ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣದಲ್ಲಿ ಎರಡು ಕೆಮಿಕಲ್ಸ್ ಬಳಸಿರೋದು FSL ತನಿಖೆಯಲ್ಲಿ ಪತ್ತೆಯಾಗಿದೆ. ಸ್ಥಳೀಯವಾಗಿ ಸಿಗುವಂತ ಈ ಎರಡು ಕೆಮಿಕಲ್ಸ್ ಬಳಸಿಯೇ ಸ್ಪೋಟವನ್ನು ಮಾಡಿರೋದಾಗಿ ಈಗ ಬಹಿರಂಗವಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಸ್ಪೋಟ ಪ್ರಕರಣ ಸಂಬಂಧ ವಿವಿಧ ಆಯಾಮಗಳಿಂದ ಸಿಸಿಬಿ ತನಿಖೆ ನಡೆಸುತ್ತಿದೆ. ಇದರ ನಡುವೆ ಎಫ್ಎಸ್ಎಲ್ ತಜ್ಞರು ಕೂಡ ಸ್ಥಳದಲ್ಲಿ ಸಿಕ್ಕಿರುವಂತ ಸ್ಪೋಟಕ ಸಾಮಾಗ್ರಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ತನಿಖೆ ನಡೆಸುತ್ತಿದೆ.
ಇದೀಗ ರಾಮೇಶ್ವರಂ ಕೆಫೆಯಲ್ಲಿನ ಬ್ಲಾಸ್ಟ್ ನಡೆದಂತ ಸ್ಥಳದಲ್ಲಿ ಪತ್ತೆಯಾದಂತ ವಸ್ತುಗಳಲ್ಲಿ ಎರಡು ರಾಸಾಯನಿಕ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಪೊಟ್ಯಾಷಿಯಂ ನೈಟ್ರೇಟ್ ಹಾಗೂ ಹೈಡ್ರೋಜನ್ ಪಾರಾಕ್ಸೈಡ್ ಬಳಸಿ ಈ ಸ್ಪೋಟಕವನ್ನು ದುಷ್ಕರ್ಮಿಗಳು ನಡೆಸಿರೋದಾಗಿ ತಿಳಿದು ಬಂದಿದೆ.
ಈಗಾಗಲೇ ಸುಧಾರಿತ ಐಇಡಿ ಬಳಸಿ ಬಾಂಬ್ ಸ್ಪೋಟಿಸಿರೋದಾಗಿ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿತ್ತು. ಸ್ಥಳದಲ್ಲಿ ಬ್ಯಾಟರಿ, ಟೈಮರ್ ಕೂಡ ದೊರೆತಿತ್ತು. ಈಗ ಸ್ಪೋಟಕದಲ್ಲಿ ಯಾವೆಲ್ಲ ರಾಸಾಯನಿಕ ಬಳಸಲಾಗಿದೆ ಎಂಬುದಾಗಿ ಎಫ್ಎಸ್ಎಲ್ ತಂಡದ ತನಿಖೆಯಲ್ಲಿ ಪತ್ತೆಯಾಗಿದೆ.
WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್ ರೋಹಿತ್ ನಾಯಕತ್ವಕ್ಕೆ ಮೆಚ್ಚುಗೆ!