ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಬಹಿರಂಗವಾಗಿದ್ದು, ಕರ್ನಾಟಕ ಬಿಜೆಪಿ ಕಚೇರಿಯನ್ನು ಉಗ್ರರು ಸ್ಪೋಟಿಸುವ ಪ್ಲಾನ್ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ವಿಷಯ ಉಲ್ಲೇಖವಾಗಿದೆ.
ಹೌದು ಬಿಜೆಪಿ ಕಚೇರಿ ಸ್ಪೋಟಗೊಳಿಸುವ ಪ್ಲಾನ್ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಕಚೇರಿ ಸ್ಫೋಟೋಗೊಳಿಸಲು ಪ್ಲಾನ್ ಮಾಡಲಾಗಿತ್ತು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡೋಕು ಮುಂಚೆ ಅದೇ ದಿನ ಬಿಜೆಪಿ ಕಚೇರಿ ಸ್ಪೋಟಗೋಳಿಸಲು ಪ್ಲಾನ್ ಮಾಡಲಾಗಿದೆ ಎಂಬ ಅಂಶ ಎನ್ಐಎ ಸಲ್ಲಿಸಿದ್ದ ನಾಲ್ವರು ಆರೋಪಿಗಳ ವಿರುದ್ಧ ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಎನ್ಐಎ ಸಲ್ಲಿಸಿರುವಂತ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ಕರ್ನಾಟಕ ಬಿಜೆಪಿ ಕಚೇರಿಯನ್ನೂ ಸ್ಪೋಟಿಸಲು ಪ್ಲಾನ್ ಮಾಡಿದ್ದರು. ಆದರೇ ಅದು ವಿಫಲಗೊಂಡಿತ್ತು. ಹೀಗಾಗಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾ ಮತ್ತು ಮಾರ್ಚ್ 1 ರಂದು ಕೆಫೆಯಲ್ಲಿ ಬಾಂಬ್ ಇರಿಸಿದ ಮುಸ್ಸಾವಿರ್ ಹುಸೇನ್ ಶಾಜಿಬ್ ಅವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಕೋಲ್ಕತ್ತಾ ಬಳಿಯ ಅಡಗುತಾಣದಿಂದ ಬಂಧಿಸಿದೆ. ‘ಕರ್ನಲ್’ ಎಂಬ ಸಂಕೇತನಾಮದಿಂದ ಕರೆಯಲ್ಪಡುವ ಸ್ಫೋಟದ ಹ್ಯಾಂಡ್ಲರ್ನೊಂದಿಗೆ ತಹವಾಸ್ ನೇರ ಸಂಪರ್ಕದಲ್ಲಿದ್ದನು ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ಲಷ್ಕರ್-ಎ-ತೈಬಾ (ಎಲ್ಇಟಿ) ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಜೈಲಿನಿಂದ ಬಿಡುಗಡೆಯಾದ ಶೋಯೆಬ್ ಮಿರ್ಜಾ ಮತ್ತೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸೇರಿಕೊಂಡು ಕೆಫೆ ಸ್ಫೋಟದ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ ಎಂದು ಎನ್ಐಎ ಮತ್ತಷ್ಟು ತನಿಖೆಗಳಿಂದ ಸೂಚಿಸಿವೆ. 2018 ರಲ್ಲಿ, ಶೋಯೆಬ್ ಮಿರ್ಜಾ ಅಬ್ದುಲ್ ಮತೀನ್ ತಾಹಾ ಅವರೊಂದಿಗೆ ಸ್ನೇಹ ಬೆಳೆಸಿದರು ಮತ್ತು ಅವರನ್ನು ವಿದೇಶ ಮೂಲದ ಆನ್ಲೈನ್ ಹ್ಯಾಂಡ್ಲರ್ಗೆ ಪರಿಚಯಿಸಿದರು.