ಹಾಸನ : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿದ್ದಂತ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿತ್ತು. ಇಂದು ಅವರು ಜೈಲಿನಿಂದ ರಿಲೀಸ್ ಆಗಿದ್ದಾರೆ. ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿದ್ದಾರೆ ಏನು ಎಂಬುದೆಲ್ಲ ಸ್ವಲ್ಪ ದಿನಗಳಲ್ಲಿ ಹೊರಬರಲಿದೆ ಎಂದು ತಿಳಿಸಿದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾನೂನನ್ನು ಗೌರವಿಸಬೇಕಾಗಿರುವುದದು ಎಲ್ಲರ ಕರ್ತವ್ಯವಾಗಿದೆ. ನಾನು ಕೂಡ ಒಬ್ಬ ವಕೀಲನಾಗಿ ನ್ಯಾಯಾಂಗದ ವ್ಯವಸ್ಥೆಗೆ ತಲೆಬಾಗಲೇಬೇಕಾಗುತ್ತದೆ.
ನನ್ನ ಮೇಲೆ ಗುರುತರವಾದದ್ದ ಆರೋಪ ಬಂದಿತ್ತು. ಹಾಗಾಗಿ ನಾನು ನ್ಯಾಯಾಂಗ ಬಂಧನದಲ್ಲಿದ್ದ ನಾನು ತನಿಖಧಿಕಾರಿಗಳಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದ್ದೇನೆ ಎಂದರು.

ಎಲ್ಲಾ ರೀತಿಯ ಆಯಾಮದ ವಿಚಾರಣೆ ಮುಗಿದಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಅದರ ಬಗ್ಗೆ ಹೆಚ್ಚಿಗೆ ಮಾತನಾಡುವುದು ಬೇಡ. ಆದರೆ ಒಂದು ಸತ್ಯಕ್ಕೆ ಜಯ ಇದೆ ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ.ಪ್ರಕರಣದ ಹಿಂದೆ ಯಾರಿದ್ದಾರೆ ಏನೂ ಎಂದು ಸ್ವಲ್ಪ ದಿನಗಳಲ್ಲಿ ಎಲ್ಲವೂ ಹೊರಬರಲಿದೆ. ಪ್ರಕರಣ ತನಿಖೆ ಹಂತದಲ್ಲಿ ಯಾವುದೇ ಹೇಳಿಕೆ ನೀಡುವುದಿಲ್ಲ.ನಮ್ಮ ಮೇಲೆ ಆರೋಪಿದ್ದಾಗ ನಾವು ಯಾರನ್ನು ದೂಷಿಸಿದರು ಪ್ರಯೋಜನವಿಲ್ಲ ಎಂದರು.

Share.
Exit mobile version