ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ ನಿಗಮದ ಅಕ್ರಮಗಳ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ರೇಟ್ ಕಾರ್ಡ್ ಸತ್ಯ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಇವರ ಭ್ರಷ್ಟಾಚಾರ ಬರಿಗಣ್ಣಿಗೆ ಕಾಣುತ್ತದೆ ಎಂದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಚದರಡಿಗೆ 100 ರೂ. ನೀಡಬೇಕು. ಭೂ ಪರಿವರ್ತನೆಗೆ ಎಕರೆಗೆ 27 ಲಕ್ಷ ರೂ., ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ ರೂ., ಎಇ 50 ಲಕ್ಷದಿಂದ 75 ಲಕ್ಷ. ರೂ., ತಹಶಿಲ್ದಾರ್ 50 ಲಕ್ಷದಿಂದ 1 ಕೋಟಿ ರೂ. ಬೆಂಗಳೂರು ಎಸಿ 5 ಕೋಟಿ ರೂ. ಎಸಿಪಿ 1.5 ಕೋಟಿಯಿಂದ 2 ಕೋಟಿ. ಎಇ 20-25 ಲಕ್ಷ ರೂ., ಎಸಿ (ಬೆಂಗಳೂರು) 5-7 ಕೋಟಿ ರೂ., ಡಿಸಿ 1-1.5 ಕೋಟಿ ರೂ. ನೀಡಬೇಕು ಸಬ್ ರಿಜಿಸ್ಟ್ರಾರ್ ಹರಾಜು ಹೋಲ್ಸೇಲ್ ಬಿಡ್ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.