ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹುಬ್ಬಳ್ಳಿಯ ಗಲಬೆ ಕೇಸ್ ಹಿಂಪಡೆದಂತ ವಿಚಾರದ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಇಳಿದಿದೆ. ಈ ಹೊತ್ತಿನಲ್ಲೇ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಈ ಕುರಿತಂತೆ ರಮೇಶ್ ಬಾಬು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದ ವಿಧಾನ ಮಂಡಲದ ಅವಳಿ ಜವಳಿ ವಿರೋಧ ಪಕ್ಷದ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಮೇಲೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರದಂತ ಆರ್.ಅಶೋಕ್ ಮತ್ತು ವಿಧಾನ ಪರಿಷತ್ತಿನ ನಾಯಕರಾದಂತ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು 5 ಪ್ರಶ್ನೆಗಳನ್ನು ಇಡಲು ಬಯಸುತ್ತೇನೆ ಎಂದಿದ್ದಾರೆ.
ಈ ಇಬ್ಬರು ನಾಯಕರು ಸೈದಾಂತಿಕವಾಗಿ ತಮ್ಮ ವೈಫಲ್ಯವನ್ನು ಕಂಡಿದ್ದು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಮೇಲೆ, ಕಾಂಗ್ರೆಸ್ ನಾಯಕರ ಮೇಲೆ ನಿರಂತರವಾಗಿ ಆರೋಪಗಳನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕರ್ನಾಟಕದ ಯಾವುದೇ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತದ ಈ ಇಬ್ಬರು ನಾಯಕರು ತಮ್ಮ ನೇಮಕಾತಿಗೆ/ಆಯ್ಕೆಗೆ ಕಳಂಕ ಬರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬಹಳ ವಿಶೇಷವಾಗಿ ಇಬ್ಬರೂ ನಾಯಕರು ಅನೇಕ ವೈಫಲ್ಯಗಳನ್ನು ಕಂಡಿದ್ದು ಇವರ ವೈಫಲ್ಯಗಳನ್ನು ಜನರ ಮುಂದೆ ಇಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಬಯಸುತ್ತದೆ. ಬಿ ಎಸ್ ವಿಜಯೇಂದ್ರ ಅವರ ಬಾಲಭವನದ ಗಿರಾಕಿಗಳಾಗಿರುವ ಈ ಇಬ್ಬರು ನಾಯಕರು ಇಲ್ಲಿಯವರಿಗೆ ಸಮರ್ಥವಾಗಿ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವುದಿಲ್ಲ. ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ಕಂಗೆಟ್ಟು ತಮ್ಮ ಸ್ಥಾನಗಳ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮತ್ತು ನಾಯಕರ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇತಿಹಾಸ ಮತ್ತು ಹಿರಿಮೆ ಇರುವ ಕರ್ನಾಟಕ ವಿಧಾನ ಮಂಡಲ ಹಿಂದೆಂದೂ ಇಂತಹ ವೈಫಲ್ಯದ ವಿರೋಧ ಪಕ್ಷದ ನಾಯಕರ ಕಂಡಿರಲಿಲ್ಲ.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ಕೆಳಕಂಡ ಐದು ಪ್ರಶ್ನೆಗಳು :
1. 1978 ರಲ್ಲಿ BDA ಗೆ ಸೇರಿದ ಜಮೀನನ್ನು ಅಕ್ರಮವಾಗಿ ಪಡೆದುಕೊಂಡು, ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಆದ ನಂತರ ಕಾನೂನು ಕುಣಿಕೆ ತಪ್ಪಿಸಿಕೊಳ್ಳಲು ವಾಪಸ್ಸು ದಾನ ಮಾಡಿದ್ದು ಸುಳ್ಳೇ?
2. ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ಬಿಎಮ್ ಕಾವಲ್ ಗ್ರಾಮಕ್ಕೆ ಸೇರಿದ ಸುಮಾರು 2500 ಎಕರೆ ಪ್ರದೇಶವನ್ನು ಕಾನೂನು ಬಾಹಿರವಾಗಿ ತಾವು ಶಾಸಕರಾಗಿ ಹಂಚಿಕೆ ಮಾಡಿರುವುದನ್ನು ಒಪ್ಪಿಕೊಳ್ಳುವಿರಾ? ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಸರ್ಕಾರಕ್ಕೆ ಒಪ್ಪಿಗೆ ನೀಡುವಿರಾ?
3. ಚುನಾವಣಾ ಪ್ರಮಾಣ ಪತ್ರದಲ್ಲಿ ತಾವೇ ಸುಪ್ರೀಂ ಕೋರ್ಟ್ ನಲ್ಲಿ ಧಾಖಲಿಸಿರುವ ಪ್ರಕರಣವನ್ನು ಮುಚ್ಚಿಟ್ಟಿದ್ದು ಯಾವ ಕಾರಣಕ್ಕಾಗಿ?ಇದರ ವಿರುದ್ಧ ತಾವು ಕಾನೂನಾತ್ಮಕ ಪ್ರಕ್ರಿಯೆಗೆ ತಯಾರಿರುವಿರಾ?
4. ತಾವು ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರ ತಾಲೂಕಿನ ಕಂದಾಯ ಭೂಮಿಯನ್ನು / ನೂರಾರು ಕೋಟಿ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಕೆಲವು ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ತಾವು ಸಿದ್ಧರಿದ್ದೀರಾ? 5.ಕಾನೂನುಬಾಹಿರವಾಗಿ ತಮ್ಮ ಒಡೆತನಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಸರ್ಕಾರದ ಆಸ್ತಿಯನ್ನು ಪಡೆದಿದ್ದು ಇದನ್ನು ತನಗೆ ಒಳಪಡಿಸಲು ಸಿದ್ಧವಿದ್ದೀರಾ?
ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷ ಐದು ಪ್ರಶ್ನೆಗಳನ್ನು ಕೇಳಲು ಬಯಸುತ್ತದೆ
1. ತಾವು ರಾಜಕೀಯಕ್ಕೆ ಪ್ರವೇಶ ಪಡೆದ ನಂತರ ಇಲ್ಲಿಯವರೆಗೆ ಸರ್ಕಾರದಿಂದ ಎಷ್ಟು ವಸತಿ ನಿವೇಶನ, ಕೈಗಾರಿಕಾ ನಿವೇಶನ ಮತ್ತು ನಾಗರಿಕ ಸೌಲಭ್ಯದ ನಿವೇಶಗಳನ್ನು ಪಡೆದುಕೊಂಡಿರುವಿರಿ? ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಿದ್ಧರಿದ್ದೀರಾ?
2. ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವ ನೀವು ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ರೈಲ್ವೆ ಇಲಾಖೆಯ ಗ್ರಾಹಕ ಮಂಡಳಿಯ ಅಧ್ಯಕ್ಷ ಸ್ಥಾನ ಮತ್ತು ರಾಜ್ಯ ಅರಣ್ಯ ಇಲಾಖೆಯಲ್ಲಿ ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದು ಯಾರಿಂದ?
3. ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ದೇಶಕರಾಗಿ ನಿಯಮ ಬಾಹಿರವಾಗಿ ನೀವೇ ನಾಗರಿಕ ನಿವೇಶನ ಪಡೆದಿರುವುದು ಸುಳ್ಳೇ?
4. ತಾವು ಪಡೆದಿರುವ ನಾಗರಿಕ ನಿವೇಶನದಲ್ಲಿ ಬಿರಿಯಾನಿ ಸೆಂಟರ್ ನಡೆಸುತ್ತಿರುವುದು ಸುಳ್ಳೇ? ಇದರ ಕುರಿತು ತನಿಖೆ ಮಾಡಿಸಲು ಸರ್ಕಾರಕ್ಕೆ ತಾವೇ ಪತ್ರ ಬರೆಯಲು ತಯಾರಿದ್ದೀರಾ?
5. ಅಧಿಕಾರಕ್ಕಾಗಿ ತಲೆ ಮೇಲೆ ಸ್ವಾಭಿಮಾನವನ್ನು ಬಿಟ್ಟು ಚಡ್ಡಿಯನ್ನು ಹೊತ್ತು ಪ್ರದರ್ಶನ ಮಾಡಿದ ನೀವು, ಜನತಾ ದಳದಲ್ಲಿ ಜೀವರಾಜ್ ಆಳ್ವ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಶ್ರೀ ಎಸ್ ಬಂಗಾರಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ ರವರ ಆಶ್ರಯದಲ್ಲಿ ಬೆಳೆದದ್ದು ಸುಳ್ಳೇ? ತಾವು ಆತ್ಮವಲೋಕನ ಮಾಡಿಕೊಳ್ಳಲು ತಯಾರಿದ್ದೀರಾ?
ತಮ್ಮ ಹಿರಿತನವನ್ನು ಮೀರಿ ಭಾರತೀಯ ಜನತಾ ಪಕ್ಷದಲ್ಲಿ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಕರ್ನಾಟಕದ ವಿಧಾನ ಮಂಡಲಗಳಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ಗುಂಪುಗಾರಿಕೆ ನಾಯಕರು ಇವರ ನೇಮಕಾತಿಯನ್ನು ಪ್ರಶ್ನೆ ಮಾಡಿ ಇವರನ್ನು ಕಿತ್ತೊಗೆಯಲು ಒತ್ತಾಯ ಮಾಡುತ್ತಿದ್ದಾರೆ.
ಇದನ್ನು ತಮ್ಮ ಶಕ್ತಿಯ ಮೇಲೆ ಎದುರಿಸಲು ಸಾಧ್ಯವಾಗದ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ರವರು, ಕರ್ನಾಟಕದ ಜಲಂತ ಸಮಸ್ಯೆಗಳನ್ನು ಬಿಟ್ಟು ವೈಯಕ್ತಿಕ ವಿಚಾರಗಳಲ್ಲಿ ಸರ್ಕಾರವನ್ನು ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದರ ಮೂಲಕ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ ಮತ್ತು ಮುಚ್ಚಿಕೊಳ್ಳಲು ಹವಣಿಸುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಮೊದಲು ಈ ಇಬ್ಬರು ವಿರೋಧ ಪಕ್ಷದ ನಾಯಕರನ್ನು ಅವರ ಸ್ಥಾನಗಳಿಂದ ಕಿತ್ತೊಗೆದು, ಸಮರ್ಥರನ್ನು ಕರ್ನಾಟಕ ವಿಧಾನ ಮಂಡಲದಲ್ಲಿ ವಿರೋಧ ಪಕ್ಷದ ನಾಯಕನಾಗಿ ನೇಮಕ ಮಾಡಲು, ಕರ್ನಾಟಕದ ಹಿತಾಸಕ್ತಿಯ ದೃಷ್ಟಿಯಿಂದ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ. ಕರ್ನಾಟಕದ ವೈಫಲ್ಯದ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ 5 ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸಲು ಒತ್ತಾಯಿಸಿದ್ದಾರೆ.
BJP ಸರ್ಕಾರದ ವೇಳೆ ಕಾರ್ಯಕರ್ತರು, RSS, ಭಜರಂಗದಳದವರ ಮೇಲಿದ್ದ ಕೇಸ್ ವಾಪಾಸ್ ಪಡೆದಿಲ್ವ?: ಡಿಕೆಶಿ ಪ್ರಶ್ನೆ
‘ಮುಂಬೈ ಇಂಡಿಯನ್ಸ್’ ಮುಖ್ಯ ಕೋಚ್ ಆಗಿ ‘ಮಹೇಲಾ ಜಯವರ್ಧನೆ’ ಮರು ನೇಮಕ | Mahela Jayawardene