ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯವು ವಜಾಗೊಳಿಸಿದೆ. ಈ ಬೆನ್ನಲ್ಲೇ ರನ್ಯಾ ರಾವ್ ಪ್ರಕರಣದಲ್ಲೂ ಇಬ್ಬರು ಸಚಿವರ ಸೆಟಲ್ಮೆಂಟ್ ಆಗಿದೆ ಅಂತ ಶಾಸಕ ಮುನಿರತ್ನ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಸಿಪಿ ಯೋಗೇಶ್ವರ್ ಅವರದ್ದು ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಸೆಟಲ್ ಮೆಂಟ್ ಆಯ್ತು. ಅದೇ ರೀತಿಯಲ್ಲಿ ನನ್ನ ಪ್ರಕರಣದಲ್ಲೂ ಸೆಟಲ್ ಮೆಂಟ್ ಆಯ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರೇವಣ್ಣ ಅವರದ್ದು ಆಗೋಯ್ತು. ಈಗ ಇನ್ನಿಬ್ಬರ ಸಚಿವರ ಸೆಟಲ್ ಮೆಂಟ್ ಆಗೋದು ಮಾತ್ರ ಬಾಕಿ ಇದೆ. ಅದು ಕೂಡ ಸದ್ಯದಲ್ಲೇ ಗೊತ್ತಾಗಲಿದೆ ಅಂತ ಹೇಳಿದರು.
ಯಾವ ರೀತಿ ಸೆಟಲ್ ಮೆಂಟ್ ಆಗಲಿದೆ ಎಂಬುದು ಗೊತ್ತಿಲ್ಲ. ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡಬೇಕು. ನನಗೂ ಸೆಟಲ್ ಮೆಂಟ್ ಆದ ಮೇಲೆಯೇ ಅನುಭವ ಆಗಿದ್ದು. ಈಗ ರನ್ಯಾ ರಾವ್ ಕೇಸಲ್ಲೂ ಸೆಟಲ್ ಮೆಂಟ್ ಆಗಲಿದೆ ಎಂಬುದಾಗಿ ಸ್ಪೋಟಕ ಬಾಂಬ್ ಸಿಡಿಸಿದರು.
Watch Video: ಗುಜರಾತಿನಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತ: ಓರ್ವ ಮಹಿಳೆ ಸಾವು, ಮೂವರಿಗೆ ಗಾಯ
60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ: ಅರ್ಜಿ ಸಲ್ಲಿಕೆ ಹೇಗೆ? ದಾಖಲೆಗಳೇನು ಗೊತ್ತಾ?