ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಂತೋಷ್ ಕೊಡಂಕೇರಿ ನಿರ್ದೇಶನದ `ರವಿಕೆ ಪ್ರಸಂಗ’ ಚಿತ್ರ ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಇನ್ನೇನು ರವಿಕೆ ಪ್ರಸಂಗ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲು ಕೆಲವೇ ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ಹೊತ್ತಿನಲ್ಲಿ ಪ್ರಚಾರಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿರುವ ಚಿತ್ರತಂಡ, ವಿನೂತನ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರ ಭಾಗವಾಗಿ ಚಿತ್ರತಂಡ ಇತ್ತೀಚೆಗೆ ದಾವಣಗೆರೆ ತಲುಪಿಕೊಂಡಿತ್ತು. ಅಲ್ಲಿನ ನಮ್ಮ ಸ್ವದೇಶಿ ಶೋರೂಂನಲಿ,್ಲ ಮಾಲೀಕರು ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಅರ್ಥವತ್ತಾಗಿ ಪ್ರಚಾರ ಕಾರ್ಯ ನಡೆದಿದೆ.
ದಾವಣಗೆರೆ ಭಾಗದಲ್ಲಿ ನಮ್ಮ ಸ್ವದೇಶಿ ಸಂಸ್ಥೆ ಬಲು ಪ್ರಸಿದ್ಧಿ ಪಡೆದುಕೊಂಡಿದೆ. ಸೋಲಾರ್, ಯುಪಿಎಸ್ ಮತ್ತು ನಾನಾ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಈ ಶೋರೂಂ ಗ್ರೂಪ್ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಿರುವ ಸ್ವದೇಶಿ ಉದ್ಯಮ. ಈ ಗ್ರೂಪ್ ನ ಪ್ರದೀಪ್, ಜಗನ್ನಾಥ್ ಈಶ್ವರ್ ಮತ್ತು ಸಿಬ್ಬಂದಿ ರವಿಕೆ ಪ್ರಸಂಗ ಚಿತ್ರತಂಡದೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶೋರೂಂ ಮುಖ್ಯಸ್ಥರು ಮತ್ತು ಸಿಬ್ಬಂದಿ ಅತ್ಯಂತ ಆತ್ಮೀಯತೆಯಿಂದ ಚಿತ್ರತಂಡವನ್ನು ಬರಮಾಡಿಕೊಂಡು, ನಾಯಕಿ ಗೀತಾ ಭಾರತೀ ಭಟ್ ಅವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಕೊಡಂಕೇರಿ, ಗೀತಾ ಭಾರತೀ ಭಟ್ ರವಿಕೆ ಪ್ರಸಂಗದ ಚೆಂದದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ದಾವಣಗೆರೆಯಲ್ಲಿಯೂ ರವಿಕೆ ಪ್ರಸಂಗದ ಗುಂಗು ಹತ್ತಿಕೊಂಡಿದೆ. ಇದು ಸೂಕ್ಷ್ಮ ಕಥಾ ಹಂದರವನ್ನು ಒಳಗೊಂಡಿರುವ ಅಪರೂಪದ ಸಿನಿಮಾ. ಪಾವನಾ ಸಂತೋಷ್ ಕಥೆ ಮತ್ತುಇ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಗೀತಾ ಭಟ್ ಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಈಗಾಗಲೇ ಭಿನ್ನ ಬಗೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಾ, ರವಿಕೆ ಪ್ರಸಂಗವನ್ನು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿಸುವಲ್ಲಿ ಚಿತ್ರತಂಡ ಒಂದಷ್ಟು ಯಶ ಕಂಡಿದೆ. ಅದರ ಭಾಗವಾಗಿ ಕಡೇ ಕ್ಷಣದವರೆಗೂ ಪ್ರಚಾರ ಕಾರ್ಯ ನಡೆಸಲು ಸಿನಿಮಾ ತಂಡ ಸನ್ನದ್ಧವಾಗಿದೆ.