ಬೆಂಗಳೂರು:ಕಿರುತೆರೆಯ ನಟ ರವಿಕಿರಣ್ ಅವರು ‘ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್’ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ ಕ್ಲಬ್ ಸದಸ್ಯರು ದೂರು ನೀಡಿದ್ದಾರೆ.
ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರಿಗಾಗಿ ಈ ಕ್ಲಬ್ ಇದ್ದು ಆರಂಭದಿಂದಲೂ ಕಾರ್ಯದರ್ಶಿಯಾಗಿದ್ದ ರವಿಕಿರಣ್ ಅವರ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕ್ಲಬ್ನಲ್ಲಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.
ಸರ್ಕಾರ ಕೊಟ್ಟ ಅನುದಾನದಲ್ಲಿ ಕ್ಲಬ್ ನಿರ್ಮಾಣ ಮಾಡಿದ್ದೇವೆ. ಕ್ಲಬ್ಗಾಗಿ ಸರ್ಕಾರವೇ 3 ಕೋಟಿಗೂ ಅಧಿಕ ಹಣವನ್ನು ನೀಡಿದೆ. ಕ್ಲಬ್ನಲ್ಲಿ ಕಿರುತೆರೆಯ ಸಾವಿರಾರು ಕಲಾವಿದರಿದ್ದಾರೆ.GST, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಲಯನ್ನು ರವಿಕಿರಣ್ ಪಾವತಿ ಮಾಡಿಲ್ಲ. ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ’ ಎಂದು ಸದಸ್ಯರು ಆರೋಪಿಸಿದ್ದಾರೆ.