ಮುಂಬೈ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಹೋಟೆಲ್ ಒಂದರಲ್ಲಿ ಪಾರ್ಟಿ ಮಾಡಲು ಮಹಿಳೆಯರು ನಿರ್ಧರಿಸಿದ್ದರು. ಅದರಂತೆ ಮುಂಬೈನಲ್ಲಿನ ಹೋಟೆಲ್ ಒಂದಕ್ಕೆ ತೆರಳಿ ಪಾರ್ಟಿ ನಡೆಸಿದ್ದರು. ಆ ವೇಳೆಯಲ್ಲಿ ಪೋಟೆಲ್ ನವರು ಸರ್ವ್ ಮಾಡಿದಂತ ಗೋಬಿ ಮಂಚೂರಿಯಲ್ಲಿ ಇಲಿ ಮರಿ ಪತ್ತೆಯಾಗಿದ್ದನ್ನು ಕಂಡು ಶಾಕ್ ಆಗಿದ್ದಾರೆ.
ಮುಂಬೈನ ಪರ್ಪಲ್ ಬಟರ್ ಪ್ಲೈ ಹೋಟೆಲ್ ಗೆ ನಿನ್ನೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ನೇಹಿತೆಯರು ಸೇರಿದಂತೊಂ ಪಾರ್ಟಿಗೆಂದು ತೆರಳಿದ್ದರು. ವಿವಿಧ ಭಕ್ಷ್ಯಗಳನ್ನು ಆರ್ಡರ್ ಮಾಡಿದ್ದರು. ಇದರ ಜೊತೆಗೆ ಗೋಬಿ ಮಂಚೂರಿ ಕೂಡ ಆರ್ಡರ್ ನೀಡಿದ್ದರು.
ಊಟವನ್ನು ಮಾಡುತ್ತಿದ್ದಾಗ, ಮಹಿಳೆಯೊಬ್ಬರಿಗೆ ಗೋಬಿ ಮಂಚೂರಿಯಲ್ಲಿ ಸತ್ತ ಇಲಿ ಮರಿ ಪತ್ತೆಯಾಗಿದೆ. ಇದನ್ನು ಕಂಡ ಮಹಿಳೆಯರು ಶಾಕ್ ಆಗಿದ್ದಾರೆ. ಈ ಬಗ್ಗೆ ಹೋಟೆಲ್ ಮಾಲೀಕರಿಗೆ ಜ್ಯೋತಿ ಕೊಂಡೆ ಎಂಬುವರು ಪ್ರಶ್ನಿಸಿದ್ದಾರೆ. ಸರಿಯಾಗಿ ಪ್ರತಿಕ್ರಿಯಿಸದ ಕಾರಣ ಹೋಟೆಲ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ಬಳಿಕ ಹೋಟೆಲ್ ಮಾಲೀಕ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಆ ಬಳಿಕ ಜ್ಯೋತಿ ಕೊಂಡೆ ಅವರು ಮುಂಬೈನ ರಬಾಲೆ ಪೊಲೀಸ್ ಠಾಣೆಗೆ ತೆರಳಿ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಜೊತೆಗೆ ಗೋಬಿ ಮಂಚೂರಿಯ ಜೊತೆಗೆ ಸತ್ತ ಇಲಿ ಮರಿ ಸಿಕ್ಕ ಪೋಟೋ, ವೀಡಿಯೋ ಕೂಡ ದಾಖಲೆಯಾಗಿ ನೀಡಿದ್ದಾರೆ. ಈ ದೂರು ಆಧರಿಸಿ ಹೋಟೆಲ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಪ್ರವಾಸಿಗರ ಮೇಲೆ ಗ್ಯಾಂಗ್ ರೇಪ್ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!