ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವಂತ ಎನ್ಐಎ ಇಂದು ಮತ್ತೆರಡು ವೀಡಿಯೋಗಳನ್ನು ಬಾಂಬರ್ ಬಗ್ಗೆ ಬಿಡುಗಡೆ ಮಾಡಿದೆ.
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಐಎ ತನಿಖೆ ತೀವ್ರ ಗೊಳಿಸಿದೆ. ಈ ಬೆನ್ನಲ್ಲೇ ತನಿಖೆಗೆ ಸಹಾಯವಾಗುವ ನಿಟ್ಟಿನಲ್ಲಿ, ಬಾಂಬರ್ ಸುಳಿವು ಸಿಗಲೆಂದು, ಬಾಂಬರ್ ಗೆ ಸಂಬಂಧ ಪಟ್ಟಂತೆ ಇಂದು ಮತ್ತೆರಡು ವೀಡಿಯೋವನ್ನು ರಿಲೀಸ್ ಮಾಡಿದೆ.
ಎನ್ಐಎಯಿಂದ ಇಂದು ಬಿಡುಗಡೆ ಮಾಡಿರುವಂತ ವೀಡಿಯೋದಲ್ಲಿ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್ ಬಿಎಂಟಿಸಿ ಬಸ್ ನಲ್ಲಿ ಹತ್ತಿರುವ ವೀಡಿಯೋ ಬಿಡುಗಡೆ ಮಾಡಲಾಗಿದೆ.
#WATCH | NIA releases a video of the suspect linked to the Bengaluru's Rameshwaram Cafe blast case, seeks citizens' help in ascertaining his identity
The agency asks citizens with relevant information to call them on their numbers – 08029510900, 8904241100 or email to… pic.twitter.com/icKkVLYqp7
— ANI (@ANI) March 8, 2024
ಇಲ್ಲದೇ ರಾಮೇಶ್ವರಂ ಕೆಫೆಯ ಸ್ಪೋಟದ ಆರೋಪಿ ಬಸ್ ನಿಲ್ದಾಣವೊಂದರಲ್ಲಿ ಓಡಾಡುತ್ತಿರುವ ವೀಡಿಯೋವನ್ನು ಕೂಡ ರಿಲೀಸ್ ಮಾಡಲಾಗಿದೆ. ಈ ಎರಡು ವೀಡಿಯೋಗಳನ್ನು ಆರೋಪಿ ಪತ್ತೆಗೆ ನೆರವಾಗಲೆಂದು ಎನ್ಐಎ ಬಿಡುಗಡೆ ಮಾಡಿರೋದಾಗಿ ತಿಳಿದು ಬಂದಿದೆ.
#WATCH | NIA releases a video of the suspect linked to the Bengaluru's Rameshwaram Cafe blast case, seeks citizens' help in ascertaining his identity
(Video source: NIA) pic.twitter.com/QVVJfy23ZN
— ANI (@ANI) March 8, 2024
BIG UPDATE: ‘ಕಾಂಗ್ರೆಸ್’ನಿಂದ ಕರ್ನಾಟಕದ ‘9 ಲೋಕಸಭಾ ಕ್ಷೇತ್ರ’ಗಳಿಗೆ ಟಿಕೆಟ್ ಫೈನಲ್: ಅಧಿಕೃತ ಘೋಷಣೆ ಬಾಕಿ