲೆ ಗುಟ್ಕಾ, ಪಾನ್ ಮಸಾಲ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಆದೇಶ

03/02/2026 8:24 AM

ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಕೇಸ್ : ಪ್ರಮುಖ ಆರೋಪಿ ಕಿಶೋರ ಸಾಳ್ವೆ ‘SIT’ ಕಸ್ಟಡಿ ಅಂತ್ಯ

03/02/2026 7:33 AM

BREAKING : ಬೆಂಗಳೂರಲ್ಲಿ ಘೋರ ದುರಂತ : ಪಾರ್ಟಿ ಬಳಿಕ ಪಾಲಕರಿಗೆ ಹೆದರಿ ಕಟ್ಟಡದಿಂದ ಜಿಗಿದು ಬಾಲಕ ಸಾವು!

03/02/2026 7:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.