ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಐಎಯಿಂದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈಗ ಸಿಕ್ಕಿರೋ ಮಾಹಿತಿಯ ಪ್ರಕಾರ ಬಾಂಬರ್ ಟ್ರಾವೆಲ್ ಹಿಸ್ಟ್ರಿ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಅದೇನು ಅಂತ ಮುಂದೆ ಓದಿ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಸಂಬಂಧ ಆರೋಪಿಯ ಮೊದಲ ಸುಳಿವು ಸಿಕ್ಕಿದ್ದೇ ಕೆಫೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯಿಂದಾಗಿತ್ತು. ಆನಂತ್ರ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದಂತ ಟ್ರಾವೆಲ್ ಹಿಸ್ಟ್ರಿ ಬಹಿರಂಗಗೊಂಡಿತ್ತು.
ಈಗ ಬಾಂಬರ್ ಟ್ರಾವೆಲ್ ಹಿಸ್ಟರಿಯ ಮತ್ತಷ್ಟು ಸ್ಪೋಟ ಮಾಹಿತಿಗಳು ಹೊರಬಿದ್ದಿದ್ದಾವೆ. ಅದೇ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಟೋಸಿದ ಬಳಿಕ ಅಲ್ಲಿಂತ ತುಮಕೂರಿನ ಕಳ್ಳಂಬೆಳ್ಳ ಮಾರ್ಗವಾಗಿ ಬಳ್ಳಾರಿ, ಬೀದರ್ ಮೂಲಕ ಹುಮ್ನಾಬಾದ್ ಗೆ ಬಾಂಬರ್ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿರೋದಾಗಿ ತಿಳಿದು ಬಂದಿದೆ.,
ಮಾರ್ಚ್.1ರಂದು ಬೆಂಗಳೂರಿನ ಗೋರಗುಂಟೇಪಾಳ್ಯದಿಂದ ಕೆಎ 38, ಎಫ್ 1235 ಕೆಎಸ್ಆರ್ ಟಿಸಿ ಬಸ್ ಹತ್ತಿರುವಂತ ಬಾಂಬರ್ ತುಮಕೂರು ಮಾರ್ಗವಾಗಿ ಕಳ್ಳಂಬೆಳ್ಳ ಟೋಲ್ ಮೂಲಕ ಬಳ್ಳಾರಿ, ಅಲ್ಲಿಂದ ಬೀದರ್ ಮಾರ್ಗವಾಗಿ ಹುಮ್ನಾಬಾದ್ ಗೆ ಪ್ರಯಾಣ ಬೆಳೆಸಿರೋದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲೇ ಮಾರ್ಚ್.1ರಂದು ಕೆಎಸ್ಆರ್ ಟಿಸಿ ಬಸ್ ಹತ್ತಿದ್ದರಿಂದ ಆ ಮಾರ್ಗವಾಗಿ ಸಿಗುವಂತ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಳಿಗ್ಗೆ 4.30ರಿಂದ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಅಂದಹಾಗೇ ಈಗಾಗಲೇ ಬೆಂಗಳೂರಿ ಐಟಿಪಿಎಲ್ ನಿಂದ ಬಿಎಂಟಿಸಿ ಬಸ್ ಏರಿದ್ದಂತ ಬಾಂಬರ್, ಕುಂದಲಹಳ್ಳಿ ನಿಲ್ದಾಣಕ್ಕೆ ಬಂದು ಇಳಿದಿದ್ದನು. ಆ ನಂತ್ರ ರಾಮೇಶ್ವರಂ ಕೆಫೆಗೆ ತೆರಳಿ ರೆವೆ ಇಡ್ಲಿ ಸೇವಿಸಿ, ಟೈಮರ್ ಬಾಂಬ್ ಇಟ್ಟು ತೆರಳಿದ್ದನು. ಈ ಬಾಂಬ್ 5 ಸೆಕೆಂಡಲ್ಲಿ 2 ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಎಲ್ಲಾ ದೃಶ್ಯಾವಳಿ ತನಿಖೆ ನಡೆಸುತ್ತಿದ್ದಂತ ಪೊಲೀಸರಿಗೆ ಸಿಕ್ಕಿತ್ತು.
Good News : ‘ತುಟ್ಟಿಭತ್ಯೆ ಹೆಚ್ಚಳ, LPG ಸಬ್ಸಿಡಿ ಯೋಜನೆ ವಿಸ್ತರಣೆ’ಗೆ ಕೇಂದ್ರ ಸರ್ಕಾರ ಅನುಮೋದನೆ ಸಾಧ್ಯತೆ : ವರದಿ
‘ಪ್ರಧಾನಿ ಮೋದಿ’ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕಾಶ್ಮೀರದ ‘ನಜೀಮ್’ ಯಾರು.? ಹಿನ್ನಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ