ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಪ್ರಕರಣ ಸಂಬಂಧ ಶಂಕಿತ ಆರೋಪಿಯು ಬಿಎಂಟಿಸಿಯ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸಿದಂತ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ. ಆತನ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ ಅನ್ನೋ ಮಾಹಿತಿ ಮುಂದೆ ಓದಿ.
ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಕಕ್ಕೂ ಮುನ್ನಾ, ಶಂಕಿತ ಆರೋಪಿ ಬಿಎಂಟಿಸಿಯ ವೋಲ್ವೋ ಬಸ್ಸಿನಲ್ಲಿ ಪ್ರಯಾಣ ಮಾಡಿರೋ ಮಾಹಿತಿ ಬಹಿರಂಗವಾಗಿದೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಬೆಂಗಳೂರಿನ ಡಿಪೋ-3ರಕ್ಕೆ ಸೇರಿದಂತ ಕೆಎ-57, ಎಫ್-186 ಬಸ್ಸಿನಲ್ಲಿ ಶಂಕಿತ ಆರೋಪಿ ರೂಟ್ ನಂ.500ಸಿ ನಲ್ಲಿ ಪ್ರಯಾಣಿಸಿದ್ದಾನೆ.
ಬನಶಂಕರಿಯಿಂದ ಐಟಿಪಿಎಲ್ ಮಾರ್ಗದ ನಡುವೆ ಸಂಚರಿಸುವಂತ ಈ ಬಸ್ ಸಿಲ್ಕ್ ಬೋರ್ಡ್ ಮೂಲಕ ಕೂಡ ಸಂಚರಿಸುತ್ತೆ. ಇಂತಹ ಬಿಎಂಟಿಸಿ ವೋಲ್ವೋ ಬಸ್ಸನ್ನು ಶಂಕಿತ ಬಾಂಬ್ ಬ್ಲಾಸ್ಟ್ ಆರೋಪಿ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಹತ್ತಿರೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಸಿಎಂಆರ್ ಐಟಿ ಕಾಲೇಜಿನ ಬಳಿ ಇಳಿದಿರೋ ಮಾಹಿತಿಯನ್ನು ಬಸ್ ಚಾಲಕ, ಕಂಡಕ್ಟರ್ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಸ್ ನಲ್ಲಿರುವಂತ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
‘ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ’ ಪ್ರಕರಣ ‘NIA ತನಿಖೆ’ಗೆ ವಹಿಸಿ: ಮಾಜಿ ಸಿಎಂ ‘ಬೊಮ್ಮಾಯಿ ಆಗ್ರಹ’