ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe ) ಬಾಂಬ್ ಸ್ಫೋಟ ಪ್ರಕರಣವನ್ನು ಸಿಲ್ಲಿ ಪ್ರಕರಣ ಎಂದು ಹೇಳಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅಂಥ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅವರು ಕಲಬುರಗಿಯ ಜಯದೇವ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.
ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ಲೈಂಗಿಕ ಕಿರುಕುಳ: ಹೈಕೋರ್ಟ್ ಮಹತ್ವದ ಅಭಿಪ್ರಾಯ!
ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಬಾಯ್‌ಫ್ರೆಂಡ್ ಜೊತೆಗೆ ಸೇರಿ ಮಗುವಿನ ಮೇಲೆ ತಾಯಿಯಿಂದ ಹಲ್ಲೆ!
ಇದಲ್ಲದೇ ಅವರು ಇದೇ ವೇಳೆ ನಮ್ಮ ಗುರಿ ರಾಜ್ಯದ ಅಭಿವೃದ್ಧಿ. ಇಂತಹ ಸಣ್ಣ ಘಟನೆಗೆ ನಾವು ವಿಚಲಿತರಾಗುವುದಿಲ್ಲ ಎಂದು ಹೇಳಿದರು. ಇನ್ನೂ ಈ ರೀತಿ ಕೃತ್ಯ ಪ್ರತಿ ದಿನ ನಡೆಯುವುದಿಲ್ಲವಲ್ಲ. ಬಿಗಿ ಭದ್ರತೆಯ ಸಂಸತ್ ಭವನದಲ್ಲೇ ದೊಡ್ಡ ಘಟನೆ ನಡೆದಿದೆ. ದಿಸ್ ಆರ್ ಆಲ್ ಫ್ರಿಂಜ್ ಎಲಿಮೆಂಟ್ಸ್. ಇದೊಂದು ಸಿಲ್ಲಿ ಅಂಟೆಪ್ಟ್ ಎಂದು ಅವರು ಹೇಳಿದರು. ಇನ್ನೂ ತಮ್ಮ ಮಾತು ವಿವಾದವಾಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ಬಳಿಕ ಅವರು ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಕೆಲವು ಶಕ್ತಿಗಳು ಶಾಂತಿ ಹಾಳು ಮಾಡುವ ಕೆಲಸ ಮಾಡುತ್ತಿವೆ. ಹೀಗಾಗಿ ಆ ಪ್ರಕರಣವನ್ನು ಉಲ್ಲೇಖಿಸಿ ಸಿಲ್ಲಿ ಅಂತಾ ಹೇಳಿದ್ದೆನೆ ಆದರೆ ನಾನು ಹೇಳಿರುವುದು ಹೊರತು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಉಲ್ಲೇಖಿಸಿ ಹೇಳಿಲ್ಲ ಅಂತ ಹೇಳಿದ್ದಾರೆ.