ನವದೆಹಲಿ : ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪೇಟಿಎಂ ಮೇಲೆ ವಿಧಿಸಿದ ನಿರ್ಬಂಧಗಳ ಬಗ್ಗೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Confederation of All India Traders) ದೇಶಾದ್ಯಂತದ ವ್ಯಾಪಾರಿಗಳಿಗೆ ಸಲಹೆ ನೀಡಿದೆ. “ಪೇಟಿಎಂ ಬಳಕೆದಾರರು ತಮ್ಮ ಹಣವನ್ನ ರಕ್ಷಿಸಲು ತಕ್ಷಣದ ಕ್ರಮಗಳನ್ನ ತೆಗೆದುಕೊಳ್ಳಬೇಕು ಮತ್ತು ಅವರ ಹಣಕಾಸು ವಹಿವಾಟುಗಳು ತೊಂದರೆ ಮುಕ್ತವಾಗಿರುವುದನ್ನ ಖಚಿತಪಡಿಸಿಕೊಳ್ಳಬೇಕು” ಎಂದಿದೆ.
CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭಾರ್ತಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ಹೆಚ್ಚಿನ ಸಂಖ್ಯೆಯ ಸಣ್ಣ ವ್ಯಾಪಾರಿಗಳು, ಮಾರಾಟಗಾರರು, ಮಹಿಳಾ ವ್ಯಾಪಾರಿಗಳು ಪೇಟಿಎಂ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಆರ್ಬಿಐ ನಿಷೇಧದಿಂದ ಈ ಜನರು ಸಮಸ್ಯೆಗಳನ್ನ ಎದುರಿಸಬಹುದು ಎಂದರು. ಹೀಗಾಗಿ ಇತರೆ ಪಾವತಿ ಅಪ್ಲಿಕೇಶನ್ ಬಳಸಬೇಕು ಎಂದರು.
ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ನಿಷೇಧಕ್ಕೆ ಪ್ರಮುಖ ಕಾರಣವೆಂದರೆ ಸರಿಯಾದ ಗುರುತಿನ ಚೀಟಿಯಿಲ್ಲದೆ ಕೋಟ್ಯಂತರ ಖಾತೆಗಳನ್ನ ರಚಿಸಿರುವುದು ಎಂದು ಭಾರ್ತಿಯಾ ಮತ್ತು ಖಂಡೇಲ್ವಾಲ್ ಹೇಳಿದ್ದಾರೆ. ಈ ಖಾತೆಗಳ ಅಡಿಯಲ್ಲಿ KYC (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಪ್ರಕ್ರಿಯೆಯು ಪೂರ್ಣಗೊಂಡಿಲ್ಲ. ಅಷ್ಟೇ ಅಲ್ಲ, ಗುರುತಿನ ಚೀಟಿ ಇಲ್ಲದೇ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ಇದರಿಂದ ಅಕ್ರಮ ಹಣ ವರ್ಗಾವಣೆಯಾಗುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಆರ್‌ಬಿಐ ನಿಷೇಧ ಹೇರಲು ಒಂದು ದೊಡ್ಡ ಕಾರಣವೆಂದರೆ, ಪೇಟಿಎಂ ಪೇಮೆಂಟ್ ಬ್ಯಾಂಕ್ ಅಡಿಯಲ್ಲಿ ಸಾವಿರಕ್ಕೂ ಹೆಚ್ಚು ಬಳಕೆದಾರರ ಖಾತೆಗಳು ಒಂದು ಪ್ಯಾನ್‌ಗೆ ಲಿಂಕ್ ಆಗಿರುವುದು. ಇದಲ್ಲದೆ, ಆರ್‌ಬಿಐ ಮತ್ತು ಲೆಕ್ಕ ಪರಿಶೋಧಕರು ನಡೆಸಿದ ತನಿಖೆಯಲ್ಲಿ ಪೇಟಿಎಂ ಬ್ಯಾಂಕ್ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ.
KKRTC ಚಾಲಕ,ಚಾಲಕ-ಕಂ-ನಿರ್ವಾಹಕ ನೇಮಕಾತಿ: ತಾತ್ಕಾಲಿಕ ಅಯ್ಕೆ ಪಟ್ಟಿ ಪ್ರಕಟ,ಆಕ್ಷೇಪಣೆ ಆಹ್ವಾನ
BIGG NEWS : ಬ್ರಾಂಡ್ ಗಾರ್ಡಿಯನ್ಶಿಪ್ ಇಂಡೆಕ್ಸ್ 2024 : ಭಾರತೀಯರಲ್ಲಿ ‘ಅಂಬಾನಿ’ಗೆ ಅಗ್ರಸ್ಥಾನ