ನವದೆಹಲಿ : ಭಾರತದ ಬ್ಯಾಂಕ್‌ಗಳ ನಿಯಂತ್ರಣ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ ₹2000ರ ಸುಮಾರು 97.26ರಷ್ಟು ಕರೆನ್ಸಿ ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮರಳಿದೆ ಎಂದು ಹೇಳಿದೆ. ಈ ವರ್ಷದ ಮೇ 19ರಂದು ಆರ್‌ಬಿಐ ₹2000 ನೋಟುಗಳನ್ನ ಚಲಾವಣೆಯಿಂದ ತೆಗೆದುಹಾಕುವುದಾಗಿ ಘೋಷಿಸಿತ್ತು. ₹2000 ನೋಟು ವಾಪಸ್ ಪಡೆಯಲು ಜನರಿಗೆ ಸುಮಾರು 4 ತಿಂಗಳ ಕಾಲಾವಕಾಶ ನೀಡಲಾಗಿತ್ತು. 2023ರ ಮೇ 19ರವರೆಗೆ ಚಲಾವಣೆಯಲ್ಲಿರುವ ₹ 2000 ನೋಟುಗಳ ಪೈಕಿ ಶೇ.97.26ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಆರ್‌ಬಿಐ ಹೇಳಿದೆ. ಈ ವರ್ಷ ಮೇ 19 ರಂದು ₹ 3.56 ಲಕ್ಷ ಕೋಟಿ ಮೌಲ್ಯದ ₹ 2000 ನೋಟುಗಳು ಚಲಾವಣೆಯಾಗಿದ್ದವು.
30 ನವೆಂಬರ್ 2020ರಂತೆ, ₹9760 ಕೋಟಿ ಮೌಲ್ಯದ ₹2000 ನೋಟುಗಳು ಮಾತ್ರ ಚಲಾವಣೆಯಲ್ಲಿ ಉಳಿದಿವೆ. ಕ್ಲೀನ್ ನೋಟು ನೀತಿಯನ್ನ ಉಲ್ಲೇಖಿಸಿ, ಈ ಸಮಯದಲ್ಲಿ ₹2000 ನೋಟು ಅಮಾನ್ಯವಾಗದಿದ್ದರೂ, 19 ಮೇ 2023ರಂದು ₹2000 ನೋಟನ್ನ ಚಲಾವಣೆಯಿಂದ ತೆಗೆದುಹಾಕುವುದಾಗಿ ಕೇಂದ್ರೀಯ ಬ್ಯಾಂಕ್ ಘೋಷಿಸಿತ್ತು.
CBSE 9 ನೇ ತರಗತಿ ಪುಸ್ತಕದಲ್ಲಿ ಡೇಟಿಂಗ್ ಮತ್ತು ಸಂಬಂಧಗಳ ಬಗ್ಗೆ ಪಾಠ: ನೆಟ್ಟಿಗರ ಮಿಶ್ರಪ್ರತಿಕ್ರಿಯೆ
‘ಈ ವಿಟಮಿನ್’ ಕೊರತೆಯಿಂದ ‘ಆಲ್ಝೈಮರ್ ಕಾಯಿಲೆ’ ಬರುತ್ತಂತೆ : ಇದನ್ನ ತಡೆಯುವುದು ಹೇಗೆ ಗೊತ್ತಾ.?
“ಇದು ವಿಕಸಿತ ಭಾರತ ಅಲ್ಲ ವಿನಾಶಕಾರಿ ಭಾರತದ ಬಜೆಟ್”: ಸಿಎಂ ಸಿದ್ದರಾಮಯ್ಯ