ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವಂತ ರಾಮೇಶ್ವರಂ ಕಫೆಯಲ್ಲಿ ಭೀಕರ ಸ್ಪೋಟ ಉಂಟಾಗಿದೆ. ಈ ಸ್ಪೋಟದಲ್ಲಿ ಒಂದೇ ಕಂಪನಿಯ ಐವರು ಸಹೋದ್ಯೋಗಿಗಳು ಗಂಭೀರವಾಗಿ ಗಾಯಗೊಂಡಿರೋದ್ದಾರೆ. ಇವರಲ್ಲಿ ಓರ್ವ ಗಾಯಾಳು ಸ್ಥಿತಿ ಗಂಭೀರಗೊಂಡಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವಂತ ರಾಮೇಶ್ವರಂ ಕಫೆಗೆ, ಮಧ್ಯಾಹ್ನದ ಊಟಕ್ಕಾಗಿ ಮೈಕ್ರೋ ಚಿಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತ ಐವರು ಸಹೋದ್ಯೋಗಿಗಳು ತೆರಳಿದ್ದರು. ಈ ವೇಳೆಯಲ್ಲಿ ಸಂಭವಿಸಿದಂತ ಭೀಕರ ಸ್ಪೋಟಕದಲ್ಲಿ ಐವರು ಸಹೋದ್ಯೋಗಿಗಳು ಗಂಭೀರವಾಗಿ ಗಾಯಗೊಂಡಿರೋದಾಗಿ ಹೇಳಲಾಗುತ್ತಿದೆ.
ಒಟ್ಟಿಗೆ ಊಟ ಮಾಡೋದಕ್ಕಾಗಿ ಕುಳಿತಿದ್ದಂತ ಸಂದರ್ಭದಲ್ಲಿ ಈ ಸ್ಪೋಟ ಸಂಭವಿಸಿದ ಕಾರಣ, ಮೈಕ್ರೋ ಚಿಪ್ ಕಂಪನಿಯ ಉದ್ಯೋಗಿಯಾಗಿರುವಂತ ಸ್ವರ್ಣ ನಾರಾಯಣಪ್ಪ, ಫಾರೂಕ್ ಹುಸೇನ್, ದೀಪಾಂಶು ಹಾಗೂ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬ್ರೂಕ್ ಫೀಲ್ಡ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸ್ವರ್ಣ ನಾರಾಯಣಪ್ಪ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಫಾರುಕ್ ಹುಸೇನ್, ದೀಪಾಂಶು ಅವರನ್ನು ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಿಬ್ಬರು ವೈದೇಹಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ ಸ್ವರ್ಣ ನಾರಾಯಣಪ್ಪ ಅವರ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme
ಉದ್ಯೋಗ ವಾರ್ತೆ: ‘KPSC’ಯಿಂದ ‘364 ಭೂಮಾಪಕರ’ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ