ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳಿಗೆ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಂಕಿತ ಉಗ್ರ ಮಾಜ್ ಮುನೀರ್ ಕೈವಾಡವಿರುವುದು ಖಚಿತವಾಗಿದೆ. ಮಾರ್ಚ್ ೪ ರಂದು ಅಗ್ರಹಾರ ಜೈಲಿಗೆ ಭೇಟಿ ನೀಡಿ ಮಾಜ್ ಮುನೀರ್ ನ ವಿಚಾರಣೆ ನಡೆಸಿದ್ದ ಎನ್ ಐಎ ಅಧಿಕಾರಿಗಳಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಪ್ರಕರಣದಲ್ಲಿ ಮಾಜ್ ಮುನೀರ್ ಕೈವಾಡವಿರುವುದು ಖಚಿತವಾಗಿದೆ.
ಜೈಲಿನಲ್ಲಿ ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ನೋಟ್ ಬುಕ್ ನಲ್ಲಿ ಕೆಲವು ಕೋಡ್ ವರ್ಡ್ ಗಳನ್ನು ಮುನೀರ್ ಮಾಡಿಕೊಂಡಿದ್ದು, ಡಿಕೋಡ್ ವೇಳೆ ಕೆಫೆ ಬಾಂಬ್ ಸ್ಪೋಟದ ಮಾಹಿತಿ ಲಭ್ಯವಾಗಿದೆ. ಅಗ್ರಹಾರ ಜೈಲಿನಿಂದಲೇ ಸ್ಕೆಚ್ ಹಾಕಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.