ಹುಬ್ಬಳ್ಳಿ: ಇಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಬಳಿಕ ಹುಬ್ಬಳ್ಳಿ-ಧಾರವಾಡದ ಮೂರು ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ಎನ್ಐಎ ಅಧಿಕಾರಿಗಳು ಮೂರು ಕಡೆ ದಾಳಿಯನ್ನು ನಡೆಸಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಂತ ಶೋಯೇಬ್ ಅಬ್ದುಲ್ ಮಿರ್ಜಾ ಎಂಬಾತನ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯ ಗೌಸಿಯಾ ಹೌಸ್ ನಲ್ಲಿದ್ದಂತ ಶೋಯೇಬ್ ಅಬ್ದುಲ್ ಮಿರ್ಜಾ ನಿವಾಸದ ಮೇಲೆ ದಾಳಿ ನಡೆಸಿ, ಎನ್ಐಎ ಅಧಿಕಾರಿಗಳಿಂದ ಮಹತ್ವದ ದಾಖಲೆಗಳ ಪತ್ತೆ ಕಾರ್ಯದಲ್ಲಿ ತೊಡಿಗಿದ್ದಾರೆ. ಪ್ರಕರಣ ಸಂಬಂಧ ಈ ಹಿಂದೆ ಒಮ್ಮೆ ಹುಬ್ಬಳ್ಳಿಗೆ ಆಗಮಿಸಿದ್ದಂತ ಎನ್ಐಎ ಅಧಿಕಾರಿಗಳು ತನಿಖೆ ಕೂಡ ಕೈಗೊಂಡಿದ್ದರು. ಇಂದು ಮತ್ತೊಮ್ಮೆ ದಾಳಿ ನಡೆಸಿದ್ದಾರೆ.
ರೈತರೇ ನಿಮ್ಮ ಖಾತೆಗೆ ‘ಬೆಳೆ ಪರಿಹಾರ’ದ ಹಣ ಬಂದಿಲ್ವ?: ಈ ಕೆಲಸ ತಪ್ಪದೇ ಮಾಡಿ, ಜಮಾ
BREAKING : ಮತ್ತೆ ವಕ್ಕರಿಸುತ್ತಾ ಮಹಾಮಾರಿ.? ದೇಶದಲ್ಲಿ ಕೊರೊನಾ ಹೊಸ ರೂಪಾಂತರ ‘KP.1, KP.2’ ಪತ್ತೆ