ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯಿರುವಂತ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಉಂಟಾದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಈ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ನಡೆಸುತ್ತಿರುವಂತ ಸಿಸಿಬಿಯ ಅಧಿಕಾರಿಗಳು ಧಾರವಾಡ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿಸಿವೆ.
ಅಂದಹಾಗೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪ್ರತಿಕ್ರಿಯಿಸಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಇಲ್ಲಿಯವರೆಗೆ ಪಡೆದ ವಿವಿಧನ್ನ ಸುಳಿವುಗಳ ಆಧಾರದ ಮೇಲೆ ಹಲವಾರು ತಂಡಗಳು ತನಿಖೆಯನ್ನು ನಡೆಸುತ್ತಿವೆ. ಪ್ರಕರಣದ ಸೂಕ್ಷ್ಮತೆ, ಭದ್ರತಾ ದೃಷ್ಠಿಯಿಂದ ಮಾಧ್ಯಮಗಳು ಊಹಾಪೋಹಗಳಲ್ಲಿ ತೊಡಗದಂತೆ, ಪೊಲೀಸರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
‘ರಾಮೇಶ್ವರಂ ಕೆಫೆ ಬ್ಲಾಸ್ಟ್’ ಹಿಂದೆ ‘ಬಿಜೆಪಿ’ಯವರ ಕೈವಾಡವಿದೆ: ‘ಸಚಿವ ಚಲುವರಾಯಸ್ವಾಮಿ’ ಗಂಭೀರ ಆರೋಪ