ಬೆಂಗಳೂರು: ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ Rank ಪ್ರಕಟಿಸಿದೆ.
ಯುಜಿಸಿಇಟಿ ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ Rank ನೀಡಲಾಗಿದೆ. ಬಿಪಿಟಿ ಮತ್ತು ಎಎಚ್ಎಸ್ ಕೋರ್ಸ್ ಗಳಿಗೆ ವಿಜ್ಞಾನ ಮತ್ತು ಬಿಪಿಒ ಕೋರ್ಸ್ ಗಳ ಪ್ರವೇಶಕ್ಕೆ ಕಲಾ ಮತ್ತು ವಾಣಿಜ್ಯ ವಿಷಯಗಳಲ್ಲಿ ಪಿಯುಸಿ ಶಿಕ್ಷಣ ಮುಗಿಸಿರುವವರು ಕೂಡ ಅರ್ಹರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
#UGCET-25 #BPT, #BPO #AHS ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ #CETRank ನೀಡಲಾಗಿದೆ. UGCET-25 ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ Rank ನೀಡಲಾಗಿದೆ.
ಬಿಪಿಟಿ ಮತ್ತು ಎಎಚ್ಎಸ್ ಕೋರ್ಸ್ ಗಳಿಗೆ ವಿಜ್ಞಾನ ಮತ್ತು ಬಿಪಿಒ ಕೋರ್ಸ್ ಗಳ ಪ್ರವೇಶಕ್ಕೆ ಕಲಾ ಮತ್ತು ವಾಣಿಜ್ಯ ವಿಷಯಗಳಲ್ಲಿ ಪಿಯುಸಿ ಶಿಕ್ಷಣ…— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) June 18, 2025
ಒಂದು ಗಂಟೆಯಲ್ಲಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ
ಡಿಸಿಇಟಿ-25 ಪರೀಕ್ಷೆ ಬರೆದಿದ್ದ ಹೊರನಾಡು, ಗಡಿನಾಡು ಕನ್ನಡಿಗರ ಸಲುವಾಗಿ ಬುಧವಾರ (ಜೂ.18) ಇಲ್ಲಿನ ಕೆಇಎ ಕಚೇರಿಯಲ್ಲಿ ಪರೀಕ್ಷೆ ನಡೆದು ಒಂದು ಗಂಟೆಯಲ್ಲೇ ಫಲಿತಾಂಶ ಕೂಡ ನೀಡಲಾಗಿದೆ.
ಪರೀಕ್ಷೆ ತೆಗೆದುಕೊಂಡಿದ್ದ 27 ಅಭ್ಯರ್ಥಿಗಳ ಪೈಕಿ ಪರೀಕ್ಷೆ ಗೆ ಹಾಜರಾಗಿದ್ದು ಕೇವಲ ಏಳು ಮಂದಿ. ಅವರಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದು ಉಳಿದ ಆರು ಮಂದಿ ಅರ್ಹರಾಗಿದ್ದಾರೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಒಟ್ಟು 50 ಅಂಕಗಳ ಲಿಖಿತ ಪರೀಕ್ಷೆ ಯಲ್ಲಿ ಕನಿಷ್ಠ 12 ಅಂಕ ಪಡೆದವರು ಮಾತ್ರ ಈ ಕೋಟಾದಡಿ ಸೀಟು ಪಡೆಯಲು ಅರ್ಹರಾಗುತ್ತಾರೆ. ಆದರೆ ಏಳು ಮಂದಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ 10 ಅಂಕ ಪಡೆದು ಅನರ್ಹರಾಗಿದ್ದಾರೆ ಎಂದರು.
BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?