ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವಂತ ರಾಮೇಶ್ವರಂ ಕಫೆ ಹೋಟೆಲ್ ನಲ್ಲಿ ನಡೆದಂತ ಭೀಕರ ಸ್ಪೋಟಕದ ಸ್ಥಳದಲ್ಲಿ ಬ್ಯಾಟರಿ, ಬ್ಯಾಗ್ ಪತ್ತೆ ಆಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಕುಂದಲಹಳ್ಳಿ ಬಳಿಯಲ್ಲಿರುವಂತ ರಾಮೇಶ್ವರಂ ಕಫೆಯಲ್ಲಿ ಇಂದು ನಿಗೂಢ ಸ್ಪೋಟ ಘಟನೆ ನಡೆದಿತ್ತು. ಸ್ಥಳಕ್ಕೆ ಆಗಮಿಸಿರುವಂತ ಬಾಂಬ್ ನಿಷ್ಕ್ರೀಟ ದಳ ಸೇರಿದಂತೆ ಶ್ವಾನ ದಳದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸ್ಪೋಟಕದಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಅವರನ್ನು ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಮೂವರು, ವೈದೇಹಿ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಮೇಶ್ವರಂ ಕಫೆ ಹೋಟೆಲ್ ನಲ್ಲಿ ಸಂಭವಿಸಿದಂತ ಭೀಕರ ಸ್ಪೋಟಕಕ್ಕೆ ಸಿಲಿಂಡರ್ ಸ್ಪೋಟಕ ಕಾರಣವಲ್ಲ. ಅದರ ಯಾವುದೇ ಕುರುಹು ಇಲ್ಲ. ಅನುಮಾನಾಸ್ಪದ ಸ್ಪೋಟಕ ವಸ್ತುಗಳಿಂದ ಸ್ಪೋಟಕ ಸಂಭವಿಸಿರೋ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಇಂಬು ನೀಡುವಂತೆ ಸ್ಪೋಟದ ಸ್ಥಳದಲ್ಲಿ ಬ್ಯಾಟರಿ, ಬ್ಯಾಗ್ ಪತ್ತೆಯಾಗಿದೆ. ಈ ಸಂಬಂಧ ಸ್ಥಳದಲ್ಲಿರುವಂತ ವೈಟ್ ಫೀಲ್ಡ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆ: ‘ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ’ ಬಿಡುಗಡೆ ಬಗ್ಗೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಮಾಹಿತಿ
ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ ಯೋಜನೆ’ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ | Gruha Jyothi Scheme